ಸಿದ್ದರಾಮಯ್ಯ, ಡಿಕೆಶಿ ರಾಜಕಾರಣ ಕೆಳಮಟ್ಟಕ್ಕೆ ಹೋಗಿದೆ: ಕೋಟಾ ಶ್ರೀನಿವಾಸ ಪೂಜಾರಿ

 ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಕೆಪಿಸಿಸಿ ಅಧ್ಯಕ್ಷ ಡಿಕೆಶಿ ರಾಜಕಾರಣ ಅತ್ಯಂತ ಕೆಳಮಟ್ಟಕ್ಕೆ ಹೋಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ನಗರಕ್ಕೆ ಭಾನುವಾರ ಭೇಟಿ‌ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ವಿರುದ್ಧ ಸಿದ್ದರಾಮಯ್ಯ ಮತ್ತು ಡಿಕೆಶಿ ಹರಿಹಾಯುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಆರೆಸ್ಸೆಸ್ ಬಗ್ಗೆ ಡಿಕೆಶಿ, ಸಿದ್ದುಗೆ ಯಾಕಿಷ್ಟು ಗಡಿಬಿಡಿ ನನಗೆ ಅರ್ಥವಾಗುತ್ತಿಲ್ಲ ನೆಹರು ಪ್ರಧಾನಿಯಾಗಿದ್ದಾಗ ಆರೆಸ್ಸೆಸ್ ಪಥಸಂಚಲನಕ್ಕೆ ಅವಕಾಶ ನೀಡಿದ್ದರು . ನೆಹರೂಗಿಂತ ಸಿದ್ದು, ಡಿಕೆಶಿಯವರೇನು ದೊಡ್ಡವರಲ್ಲ ಎಂದರು.

ಪ್ರಣಬ್ ಮುಖರ್ಜಿ ಸಂಘದ ನಾಗಪೂರ ಕಚೇರಿಗೆ ಬಂದು ಉದ್ಘಾಟನೆ ಮಾಡಿದ್ದರು. ಆರೆಸ್ಸೆಸ್ ಇದೊಂದು ರಾಷ್ಟ್ರಭಕ್ತ ಸಂಘಟನೆ ಅಂತ ಉದ್ಘಾಟಿಸಿದ್ದಾರೆ ಎಂಬುದನ್ನು ನೆನಪಿಟ್ಟು ಕೊಂಡು‌ ಮಾತನಾಡಬೇಕು ಎಂದರು.

ಆರೆಸ್ಸೆಸ್ ಬಗ್ಗೆ ಗೊತ್ತಿಲ್ಲದಿದ್ದರೆ ಇವರು ಒಮ್ಮೆ ಹಿಂದಿನ ಇತಿಹಾಸ ತಿಳಿದುಕೊಳ್ಳಬೇಕು . ಚಡ್ಡಿ ಸುಡುವ ವಿಚಾರದಲ್ಲಿ ಇವರಿಗೆ ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ ಎಂದರು.

ಆರೆಸ್ಸೆಸ್ ನ ಸೈದ್ದಾಂತಿಕ ವಿಚಾರದಲ್ಲಿ ಅವರ ಉಡುಪು, ಸಮವಸ್ತ್ರ ಸುಡುತ್ತೇವೆ ಎನ್ನುತ್ತಿದ್ದಾರೆ.ಅವರೇನು ಮಾಡಿದ್ರೂ ಪ್ರತಿಕ್ರಿಯೆ ನೀಡುವಷ್ಟು ಶಕ್ತಿ ಬಿಜೆಪಿ ಮತ್ತು ಆರೆಸ್ಸೆಸ್ ಗೆ ಇದೆ ಎಂದರು.

Sneha Gowda

Recent Posts

ಪರೀಕ್ಷೆ ಫಲಿತಾಂಶಕ್ಕೆ ಹೆದರಿ ನಾಪತ್ತೆಯಾದ ವಿದ್ಯಾರ್ಥಿ : ಪೋಷಕರ ಹುಡುಕಾಟ

ಇಂದು ರಾಜ್ಯದೆಲ್ಲಡೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಬಿಡುಗಡೆಯಾದ ಹಿನ್ನಲೆ ವಿದ್ಯಾರ್ಥಿನೋರ್ವ ಪರೀಕ್ಷೆ ಫಲಿತಾಂಶಕ್ಕೆ ಭಯಪಟ್ಟು ನಾಪತ್ತೆಯಾಗಿದ್ದಾನೆ. ಘಟನೆ ಬೆಂ.ಗ್ರಾಮಾಂತರ ಜಿಲ್ಲೆ…

13 mins ago

ಮಧ್ಯರಾತ್ರಿ ಸ್ನೇಹಿತರ ಎಣ್ಣೆ ಪಾರ್ಟಿ : ಬಾಟಲಿಯಿಂದ ಹೊಡೆದು ಓರ್ವನ ಕೊಲೆ

ಬಾಟಲಿಯಿಂದ ಹೊಡೆದು ಯುವಕನೋರ್ವನ ಕೊಲೆ ಮಾಡಿರುವ ಘಟನೆ ಮುಂಡರಗಿ ತಾಲೂಕಿನ ಕೆಎಚ್​ಬಿ ಹೊಸ ಕಾಲೊನಿಯಲ್ಲಿ ನಡೆದಿದೆ.ಕೊಪ್ಪಳದ ಹೈದರ್ ತಾಂಡಾದ ನಿವಾಸಿ…

30 mins ago

ಪಾಕ್ ಬಂದರಿನಲ್ಲಿ ಉಗ್ರರ ದಾಳಿ; 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಗ್ವಾದರ್​ನಲ್ಲಿ ಉಗ್ರ ದಾಳಿ ನಡೆದಿದ್ದು 7 ಕಾರ್ಮಿಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

46 mins ago

ಬೋಯಿಂಗ್ ನ್ಯಾಷನಲ್ ಏರೋ ಮಾಡೆಲಿಂಗ್ ಸ್ಪರ್ಧೆ: ಎನ್ಎಂಎಎಂ ಇನ್ಸ್ಟಿಟ್ಯೂಟ್‌ಗೆ ಪ್ರಥಮ

ಭಾರತದ 855 ಸಂಸ್ಥೆಗಳ 2,350 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಿದ ಒಂಬತ್ತನೇ ವಾರ್ಷಿಕ ಬೋಯಿಂಗ್ ರಾಷ್ಟ್ರೀಯ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ…

48 mins ago

ಏರ್‌ ಇಂಡಿಯಾ 30 ಸಿಬ್ಬಂದಿಗಳ ವಜಾ : 74 ವಿಮಾನಗಳ ಹಾರಾಟ ರದ್ದು

ಸಾಮೂಹಿಕ ಅನಾರೋಗ್ಯದ ರಜೆ ತೆಗೆದುಕೊಂಡ ಏರ್‌ ಇಂಡಿಯಾದ 30 ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಬುಧವಾರ (ಮೇ 9)ದಿಂದ ಸುಮಾರು 300 ಸಿಬ್ಬಂದಿ…

1 hour ago

ಎಸ್​ಎಸ್​ಎಲ್​​​ಸಿ ಫಲಿತಾಂಶ; ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಬೆಳ್ತಂಗಡಿ ವಿದ್ಯಾರ್ಥಿ

2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇದೀಗ ಪ್ರಕಟವಾಗಿದ್ದು, ಶೇ 73.4 ಮಂದಿ ತೇರ್ಗಡೆಯಾಗಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು…

1 hour ago