Bengaluru 20°C

ದೇವಸ್ಥಾನದಲ್ಲಿ ದರ್ಶನ್​ ಫೋಟೋ ಇಟ್ಟು ಪೂಜೆ; ಅರ್ಚಕ ಅಮಾನತು

Balary

ಬಳ್ಳಾರಿ: ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾರೆ ಎನ್ನಲಾದ ಪ್ರಕರಣದಲ್ಲಿ ನಟ ದರ್ಶನ್​​ ವಿಚಾರಣಧಿನ ಕೈದಿಯಾಗಿ ಜೈಲು ಸೇರಿದ್ದಾರೆ. ಇತ್ತ ಇವರ ಅಭಿಮಾನಿಗಳು ದಚ್ಚು ಮೇಲಿನ ಪ್ರೀತಿಗಾಗಿ ಟ್ಯಾಟು, ಕೈದಿನಂಬರ್ ಟ್ಯಾಟು, ಫೋಟೋಶೂಟ್​​ ಮಾಡುತ್ತಿದ್ದಾರೆ.


ಆದರೆ ಇಲ್ಲೊಂದು ದೇವಸ್ಥಾನದಲ್ಲಿ ದರ್ಶನ್​​ ಅವರ ಫೋಟೋಗೆ ಪೂಜೆ ಸಲ್ಲಿಸಿದ್ದಾರೆ.


ಆರಾಧ್ಯ ದೈವ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನದ ಗರ್ಭ ಗುಡಿಯಲ್ಲಿ ಶಿಲಾ ಮೂರ್ತಿಯ ಮುಂದೆ ಸಿನಿಮಾ ನಟ ದರ್ಶನ್​​ ಅವರ ಫೋಟೋಗಳನ್ನು ಇಟ್ಟು ಪೂಜೆ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.


ದೊಡ್ಡಬಸವೇಶ್ವರ ದೇವಸ್ಥಾನದಲ್ಲಿ ಮಲ್ಲಿ ಎಂಬ ಅರ್ಚಕ ನಟ ದರ್ಶನ್ ಪೋಟೋ ಇಟ್ಟು ಪೂಜೆ ಮಾಡಿದ್ದಾರೆ. ಪೂಜೆ ಮಾಡಿ ಮಂಗಳಾರತಿ ಎತ್ತಿದ್ದಾರೆ. ಈ ಫೊಟೋಗಳು ವೈರಲ್​ ಆಗುತ್ತಿದ್ದಂತೆ ಕೆಲವರು ದೇವಸ್ಥಾನದ ಸಂಪ್ರದಾಯಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ಅರ್ಚಕ ಸ್ಥಾನದಿಂದ ಅಮಾನತು ಆಗಿದ್ದಾರೆ.


ಧಾರ್ಮಿಕ ದತ್ತಿ ಇಲಾಖೆ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪರವರು ಅರ್ಚಕನನ್ನು ಅಮಾನತು ಮಾಡಿದ್ದಾರೆ.


Nk Channel Final 21 09 2023