Bengaluru 20°C
Ad

ಬಳ್ಳಾರಿ ಜೈಲು ಸೆಟ್ ಆಗ್ತಿಲ್ಲ, ಬೆಂಗಳೂರು ಸಮೀಪ ಹಾಕಿ ಎಂದು ದರ್ಶನ್ ಡಿಮ್ಯಾಂಡ್

Darshan (5)

ಬಳ್ಳಾರಿ: “ಬಳ್ಳಾರಿ ಜೈಲು ಸೆಟ್ ಆಗ್ತಿಲ್ಲ, ನನ್ನನ್ನು ಬೆಂಗಳೂರು ಸಮೀಪದ ಜೈಲಿಗೆ ಶಿಫ್ಟ್ ಮಾಡಿ” ಎಂದು ನ್ಯಾಯಾಧೀಶರ ಮುಂದೆ ನಟ ದರ್ಶನ್ ಕೇಳಿಕೊಳ್ಳುತ್ತಿದ್ದಾರಂತೆ. ಅಷ್ಟಕ್ಕೂ ಬಳ್ಳಾರಿ ಜೈಲಿನಲ್ಲಿರಲು ಏನು ತೊಂದರೆ? ಇಲ್ಲಿ ನೋಡಿ. ಬಳ್ಳಾರಿಯಿಂದ ಬೆಂಗಳೂರಿಗೆ ಸುಮಾರು 5-6 ಗಂಟೆಯ ದಾರಿಯಿದೆ.

ನಮ್ಮ ಕುಟುಂಬದವರಿಗೆ ಆಗಾಗ ಬಂದು ಭೇಟಿ ಮಾಡಲು ಕಷ್ಟವಾಗುತ್ತಿದೆ. ಹೀಗಾಗಿ ಬಳ್ಳಾರಿಯಿಂದ ಬೆಂಗಳೂರು ಸಮೀಪದ ಜೈಲಿಗೆ ಶಿಫ್ಟ್ ಮಾಡಿಸಿ ಎಂದು ದರ್ಶನ್ ನ್ಯಾಯಾಧೀಶರ ಮುಂದೆ ಕೇಳಿಕೊಳ್ಳುತ್ತಿದ್ದಾರಂತೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ರಾಜಾತಿಥ್ಯ ಪಡೆದ ತಪ್ಪಿಗೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇಲ್ಲಿ ಅವರಿಗೆ ಕಠಿಣ ನಿಯಮ ರೂಪಿಸಲಾಗಿದ್ದು, ಏಕಾಂಗಿತನದಿಂದ ಬಸವಳಿದಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ಕುಟುಂಬ ಸದಸ್ಯರು ಮಾತ್ರವಲ್ಲದೆ ಸಿನಿ ಸ್ನೇಹಿತರೂ ಬಂದು ಹೋಗುತ್ತಿದ್ದರು.

ಆದರೆ ಇಲ್ಲಿ ಯಾರೂ ಬರಲು ಅವಕಾಶವಿಲ್ಲ. ಹೀಗಾಗಿ ಬೆಂಗಳೂರು ಸಮೀಪದ ಜೈಲಿಗೆ ಶಿಫ್ಟ್ ಮಾಡಲು ಕೇಳಿಕೊಳ್ಳುತ್ತಿದ್ದಾರೆ. ಆದರೆ ದರ್ಶನ್ ಈ ಬೇಡಿಕೆಗೆ ನ್ಯಾಯಾಧೀಶರು ಅಸ್ತು ಎನ್ನುವುದು ಅನುಮಾನ. ಬೆಂಗಳೂರು ಜೈಲಿನಲ್ಲಿ ರಾಜಾತಿಥ್ಯ ಪಡೆದಿದ್ದಕ್ಕೇ ಅವರನ್ನು ಇಲ್ಲಿಗೆ ಶಿಫ್ಟ್ ಮಾಡಲಾಗಿದೆ.

Ad
Ad
Nk Channel Final 21 09 2023