Ad

ಉಸಿರಾಟದ ತೊಂದರೆ: ಚಿಕಿತ್ಸೆ ಫಲಿಸದೇ ಬಾಗಲಕೋಟೆಯ ಯೋಧ ಸಾವು

ಉಸಿರಾಟದ ತೊಂದರೆಯಿಂದ‌ ಚಿಕಿತ್ಸೆ ಫಲಿಸದೇ ಬಾಗಲಕೋಟೆಯ ಯೋಧರೊಬ್ಬರು ರಾಜಸ್ಥಾನದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಾಗಲಕೋಟೆ: ಉಸಿರಾಟದ ತೊಂದರೆಯಿಂದ‌ ಚಿಕಿತ್ಸೆ ಫಲಿಸದೇ ಬಾಗಲಕೋಟೆಯ ಯೋಧರೊಬ್ಬರು ರಾಜಸ್ಥಾನದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಾಗಲಕೋಟೆ ತಾಲ್ಲೂಕಿನ ಖಜ್ಜಿಡೋಣಿ ಗ್ರಾಮದ ನಿವಾಸಿ ಹನುಮಂತ ಬಸಪ್ಪ ತಳವಾರ (32) ಮೃತ ಯೋಧ. 12 ವರ್ಷದಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಹನುಮಂತ, ಉಸಿರಾಟದ ತೊಂದರೆಯಿಂದ ರಾಜಸ್ಥಾನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ಹನುಮಂತ ತಳವಾರ ಮೃತಪಟ್ಟಿದ್ದಾರೆ. ಅವರು ರಾಜಸ್ಥಾನದ ಜೋಧಪುರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೃತ ಯೋಧ ತಂದೆ, ಪತ್ನಿ ವಿಜಯಲಕ್ಷ್ಮಿ, ಪುಟ್ಟ ಮಗಳು, ಮಗ, ಸಹೋದರರನ್ನು ಅಗಲಿದ್ದಾರೆ. ಹುತಾತ್ಮ ಯೋಧನ ಗ್ರಾಮ ಹಾಗೂ ಮನೆಯಲ್ಲಿ ಶೋಕದ ವಾತಾವರಣ ನೆಲೆಸಿದ್ದು, ಇವತ್ತು ಮಧ್ಯಾಹ್ನ ನಂತರ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದೆ.

Ad
Ad
Nk Channel Final 21 09 2023