ಬಾಗಲಕೋಟೆ: ರಾಜ್ಯದಲ್ಲಿ ಗಣೇಶ ಮೆರವಣಿಗೆ ಮತ್ತು ಈದ್ ಮಿಲಾದ್ ಮೆರವಣಿಗೆ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಗೂ ಪ್ಯಾಲಿಸ್ತೇನ್ ಧ್ವಜ ಹಾರಿಸಲಾಗಿರುವ ಘಟನೆಗೆ ಸಂಬಂಧಪಟ್ಟಂತೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರತಿಕ್ರಿಯಿಸಿದ್ದಾರೆ.
ಈ ರೀತಿಯ ಘಟನೆಗಳ ಬಗ್ಗೆ ಸಿಎಂ ಕಠಿಣವಾಗಿ ಯಾವುದೇ ಕ್ರಮಕೈಗೊಳ್ತಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿದ ಅವರು, ಪ್ಯಾಲಿಸ್ತೇನ್ ಧ್ವಜ ಹಾರಿಸುವುದೇ ಸುಳ್ಳು ಎಂಬಂತೆ ಮಾತನಾಡಿದರು.
ಸುಖಾಸುಮ್ಮನೆ ವಿಪಕ್ಷಗಳು ಈ ರೀತಿ ಕೋಮು ಭಾವನೆ ಬಿತ್ತುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಭಾರತ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಲ್ಲಿ ಅಲ್ಪಸಂಖ್ಯಾತರೇ ಜಾಸ್ತಿ ಇದ್ದಾರೆ ಅಂತ ಸಮರ್ಥನೆ ಮಾಡಿಕೊಂಡಿದ್ದಾರೆ.
Ad