ಕರ್ನಾಟಕ

ಮಾಜಿ ಸಿಎಂ ಕುಮಾರ ಸ್ವಾಮಿ ನಿಂದನೆ ; ಫೇಸ್‌ ಬುಕ್‌ ಪೇಜ್‌ ವಿರುದ್ದ ಜೆಡಿಎಸ್‌ ದೂರು

ಬೆಂಗಳೂರು: ಸ್ಯಾಂಡಲ್‌ ವುಡ್‌ ನಟ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಆರೋಪ ಪ್ರತ್ಯಾರೋಪ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಫೇಸ್‌ ಬುಕ್‌ ನಲ್ಲಿ ನಿಂದಿಸಿದ್ದಕ್ಕೆ ‘ಟ್ರೋಲ್ ಮಗ’ ಪೇಜ್ ಅಡ್ಮಿನ್ ವಿರುದ್ಧ ಜೆಡಿಎಸ್ ಮಂಗಳವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಈ ಪ್ರಕರಣದಲ್ಲಿ ಹೆಚ್‍ಡಿಕೆ ಕೈವಾಡವಿದೆ ಆರೋಪಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೆಚ್‍ಡಿಕೆ ಇರುವ ಫೋಟೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿತ್ತು. ಇದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕೆಂಗಣ್ಣಿಗೆ ಗುರಿಯಾಗಿತ್ತು. ಫೋಟೋ ವೈರಲ್ ಬಗ್ಗೆ ಸ್ಪಷ್ಟನೆ ಕೊಡುವ ಮೂಲಕ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ಹೀಗಿದ್ದರೂ ಇಂದ್ರಜಿತ್ ಲಂಕೇಶ್ ಹಾಗೂ ಕುಮಾರಸ್ವಾಮಿಯ ಭಾವಚಿತ್ರಗಳನ್ನ ಬಳಸಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಹೀಗಾಗಿ ಈಗ ಫೋಟೋವನ್ನು ವೈರಲ್ ಮಾಡಿ ಅವಾಚ್ಯ ಪದ ಬಳಕೆ ಮಾಡಿ ನಿಂದಿಸಿದ್ದಾರೆ ಎಂದು ದೂರು ಜೆಡಿಎಸ್ ಕಾನೂನು ಘಟಕದ ಕಾರ್ಯದರ್ಶಿ ಪ್ರದೀಪ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ‘ಟ್ರೋಲ್ ಮಗ’ಪೇಜ್ ಅಡ್ಮಿನ್ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ಕೊಟ್ಟಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಇಂದ್ರಜಿತ್ ಲಂಕೇಶ್ ಇರುವ ಫೋಟೋವನ್ನು ವೈರಲ್ ಮಾಡಲಾಗುತ್ತಿದೆ. ಸೂತ್ರಧಾರಿ ಮತ್ತು ಪಾತ್ರಧಾರಿ ಎಂಬ ಪದದ ಜೊತೆಗೆ ಅವಾಚ್ಯ ಪದ ಬಳಕೆ ಆರೋಪ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಮಾಜಿ ಕುಮಾರಸ್ವಾಮಿ ಅವರನ್ನು ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ಟ್ರೋಲ್ ಪೇಜ್ ಆಡ್ಮಿನ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ. ಪೋಲೀಸರು ತನಿಖೆ ನಡೆಸುತಿದ್ದಾರೆ.

Indresh KC

Recent Posts

ತೆಂಗಿನ ಗರಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ ಮಹಿಳೆಯರು

ಆಡಳಿತ ನಾಯಕರ ನಿರ್ಲಕ್ಷ್ಯದಿಂದ ಬೇಸತ್ತು ಸ್ವತಃ ಮಹಿಳೆಯರೇ ಸೇರಿ ತೆಂಗಿನ ಗರಿಯ ಮೂಲಕ ಬಸ್‌ ನಿಲ್ದಾಣ ನಿರ್ಮಿಸಿ ಘಟನೆ ಉತ್ತರ…

6 hours ago

ಮಗುವಿನ ಬೆರಳಿನ ಬದಲು ನಾಲಗೆಗೆ ಶಸ್ತ್ರಚಿಕಿತ್ಸೆ ಮಾಡಿ ವೈದ್ಯರ ಯಡವಟ್ಟು !

ಕೇರಳದ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಇಂದು 4 ವರ್ಷದ ಬಾಲಕಿಯೊಬ್ಬಳಿಗೆ ಕೈ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಬದಲು…

7 hours ago

ತೀರ್ಥದಲ್ಲಿ ನಿದ್ರೆ ಬರುವ ಮಾತ್ರೆ ಬೆರೆಸಿ ಅರ್ಚಕನಿಂದ ಟಿವಿ ನಿರೂಪಕಿಯ ಅತ್ಯಾಚಾರ

ತಮಿಳುನಾಡಿನ ಖಾಸಗಿ ಟಿವಿ ಚಾನೆಲ್‌ನ ನಿರೂಪಕಿ, ಚೆನ್ನೈನ ಪ್ರಮುಖ ಅಮ್ಮನ್‌ ದೇವಸ್ಥಾನಗಳಲ್ಲಿ ಒಂದಾಗಿರುವ ಕಾಳಿಕಾಂಪಲ್ ದೇವಸ್ಥಾನದ ಅರ್ಚಕ ಕಾರ್ತಿಕ್‌ ಮುನಿಸ್ವಾಮಿ…

7 hours ago

ಮರಿ ಆನೆಗೆ ಕುಟುಂಬದಿಂದ Z+ ಭದ್ರತೆ: ವಿಡಿಯೋ ವೈರಲ್

ಆನೆಗಳು ಕುಟುಂಬ ಸಮೇತ ಕಾಡಿನಲ್ಲಿ ಹಾಯಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವ ಕ್ಯೂಟ್ ದೃಶ್ಯವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ.‌ ಹೌದು. .…

7 hours ago

ಆರ್‌ಸಿಬಿ vs ಸಿಎಸ್‌ಕೆ ಫ್ಯಾನ್ಸ್‌ ಗೆ ಎಚ್ಚರಿಕೆ ಕೊಟ್ಟ ಬೆಂಗಳೂರು ಪೊಲೀಸರು

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಎರಡೂ ತಂಡಗಳಿಗೂ…

8 hours ago

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಮೃತ್ಯು

ಬೋರ್ಡ್ ಪರೀಕ್ಷೆಯಲ್ಲಿ 99.70% ಅಂಕ ಗಳಿಸಿ ಟಾಪರ್ ಆಗಿದ್ದ ಗುಜರಾತ್‌ನ ಮೊರ್ಬಿಯ 16 ವರ್ಷದ ಹುಡುಗಿ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ.

8 hours ago