ಬೆಳಗಾವಿ

ಮನೆ ಕುಸಿದು 7 ಜನ ಸಾವು

ಬೆಳಗಾವಿ : ಭಾರೀ ಮಳೆಯಿಂದಾಗಿ  ಮನೆ ಕುಸಿದು ಒಟ್ಟು 7 ಜನ ಸಾವನ್ನಪ್ಪಿರುವ ದುರ್ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸಂಭವಿಸಿದೆ.

ಭಾರೀ ಮಳೆ ಹಿನ್ನೆಲೆಯಲ್ಲಿ ಇಂದು ಭೀಮಪ್ಪ ಖನಗಾಂವಿ ಎಂಬುವವರಿಗೆ ಸೇರಿದ ಮನೆ ಕುಸಿದು ಬಿದ್ದಿದ್ದು, 7 ವರ್ಷದ ಮಗು ಸೇರಿ ಒಂದೇ ಕುಟುಂಬದ 6 , ಪಕ್ಕದ ಮನೆಯ ಒಬ್ಬರು ಒಟ್ಟು 7 ಜನರು ಮೃತಪಟ್ಟಿದ್ದಾರೆ.

ಗಂಗವ್ವ ಭೀಮಪ್ಪ(80), ಸತ್ಯವ್ವ ಅರ್ಜುನ್‌(45), ಕಾಶವ್ವ(8), ಪೂಜಾ ಅರ್ಜುನ್‌(8), ಸವಿತಾ ಭೀಮಪ್ಪ(28) ಮೃತಟ್ಟಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರ ಭೇಟಿ ನೀಡಿ ಸ್ಥಳೀಯರ ಜತೆಗೂಡಿ ಬಿದ್ದ ಮನೆಯ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಮೃತ ಸಂಬಂಧಿಕರಿಗೆ ಸಾಂತ್ವಾನ ಹೇಳಿದರು. ಇನ್ನು ಈ ಘಟನೆ ಬಗ್ಗೆ ಹೆಬ್ಬಾಳ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು, ಅದು ಈ ಕೆಳಗಿನಂತಿದೆ.

ಇವತ್ತು ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಕ್ಷೇತ್ರದ ಬಡಾಲ ಅಂಕಲಗಿಯ ಖನಗಾವಿ ಎನ್ನುವರಿಗೆ ಸೇರಿದ್ದ ಮನೆಯ ಗೋಡೆ ಕುಸಿದಿದ್ದರ ಪರಿಣಾಮ ಮನೆಯ ಒಳಗಡೆಯಿದ್ದ 7 ಜನರ ಪೈಕಿ ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರನ್ನು ಆಸ್ಪತೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಮೃತಪಟ್ಟಿರುವುದು ಮನಸ್ಸಿಗೆ ತೀವ್ರ ನೋವನ್ನುಂಟು ಮಾಡಿದೆ, ನಿಜಕ್ಕೂ ವಿಧಿ ಎಷ್ಟು ಕ್ರೂರಿ ಎನಿಸುತ್ತಿದೆ.

ಅರ್ಜುನ ಹ ಖನಗಾವಿ, ಸತ್ಯವ್ವ ಅ ಖನಗಾವಿ, ಲಕ್ಷ್ಮೀ ಅ ಖನಗಾವಿ, ಪೂಜಾ ಅ ಖನಗಾವಿ, ಕಾಶೆವ್ವ ಕೊಳೆಪ್ಪನವರ, ಗಂಗವ್ವ ಭೀ ಖನಗಾವಿ, ಸವಿತಾ ಖನಗಾವಿ ಎಂಬುವವರೇ ಮೃತ ದುರ್ದೈವಿಗಳಾಗಿದ್ದಾರೆ.

ಮೃತರ ಕುಟುಂಬದವರ ನೋವಿನಲ್ಲಿ ನಾನು ಭಾಗಿಯಾಗಿದ್ದೇನೆ, ಅಗಲಿದ ಆತ್ಮಗಳಿಗೆ ಭಗವಂತ ಶಾಂತಿಯನ್ನು ದಯಪಾಲಿಸಲಿ ಎಂದು ಪ್ರಾರ್ಥಿಸುತ್ತೇನೆ. ಸದ್ಯ ಘಟನೆಯ ಸ್ಥಳದಲ್ಲಿ ತಹಸಿಲ್ದಾರ, ಜಿಲ್ಲಾಧಿಕಾರಿಗಳು, ಸಿಪಿಆಯ್ ಹಾಗೂ ಮುಂತಾದ ಅಧಿಕಾರಿಗಳು ಹಾಜರಿದ್ದು, ಘಟನೆಯ ಕುರಿತು ಚರ್ಚಿಸಲಾಗುತ್ತಿದೆ.

