Categories: ಕರ್ನಾಟಕ

ರಾಜ್ಯದಲ್ಲಿ ‘ಆನ್ ಲೈನ್ ಗೇಮ್ ‘ ಬ್ಯಾನ್

ಆನ್‌ ಲೈನ್‌ ಜೂಜನ್ನು (ಇ-ಗ್ಯಾಂಬ್ಲಿಂಗ್‌) ನಿಷೇಧಿಸಿ ರಾಜ್ಯ ಸರಕಾರ ಭಾನುವಾರ ಆದೇಶ ಜಾರಿ ಮಾಡಿದೆ. ಸರಕಾರದ ಈ ನಿರ್ಧಾರದಿಂದ ಡ್ರೀಮ್ ಇಲೆವೆನ್ , ಪೇಟಿಎಂ ಫಸ್ಟ್ ಗೇಮ್ ಸೇರಿ ಎಲ್ಲಾ ಪ್ರಮುಖ ಆನ್‌ ಲೈನ್‌ ಗೇಮ್ ಗಳಿಗೆ ಬ್ರೇಕ್ ಬಿದ್ದಂತಾಗಿದೆ.

ರಾಜ್ಯದಲ್ಲಿ ಆನ್‌ಲೈನ್‌ ಜೂಜು ಅಥವಾ ಬೆಟ್ಟಿಂಗ್‌ಗೆ ನಿಷೇಧ ಹೇರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿತ್ತು. ಕರ್ನಾಟಕ ಪೊಲೀಸ್‌ ಕಾಯ್ದೆ, 1963ಕ್ಕೆ ತಿದ್ದುಪಡಿ ತಂದು ಕಂಪ್ಯೂಟರ್‌ ಡಿವೈಸ್‌, ಮೊಬೈಲ್, ಮೊಬೈಲ್‌ ಆಪ್ , ಎಲೆಕ್ಟ್ರಾನಿಕ್‌ ಸಾಧನ ಬಳಸಿ ಆನ್‌ಲೈನ್‌ ಮೂಲಕ ಹಣದ ಅವ್ಯವಹಾರ ನಡೆಸುವ ಜೂಜಾಟವನ್ನು ನಿಷೇಧಿಸಲಾಗಿದೆ.

ಈ ಬಗ್ಗೆ ಹೈಕೋರ್ಟ್‌ಗೆ ರಿಟ್‌ ಅರ್ಜಿಯೂ ಸಲ್ಲಿಕೆಯಾಗಿದ್ದು, ಆನ್‌ಲೈನ್‌ ಬೆಟ್ಟಿಂಗ್‌ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳುವಂತೆ ಸರಕಾರಕ್ಕೆ ಹೈಕೋರ್ಟ್‌ ಹಲವು ಬಾರಿ ತಾಕೀತು ಮಾಡಿತ್ತು.

ಆನ್‌ಲೈನ್‌ ಮೂಲಕ ಗೇಮ್‌ ಆಡುವುದು, ಬೆಟ್ಟಿಂಗ್‌, ಟೋಕನ್‌ ಮೂಲಕ ಹಣದ ಆಟ ಆಡುವುದು, ಎಲೆಕ್ಟ್ರಾನಿಕ್‌ ಮನಿ, ಯಾವುದೇ ಆಟಕ್ಕೆ ಆನ್‌ಲೈನ್‌ ಮೂಲಕ ಹಣದ ವರ್ಗಾವಣೆ ಮಾಡುವುದಕ್ಕೆ ಇನ್ನು ಮುಂದೆ ನಿಷೇಧವಿರಲಿದ್ದು, ಅಪರಾಧ ಎಂದು ಪರಿಗಣಿಸಲಾಗುತ್ತದೆ.

Sneha Gowda

Recent Posts

ಕಿಂಗ್ಸ್‌-ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ: ಕೊಹ್ಲಿ ಕೆಣಕಿ ಉಳಿದವರುಂಟೇ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ…

8 mins ago

ಭಾರೀ ಗಾಳಿ ಮಳೆಗೆ ಮನೆಯ ಗೇಟ್ ಬಿದ್ದು ಬಾಲಕಿ ಮೃತ್ಯು

ಮಳೆ ಜತೆಗೆ ರಭಸವಾಗಿ ಬೀಸಿದ ಬಿರುಗಾಳಿಗೆ ಮನೆಯ ಗೇಟ್ ಕಿತ್ತು ಬಂದಿದ್ದು, ಇದೇ ವೇಳೆ ಮನೆಯ ಮುಂದೆ ಆಟವಾಡುತ್ತಿದ್ದ 7…

12 mins ago

ʼಮೇ 18-19 ಹಳ್ಳಿಗಟ್ಟು ಬೋಡ್ ನಮ್ಮೆ: ಮೇ 11 ರಂದು ದೇವ ಕಟ್ಟ್ ಬೀಳುವುದುʼ

ಕೆಸರಿನ ಓಕುಳಿಯ ಹಬ್ಬವೆಂದು ಖ್ಯಾತಿ ಪಡೆದಿರುವ ಹಳ್ಳಿಗಟ್ಟು ಶ್ರೀ ಭದ್ರಕಾಳಿ ಹಾಗೂ ಶ್ರೀ ಗುಂಡಿಯತ್ ಅಯ್ಯಪ್ಪ ದೇವರ ವಾರ್ಷಿಕ ಬೋಡ್…

35 mins ago

ಪೂಜೆಗೆ ಅರಳಿ ಹೂವು ಬಳಕೆ ನಿಲ್ಲಿಸಲು ಟಿಡಿಬಿ ತೀರ್ಮಾನ

ಕೇರಳದ ತಿರುವಾಂಕೂರು ದೇವಸ್ಥಾನ ಆಡಳಿತ ಮಂಡಳಿಯು (ಟಿಡಿಬಿ) ತನ್ನ ಸುಪರ್ದಿಯಲ್ಲಿರುವ ದೇವಾಲಯಗಳಲ್ಲಿ ಪೂಜೆಗೆ ಅರಳಿ ಹೂವು (ಒಲಿಯಾಂಡರ್‌-ಕಣಗಿಲು ಜಾತಿಗೆ ಸೇರಿದ…

56 mins ago

50 ಕೋ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಂತ್ರಿಮಾಲ್‌: ಬೀಗ ಜಡಿದ ಬಿಬಿಎಂಪಿ

ಸರಿ ಸುಮಾರು 50 ಕೋಟಿಗಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ಗೆ ಬಿಬಿಎಂಪಿ ಬೆಳ್ಳಂಬೆಳಗ್ಗೆಯೇ  ಬೀಗ…

1 hour ago

ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಬೀದಿ ನಾಯಿ : ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ

ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿ ಬೀದಿ ನಾಯಿಗಳು ಕಚ್ಚಿದ ಘಟನೆ ಬೆಳಗಾವಿ ನ್ಯೂ ಗಾಂಧಿನಗರದಲ್ಲಿ ನಡೆದಿದೆ.

1 hour ago