Bengaluru 24°C
Ad

ಬೈಕ್ ನಲ್ಲಿ ಮಂಗಳೂರಿನಿಂದ ಭೂತಾನ್ ಗೆ ಹೊರಟ ಅಮೃತಾ ಜೋಶಿ

ಈ ಹಿಂದೆ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಏಕಾಂಗಿಯಾಗಿ ಬೈಕ್ ಮೂಲಕ ದೇಶಸುತ್ತಿದ್ದ ಅಮೃತಾ ಜೋಶಿ ಇದೀಗ ಮತ್ತೊಂದು ಸುತ್ತಿನ ಬೈಕ್ ಸವಾರಿ ಹೊರಟಿದ್ದಾರೆ.

ಕಾಸರಗೋಡು: ಈ ಹಿಂದೆ ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಏಕಾಂಗಿಯಾಗಿ ಬೈಕ್ ಮೂಲಕ ದೇಶಸುತ್ತಿದ್ದ ಅಮೃತಾ ಜೋಶಿ ಇದೀಗ ಮತ್ತೊಂದು ಸುತ್ತಿನ ಬೈಕ್ ಸವಾರಿ ಹೊರಟಿದ್ದಾರೆ.

2022 ರಲ್ಲಿ ಕೇರಳದಿಂದ ಏಕಾಂಗಿಯಾಗಿ ಬೈಕ್ ಪ್ರಯಾಣ ಆರಂಭಿಸಿ ಯಶಸ್ವಿಯಾಗಿ 23 ಸಾವಿರ ಕಿಲೋ ಮೀಟರ್ ಬೈಕ್ ಓಡಿಸಿ ತಮ್ಮ ಗುರಿಯನ್ನು ತಲುಪಿದ್ದರು. ಶ್ರೀಲಂಕಾದಲ್ಲೂ ಇವರು ತಮ್ಮ ಬೈಕ್ ಪ್ರಯಾಣ ಮಾಡಿದ್ದು ಆರು ದಿನಗಳಲ್ಲಿ ಸೌತ್ ಶ್ರೀಲಂಕಾವನ್ನು ಸುತ್ತಿ ದಾಖಲೆ ನಿರ್ಮಿಸಿದ್ದರು.

ಇದೀಗ ಮತ್ತೊಂದು ಸುತ್ತಿನ ಏಕಾಂಗಿ ಬೈಕ್ ಪ್ರಯಾಣವನ್ನು ಇಂದು ಮಂಗಳೂರಿನಿಂದ ಆರಂಭಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಕುಂಬ್ಲೆಯ ನಿವಾಸಿಯಾಗಿರುವ ಇವರು ಬೈಕ್ನಲ್ಲಿ ಭೂತಾನ್ಗೆ ಹೊರಟಿದ್ದಾರೆ.

ಹತ್ತು ರಾಜ್ಯಗಳಲ್ಲಿ ಹತ್ತು ಸಾವಿರ ಕಿಲೋ ಮೀಟರ್ ಏಕಾಂಗಿಯಾಗಿ ಸಂಚರಿಸಲಿದ್ದಾರೆ. ಕೇವಲ ಒಂದು ತಿಂಗಳಲ್ಲೇ ಈ ಹತ್ತು ಸಾವಿರ ಕಿಲೋ ಮೀಟರ್ ಪ್ರಯಾಣವನ್ನು ಪೂರ್ಣಗೊಳಿಸುವ ಗುರಿಯೊಂದಿಗೆ ಪ್ರಯಾಣ ಆರಂಭಿಸಿದ್ದಾರೆ.

Ad
Ad
Nk Channel Final 21 09 2023
Ad