Raksha Deshpande

Recent Posts

ಹೂಸ ರುಚಿ: ಅವಲಕ್ಕಿ ಹುಳಿ ಮಾಡುವುದು ಹೇಗೆ?

ಗಡಿಬಿಡಿಯ ಜೀವನದಲ್ಲಿ ಬೆಳಗ್ಗಿನ ಉಪಹಾರ ಮಾಡಿಕೊಂಡು ಆಫೀಸಿಗೆ ಹೋಗುವುದೇ ಸವಾಲ್. ಇಂತಹ  ಸಂದರ್ಭದಲ್ಲಿ ಅವಲಕ್ಕಿ ಇದ್ದರೆ ಅದರಿಂದ ಹುಳಿ ತಯಾರಿಸಿ…

57 seconds ago

ಬಾವಿಗೆ ಬಿದ್ದ ಮಗುವನ್ನು ರಕ್ಷಿಸಿದ ಯುವಕನಿಗೆ ಮೆಚ್ಚುಗೆಯ ಸುರಿಮಳೆ

ಸರಪಾಡಿಯ ಹಂಚಿಕಟ್ಟೆಯಲ್ಲಿ ಬಾವಿಗೆ ಬಿದ್ದ ಮಗುವೊಂದನ್ನು ತನ್ನ ಪ್ರಾಣದ ಹಂಗನ್ನು ತೊರೆದು ತುಂಡಾಗುವ ಸ್ಥಿತಿಯಲ್ಲಿದ್ದ ಹಳೆಯ ಹಗ್ಗವನ್ನು ಬಳಸಿ ಮೇಲಕ್ಕೆತ್ತಿದ…

10 mins ago

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲು

ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ, ಶ್ರೀರಾಮ ಸೇನೆಯ ಅಧ್ಯಕ್ಷ ಸಿದ್ದಲಿಂಗ ಶ್ರೀಗಳ ವಿರುದ್ಧ ಕಲಬುಗಿಯಲ್ಲಿ ಜಾತಿ…

15 mins ago

ಮಡಿಕೇರಿಯಲ್ಲಿ ಬುದ್ಧಿಮಾಂದ್ಯ ಹುಡುಗನ ರಕ್ಷಣೆ; ಸಂಬಂಧಪಟ್ಟವರು ಸಂಪರ್ಕಿಸುವಂತೆ ಮನವಿ

ಅನಾಥ ಬುದ್ಧಿಮಾಂದ್ಯ ಹುಡುಗನನ್ನು ರಕ್ಷಣೆ ಮಾಡಿ ಶಕ್ತಿ ಅನಾಥಾಶ್ರಮಕ್ಕೆ ಸೇರಿಸಿರುವ ಘಟನೆಯೊಂದು ಮಡಿಕೇರಿಯಲ್ಲಿ ನಡೆದಿದೆ.

20 mins ago

ಗ್ರಾಹಕರಂತೆ ಬಂದು ಬಂಗಾರದ ಬಳೆ ಎಗರಿಸಿದ ಖತರ್ನಾಕ್ ಕಳ್ಳಿಯರ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಗ್ರಾಹಕರ ಸೋಗಿನಲ್ಲಿ ಬಂದು ಬಂಗಾರದ ಖಡ್ಗ ಕದ್ದು ಪರಾರಿಯಾದ ಘಟನೆ ಕಲಬುರಗಿ ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿರುವ ತನಿಷ್ಕ ಜ್ಯುವೆಲ್ಲರಿ ಶಾಪ್‌ನಲ್ಲಿ…

23 mins ago

ವಿಧಾನಸೌಧ ಪ್ರವೇಶಕ್ಕೆ ಇನ್ನು ಮುಂದೆ ಕ್ಯೂಆರ್ ಕೋಡ್ ಪಾಸ್‌: ಪರಮೇಶ್ವರ್‌

ಇನ್ನು ಮುಂದೆ ವಿಧಾನಸೌಧ ಪ್ರವೇಶಕ್ಕೆ ಬೇಕಾಬಿಟ್ಟಿ ಪಾಸ್‌ಗಳನ್ನು ವಿತರಿಸುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ.

41 mins ago