ಶಿರಸಿ: ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ತಾಲೂಕಿನ ಕಾನಗೋಡ ಸಮೀಪದ ಕಬ್ನಳ್ಳಿ ಕತ್ರಿ ಬಳಿ ಸೋಮವಾರ (ಸೆ.16ರಂದು) ನಡೆದಿದೆ. ಭೀಕರ ಘಟನೆಯಲ್ಲಿ ಕಾರು ಚಾಲಕ ಸೃಳದಲ್ಲೇ ಮೃತಪಟ್ಟಿದ್ದಾರೆ.
ಶಿರಸಿಯ ಚಂದ್ರಶೇಖರ ಮೃತ ಕಾರು ಚಾಲಕ ಎಂದು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದ ಇನ್ನೋರ್ವ ಪ್ರಯಾಣಿಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಘಟನಾ ಧಾವಿಸಿ ಪರಿಶೀಲಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
Ad