Categories: ಕರ್ನಾಟಕ

ರಾಜ್ಯದಲ್ಲಿ ಒಟ್ಟು 83 ತಾಲ್ಲೂಕುಗಳು ಪ್ರವಾಹ ಪೀಡಿತ ; ಸಚಿವ ಆರ್‌ ಅಶೋಕ್‌

ಬೆಂಗಳೂರು: ರಾಜ್ಯದಲ್ಲಿ ಒಟ್ಟು 61 ತಾಲೂಕುಗಳು ಪ್ರವಾಹ ಪೀಡಿತವೆಂದು ಘೋಷಣೆ ಮಾಡಲಾಗಿದ್ದು, ಈಗ ಮತ್ತೆ ಹೊಸದಾಗಿ 22 ತಾಲೂಕು ಪ್ರವಾಹ ಪೀಡಿತವೆಂದು ಘೋಷಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಬೆಳಗಾವಿ, ಚಿಕ್ಕಮಗಳೂರು, ಕಡೂರು, ತರಿಕೆರೆ, ಸೂಪ, ಬಬಲೇಶ್ವರ, ಕೊಲ್ಹಾರ, ಮುದ್ದೆಬಿಹಾಳ, ಮೂಡಿಗೆರೆ ಹೊಸನಗರಗಳ ಜತೆಗೆ ಇನ್ನೂ ಕೆಲವು ತಾಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ಅತಿವೃಷ್ಟಿ ತಾಲೂಕಿನಲ್ಲಿ ಪರಿಹಾರೋಪಾಯಗಳನ್ನು ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲೂ 50 ಕ್ಕೂ ಹೆಚ್ಚು ರಸ್ತೆಗಳಲ್ಲಿ ನೀರು ನಿಲ್ಲುತ್ತಿದ್ದು ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.ಚಂಡಮಾರುತದ ಅಬ್ಬರದ ಬಗ್ಗೆಯೂ ಅಲರ್ಟ್ ಕೊಡಲಾಗಿದೆ. ಕರಾವಳಿ ಭಾಗದ 40 ಕಡೆ ಅನುಷ್ಠಾನ ಮಾಡಲಾಗುತ್ತಿದೆ. ಅಲಾರಾಂ ಸಿಸ್ಟಂಗಳನ್ನು ಮಾಡುತ್ತಿದ್ದೇವೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಹಣ ಬರಲಿದೆ. ಒಂದೊಂದು ಸಿಸ್ಟಂಗೆ 12 ಕೋಟಿ ಖರ್ಚಾಗುತ್ತದೆ ಎಂದು ಸಚಿವರು ಹೇಳಿದರು. ಈ ಅಲಾರಂ ಆರೇಳು ಕಿಮೀವರೆಗೆ ಇದು ಸೈರನ್ ಮಾಡಲಿದೆ. ಚಂಡಮಾರುತಗಳ ಸುಳಿವನ್ನ ನೀಡಲಿದೆ. ಇದು ಕರಾವಳಿ ಭಾಗದ ಜನರಿಗೆ ಅನುಕೂಲವಾಗಲಿದೆ. ಮೀನುಗಾರರಿಗೆ ಇದು ಹೆಚ್ಚು ಉಪಯೋಗವಾಗಲಿದೆ ಎಂದರು.

Indresh KC

Recent Posts

ಪುಸ್ತಕದಲ್ಲಿ ಬೈಬಲ್‌ ಪದ ಬಳಕೆ : ಕರೀನಾ ಕಪೂರ್‌ಗೆ ಕೋರ್ಟ್‌ ನೋಟಿಸ್‌

ಗರ್ಭಧಾರಣೆಗೆ (ಪ್ರಗ್ನೆನ್ಸಿ) ಸಂಬಂಧಿಸಿದಂತೆ ಬರೆದ ಪುಸ್ತಕದ ಶೀರ್ಷಿಕೆಯಲ್ಲಿ ‘ಬೈಬಲ್’ ಪದ ಬಳಕೆ ಮಾಡಿದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ಬಾಲಿವುಡ್ ನಟಿ ಕರೀನಾ…

7 mins ago

ಭಯೋತ್ಪಾದಕ ಕೃತ್ಯದಲ್ಲಿ ಭಾಗಿ: ಉಗ್ರರ ಇಬ್ಬರು ಸಹಚರರ ಬಂಧನ

ಉಗ್ರರ ಇಬ್ಬರು ಸಹಚರರನ್ನು ಜಮ್ಮು–ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

21 mins ago

ಗುಜರಾತ್ ತಂಡದ ನಾಯಕ ಶುಭಮನ್ ಗಿಲ್​ಗೆ ಮತ್ತೆ 24 ಲಕ್ಷ ರೂ. ದಂಡ

ಶುಕ್ರವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 35 ರನ್‌ಗಳಿಂದ ಜಯಗಳಿಸಿದ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್…

21 mins ago

ಟಿ20 ವಿಶ್ವಕಪ್​ಗೆ ಮುನ್ನ ರಿಷಭ್​ ಪಂತ್​​ಗೆ ನಿಷೇಧ, 30 ಲಕ್ಷ ರೂ. ದಂಡ

17ನೇ ಆವೃತ್ತಿಯ ಐಪಿಎಲ್​ನ 62ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನಡುವೆ ಹೈವೋಲ್ಟೇಜ್ ಪಂದ್ಯ…

46 mins ago

ʼರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿ ರೈತರಿಗೆ ನೆರವಾಗಬೇಕುʼ

ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿ ರೈತರಿಗೆ ನೆರವಾಗಬೇಕು ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

48 mins ago

ಪ್ರವಾಹಕ್ಕೆ ತತ್ತರಿಸಿ ಹೋದ ಅಫ್ಗಾನಿಸ್ತಾನ : 200ಕ್ಕೂ ಹೆಚ್ಚು ಜನ ಬಲಿ

ಅಫ್ಘಾನಿಸ್ತಾನದಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿದೆ. ಈ ಪ್ರವಾಹದಿಂದಾಗಿ ಸುಮಾರು 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆ ಶನಿವಾರ…

1 hour ago