Bengaluru 22°C
Ad

ಬೈಕ್​ಗೆ ಸರ್ಕಾರಿ ಬಸ್​ ಡಿಕ್ಕಿ: 30 ಅಡಿ ಎತ್ತರಕ್ಕೆ ಹಾರಿ ಪ್ರಾಣಬಿಟ್ಟ ಸವಾರ

ಬೆಳಗಾವಿ ಖನಗಾಂವ ಕೆ.ಎಚ್.ಗ್ರಾಮದ ಬಳಿ ಬೈಕ್​ಗೆ ಸರ್ಕಾರಿ ಬಸ್​ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬೆಳಗಾವಿ: ಬೆಳಗಾವಿ ಖನಗಾಂವ ಕೆ.ಎಚ್.ಗ್ರಾಮದ ಬಳಿ ಬೈಕ್​ಗೆ ಸರ್ಕಾರಿ ಬಸ್​ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸುಳೇಬಾವಿ ಗ್ರಾಮದ ವಿಠ್ಠಲ ದತ್ತಾ ಲೋಕರೆ(29) ಬಸ್​ ಅಪಘಾತದಲ್ಲಿ ಮೃತಪಟ್ಟ ದುರ್ದೈವಿ.

ಬಸ್ ಬೆಳಗಾವಿ ಕಡೆಗೆ ಬರುತ್ತಿತ್ತು. ಈ ವೇಳೆ ಬೈಕ್ ಸವಾರನಿಗೆ ಗುದ್ದಿದೆ. ಪರಿಣಾಮ ಬೈಕ್​ ಸವಾರ 30 ಅಡಿ ಎತ್ತರಕ್ಕೆ ಜಿಗಿದು ಹೊಲದಲ್ಲಿ ಬಿದ್ದಿದ್ದಾನೆ.  ಬಸ್​ ಗುದ್ದಿದ ರಭಸಕ್ಕೆ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.

ಬಸ್ ಪಲ್ಟಿ ಹೊಡೆದ ರಭಸಕ್ಕೆ ಬಸ್​ನಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Ad
Ad
Nk Channel Final 21 09 2023
Ad