Categories: ಕರ್ನಾಟಕ

ಶಾಸಕ ಸಿ.ಟಿ ರವಿ ನೀಡಿರುವ ಸುಳ್ಳು ಹೇಳಿಕೆಗೆ ಕ್ಷಮೆಯಾಚಿಸಲಿ: ಎಂ.ಸಿ ಶಿವಾನಂದ ಸ್ವಾಮಿ

ಚಿಕ್ಕಮಗಳೂರು: ಜಿಲ್ಲಾ ಕೇಂದ್ರದಲ್ಲಿ ಆರಂಭವಾಗಬೇಕಾಗಿರುವ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳ ಆರಂಭಕ್ಕೆ ಕಾಂಗ್ರೆಸ್ ಅಡ್ಡಿಯಾಗಿದೆ ಎಂಬ ಶಾಸಕ ಸಿ.ಟಿ.ರವಿ ನೀಡಿರುವ ಹೇಳಿಕೆ ಜವಬ್ದಾರಿ ಮರೆತ ಜನಪ್ರತಿನಿಧಿ, ಸುಳ್ಳು ಹಾಗೂ ಜನರನ್ನು ದಾರಿ ತಪ್ಪಿಸುವ ಹುನ್ನಾರವಾಗಿದೆ ಎಂದು ಪಕ್ಷದ ವಕ್ತಾರ ಎಂ.ಸಿ ಶಿವಾನಂದ ಸ್ವಾಮಿ ದೂರಿದ್ದಾರೆ.

ಕಳೆದ 14 ವರ್ಷಗಳಿಂದ ಶಾಸಕರಾಗಿರುವ, ಮಂತ್ರಿಯೂ ಆಗಿದ್ದ ಸಿ.ಟಿ.ರವಿ ಅವರ ಬಾಯಿಂದ ಇಂತಹ ಸುಳ್ಳುಗಳನ್ನು ಪಕ್ಷ ಹಾಗೂ ಜಿಲ್ಲೆಯ ಜನ ನಿರೀಕ್ಷಿಸುವುದಿಲ್ಲ. ಏಕೆಂದರೆ ಎಂಜಿನಿಯರಿಂಗ್ ಕಾಲೇಜ್ ಸಂಬಂಧ ಸರ್ಕಾರವು ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಿರುವ ಇಂದಾವರ ಸ.ನಂ.36 ರಲ್ಲಿ 15.02 ಎಕರೆ 37 ರಲ್ಲಿ 16.10 ಎಕರೆ ಪ್ರದೇಶವನ್ನು ಕಾಲೇಜು ನಿರ್ಮಾಣಕ್ಕೆ ಆದೇಶ ಸಂಖ್ಯೆ ಎಂ4:ಎಲ್ಎನ್ಡಿ:ಸಿಆರ್ 186:2012-13 ದಿನಾಂಕ:10.07.2014 ರಂತೆ ಜಾಗವನ್ನು ನೀಡಿದೆ ಎಂದು ತಿಳಿಸಿದ್ದಾರೆ. ಪಹಣಿಯಲ್ಲಿ ಕೂಡ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಎಂದು ನಮೂದಣೆಯಾಗಿದೆ. ಅಲ್ಲದೇ ಸರ್ಕಾರದ ಆದೇಶ ಸಂಖ್ಯೆ ಇಡಿ 59 ಹೆಚ್ಟಿಪಿ 2016(ಭಾ) ಬೆಂಗಳೂರು 2016 ಅ.4ರಲ್ಲಿ ರಾಜ್ಯ ಸರ್ಕಾರವು ರಾಜ್ಯದಲ್ಲಿ ಆರಂಭಗೊಳ್ಳಬೇಕಾಗಿರುವ ಚಿಕ್ಕಮಗಳೂರು ಸೇರಿದಂತೆ 3 ಎಂಜಿನಿಯರಿಂಗ್ ಕಾಲೇಜುಗಳಿಗೆ ನಬಾರ್ಡ್ ಯೋಜನೆಯಡಿ ಕಾಮಗಾರಿ ನಡೆಸಲು ಏಜೆನ್ಸಿಯನ್ನು ನಿಗದಿಗೊಳಿಸಿದೆ.

ರೈಟ್ಸ್ ಸಂಸ್ಥೆಯು ಕಾಮಗಾರಿಯನ್ನು ಪಡೆದುಕೊಂಡಿದೆ. ಚಿಕ್ಕಮಗಳೂರು ಡಿಎಸಿಜಿ ಪಾಲಿಟೆಕ್ನಿಕ್ನ ಪ್ರಾಂಶುಪಾಲರನ್ನು ವಿಶೇಷ ಅಧಿಕಾರಿಯನ್ನಾಗಿ ಕೂಡ ನೇಮಿಸಿರುವುದು ಮತ್ತು ದಾಖಲೆಗಳ ಮಾಹಿತಿಗಳ ಸತ್ಯ ಶಾಸಕರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಕಳೆದ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ನೀಡಿದ್ದಾರೆ.

ಈಗಾಗಲೇ ಆದಿಶಕ್ತಿ ನಗರದ ಸಮೀಪ ಕದ್ರಿಮಿದ್ರಿ ಗ್ರಾಮದಲ್ಲಿ 30 ಎಕರೆ ಭೂಮಿಯನ್ನು ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ನೀಡಲಾಗಿದೆ. ಕಾಲೇಜು ಆರಂಭದ ಪ್ರಕ್ರಿಯೆ ಸಂಬಂಧ ಶಿವಮೊಗ್ಗದ ಮೆಘಾನ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಲೋಹಿತ್ ರವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದಾರೆ ಅವರೂ ಸೇರಿದಂತೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ಉನ್ನತ ತಂಡ ಎರಡು ಬಾರಿ ಚಿಕ್ಕಮಗಳೂರು ಜಿಲ್ಲಾ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೆಡಿಕಲ್ ಕಾಲೇಜು ಆರಂಭದ ಸಂಬಂಧ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಅಲ್ಲದೇ ಕೆಎಸ್ಎಸ್ಆರ್ಡಿಪಿ ಸಂಸ್ಥೆಯ ಎಂಜಿನಿಯರ್ ಗಳು ಸ್ಥಳ ಪರಿಶೀಲನೆ ನಡೆಸಿದ್ದು ಯೋಜನಾ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಈ ಸತ್ಯಗಳನ್ನು ಮರೆಮಾಚಿ ಶಾಸಕ ರವಿ ಕಾಂಗ್ರೆಸ್ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜುಗಳ ಆರಂಭಕ್ಕೆ ತಡೆಹಾಕಿದ್ದಾರೆ ಎಂಬ ಸುಳ್ಳು ಹೇಳಿರುವುದು ಅಕ್ಷಮ್ಯ. ಕೂಡಲೇ ಅವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

 

Desk

Recent Posts

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

17 mins ago

ಆರ್​ಸಿಬಿ ಮುಂದಿನ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ…

31 mins ago

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

55 mins ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

1 hour ago

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ: ಆರೆಂಜ್, ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಪ್ರತ್ಯೇಕ ಕಡೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಮಿಂಚು ಮತ್ತು…

1 hour ago

ಆರೋಗ್ಯದ ವೃದ್ಧಿಗೆ ಕಾಮಕಸ್ತೂರಿ ಬೀಜದ ಪಾನಕ

ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಅದೇ ರೀತಿ ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜಗಳನ್ನು ಕುಡಿಯುವುದು ಬಹಳಷ್ಟು…

2 hours ago