ಬೆಳಗಾವಿ: ಮನೆಗೆ ಕನ್ನ ಹಾಕಲು ಕಳ್ಳರು ಬಂದರೂ ಎಂದು ತಪ್ಪಿಸಿಕೊಳ್ಳಲು ಹೋಗಿ ಮಹಿಳೆ ಕೊಳ್ಳದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ಶಿಂದೋಳ್ಳಿ ಗ್ರಾಮದಲ್ಲಿ ನಡೆದಿದೆ.
ಭರಮಕ್ಕಾ ಪೂಜಾರಿ ಸಾವನ್ನಪ್ಪಿದ ಮಹಿಳೆ. ನಿನ್ನೆ(ಸೆ.25) ಮಧ್ಯರಾತ್ರಿ ಕಳ್ಳತನ ಮಾಡಲು ಮನೆಗೆ ಕಳ್ಳರು ಬಂದಿದ್ದು, ಇದನ್ನು ಗಮನಿಸಿದ ಮಹಿಳೆ, ಮನೆಯ ಹಿತ್ತಲ ಬಾಗಿಲಿನಿಂದ ಹೊರ ಬಂದಿದ್ದರು.
ಗಾಬರಿಯಲ್ಲಿ ಓಡಿ ಬರುವಾಗ ಕೊಳ್ಳದಲ್ಲಿ ಬಿದ್ದು ಕೊನೆಯುಸಿರೆಳೆದಿದ್ದಾರೆ. ಇದೀಗ ಮೃತದೇಹವನ್ನು ಸ್ಥಳೀಯ ನಿವಾಸಿಗಳು ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಮಾರಿಹಾಳ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Ad