Categories: ಕರ್ನಾಟಕ

2ನೇ ಹಂತದ ಗ್ರಾಪಂ ಚುನಾವಣೆ ಶಾಂತಿಯುತ : ಜಿಲ್ಲೆಯಲ್ಲಿ ಶೇ. 81.41ರಷ್ಟು ಮತದಾನ

ಕಾರವಾರ: ಜಿಲ್ಲೆಯ ಏಳು ತಾಲೂಕುಗಳಲ್ಲಿ ನಡೆದ 2ನೇ ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಒಟ್ಟು 3,19,742 ಮಂದಿ ಮತದಾನದ ಹಕ್ಕು ಚಲಾಯಿಸಿದ್ದು ಶೇ. 81.41 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಹರೀಶಕುಮಾರ್ ಕೆ. ಆವರು ತಿಳಿಸಿದ್ದಾರೆ.

ಹಳಿಯಾಳ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ಶೇ. 84.64 ರಷ್ಟು ಮತದಾನವಾಗಿದ್ದು, ಮುಂಡಗೋಡದಲ್ಲಿ ಶೇ. 83.99ರಷ್ಟು ಮತದಾನ ದಾಖಲಾಗಿದೆ. ಇನ್ನುಳಿದಂತೆ ಸಿದ್ದಾಪುರ ಶೇ. 82.20ರಷ್ಟು, ಶಿರಸಿ ಶೇ. 81.00ರಷ್ಟು, ಯಲ್ಲಾಪುರ ಶೇ. 80.87ರಷ್ಟು, ಜೊಯಿಡಾ ಶೇ. 76.32ರಷ್ಟು ಹಾಗೂ ದಾಂಡೇಲಿ ಶೇ. 75.23ರಷ್ಟು ಮತದಾನ ಆಗಿದೆ.

ಜಿಲ್ಲೆಯ ಈ ಏಳು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೆಳಗ್ಗೆ 7 ರಿಂದಲೇ ಶಾಂತಿಯುತ ಹಾಗೂ ಉತ್ಸಾಹದಿಂದ ಮತದಾನ ನಡೆದಿದ್ದು, ಹಂತ ಹಂತವಾಗಿ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನಕ್ಕೆ ಹೆಚ್ಚಿನ ಉತ್ಸಾಹ ತೋರಿದರು. 9 ಗಂಟೆ ಹೊತ್ತಿಗೆ ಶೇ. 10.26ರಷ್ಟು, 11 ಗಂಟೆ ಹೊತ್ತಿಗೆ ಶೇ. 25.24ರಷ್ಟು, ಮಧ್ಯಾಹ್ನ 1 ಗಂಟೆಗೆ ಶೇ. 45.05ರಷ್ಟು, 3 ಗಂಟೆಗೆ ಶೇ. 60.65ರಷ್ಟು ಮತ್ತು ಸಂಜೆ 5 ಗಂಟೆಯ ಅಂತಿಮ ಹಂತದ ವೇಳೆಗೆ ಶೇ. 81.41 ರಷ್ಟು ಮತದಾನವಾಗಿದೆ.

ಜಿಲ್ಲೆಯ 7 ತಾಲೂಕುಗಳಲ್ಲಿ 2,00641 ಪುರುಷರು, 1,92,134 ಮಹಿಳೆಯರು ಹಾಗೂ ಇತರೆ 4 ಸೇರಿದಂತೆ ಒಟ್ಟು 3,92,779 ಮತದಾರರಿದ್ದಾರೆ. ಡಿಸೆಂಬರ್ 27ರ ಭಾನುವಾರ  ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಈ 7 ತಾಲೂಕುಗಳಲ್ಲಿ ಅಂದರೆ  ಜಿಲ್ಲೆಯ ಶಿರಸಿ 41,827 ಪುರುಷರು, 38,572 ಮಹಿಳೆಯರು ಸೇರಿ 80,399 ಜನ ಮತ ಚಲಾಯಿಸಿದ್ದಾರೆ. ಅದರಂತೆ ಸಿದ್ದಾಪುರ 30,144 ಪುರುಷರು, 28,705 ಮಹಿಳೆಯರು ಹಾಗೂ ಇತರೆ 1 ಸೇರಿ 58,850, ಯಲ್ಲಾಪುರ 20,555 ಪುರುಷರು, 19,465 ಮಹಿಳೆಯರು ಸೇರಿ 40,020, ಮುಂಡಗೋಡ 24,938 ಪುರುಷರು, 22,903 ಮಹಿಳೆಯರು ಸೇರಿ 47,841, ಹಳಿಯಾಳ 28,780 ಪುರುಷರು, 26,469 ಮಹಿಳೆಯರು ಹಾಗೂ ಇತರೆ 1 ಸೇರಿ 55,250, ದಾಂಡೇಲಿ 3,727 ಪುರುಷರು, 3,831 ಮಹಿಳೆಯರು ಸೇರಿ 7,558 ಹಾಗೂ ಜೋಯಿಡಾ 15,176 ಪುರುಷರು, 14,648 ಮಹಿಳೆಯರು ಸೇರಿ 29,824 ಮತದಾರರು ಮತ ಚಲಾಯಿಸುವ ಮೂಲಕ  7 ತಾಲೂಕುಗಳಲ್ಲಿ ಒಟ್ಟಾರೆಯಾಗಿ 3,19,742 ಮಂದಿ ಮತದಾನ ಮಾಡಿದ್ದಾರೆ.

Desk

Recent Posts

ವಿಜೃಂಭಣೆಯಿಂದ ಜರುಗಿದ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನಾ ಮಹೋತ್ಸವ

ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ…

2 hours ago

ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ: 40 ಜನರ ರಕ್ಷಣೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ತದಡಿ ಗ್ರಾಮದ ಮೂಡಂಗಿಯ ಸಮೀಪ  ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿಯಾದ ಘಟನೆ ನಡೆದಿದೆ. 

2 hours ago

ಮೋದಿಗೆ ಯಾರೂ ಮತ ಹಾಕಬೇಡಿ ಎಂದಿದ್ದ ಶಿಕ್ಷಕ ಅರೆಸ್ಟ್

ಬಿಹಾರದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಮೋದಿಗೆ ಯಾರೂ ಮತ ಹಾಕಬೇಡಿ ಎಂದು ಮಕ್ಕಳಿಗೆ ಹೇಳಿದ್ದಕ್ಕೆ ಶಿಕ್ಷಕನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

2 hours ago

ಮೇ 24ರಿಂದ ಮೈಸೂರಿನಲ್ಲಿ ಮಾವು, ಹಲಸು ಮೇಳ

ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ  ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…

3 hours ago

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆ ಸಾವು

ಜಿಪ್​ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ  ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್​ನಲ್ಲಿ ನಡೆದಿದೆ. 

3 hours ago

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಕೆರೆಯಲ್ಲಿ ಮುಳುಗಿ ಮೃತ್ಯು

ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…

3 hours ago