ಕರ್ನಾಟಕ

ನೂತನ ಮಂತ್ರಿ ಮಂಡಲದ ಸದಸ್ಯರ ಪ್ರಮಾಣ ವಚನ ಸ್ವೀಕಾರ

 

ಬೆಂಗಳೂರು ; ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟಕ್ಕೆ ಒಟ್ಟು 29 ನೂತನ ಸಚಿವರು ಸೇರ್ಪಡೆಯಾಗಿದ್ದಾರೆ. ಇವರಿಗೆ ಮುಖ್ಯ ಮಂತ್ರಿಗಳೇ ನೇರವಾಗಿ ಕರೆ ಮಾಡಿ ಪ್ರಮಾಣ ವಚನಕ್ಕೆ ಆಹ್ವಾನ ನೀಡಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ದೆಹಲಿಯಲ್ಲಿ ಹೈ ಕಮಾಂಡ್​ ಭೇಟಿ ಮಾಡಿ ಸಚಿವರ ಪಟ್ಟಿ ಫೈನಲ್​​​ ಆದ ಬಳಿಕ ನಿನ್ನೆ ರಾತ್ರಿ ಬೆಂಗಳೂರಿಗೆ ವಾಪಸ್ಸಾಗಿದ್ದರು. ಆ ಬಳಿಕ ಸಚಿವ ಸ್ಥಾನ ಸಿಕ್ಕಿರುವ ಶಾಸಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಬುಧವಾರ ಮಧ್ಯಾಹ್ನ 2.15ಕ್ಕೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಮಂತ್ರಿ ಮಂಡಲದಲ್ಲಿ ಈ ಕೆಳಗಿನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ
2.ಆರ್.ಅಶೋಕ್- ಪದ್ಮನಾಭ ನಗರ
3.ಅರವಿಂದ ಲಿಂಬಾವಳಿ- ಮಹದೇವಪುರ
4.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ
5.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು
6.ಉಮೇಶ್ ಕತ್ತಿ- ಹುಕ್ಕೇರಿ
7.ಎಸ್.ಟಿ.ಸೋಮಶೇಖರ್- ಯಶವಂತಪುರ
8.ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
9.ಬೈರತಿ‌ ಬಸವರಾಜ – ಕೆ ಆರ್ ಪುರಂ
10.ಮುರುಗೇಶ್ ನಿರಾಣಿ – ಬಿಳಿಗಿ
11.ಶಿವರಾಂ ಹೆಬ್ಬಾರ್- ಯಲ್ಲಾಪುರ
12.ಶಶಿಕಲಾ ಜೊಲ್ಲೆ- ನಿಪ್ಪಾಣಿ
13.ಕೆಸಿ ನಾರಾಯಣ್ ಗೌಡ – ಕೆ‌ಆರ್ ಪೇಟೆ
14.ಸುನೀಲ್ ಕುಮಾರ್ – ಕಾರ್ಕಳ
15.ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ
16.ಗೋವಿಂದ ಕಾರಜೋಳ-ಮುಧೋಳ
17.ಮುನಿರತ್ನ- ಆರ್ ಆರ್ ನಗರ
18.ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ
19.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
20.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
21.ಹಾಲಪ್ಪ ಆಚಾರ್ – ಯಲ್ಬುರ್ಗ
22.ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ
23.ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ
24.ಪ್ರಭು ಚೌವ್ಹಾಣ್ – ಔರಾದ್
25.ವಿ ಸೋಮಣ್ಣ – ಗೋವಿಂದ್ ರಾಜನಗರ
26 ಎಸ್ ಅಂಗಾರ-ಸುಳ್ಯ
27 ಆನಂದ್ ಸಿಂಗ್ – ಹೊಸಪೇಟೆ
28.ಸಿ ಸಿ‌ ಪಾಟೀಲ್ – ನರಗುಂದ
29.ಬಿಸಿ ನಾಗೇಶ್ – ತಿಪಟೂರು
ಹೊಸದಾಗಿ ಸಂಪುಟ ಸೇರಿದ 6 ಸಚಿವರು ಈ ಕೆಳಗಿನ ಪಟ್ಟಿಯಲ್ಲಿದ್ದಾರೆ.
1. ಸುನೀಲ್ ಕುಮಾರ್ – ಕಾರ್ಕಳ
2. ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ
3. ಮುನಿರತ್ನ- ಆರ್ ಆರ್ ನಗರ
4. ಹಾಲಪ್ಪ ಆಚಾರ್ – ಯಲ್ಬುರ್ಗ
5. ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ
6. ಬಿ.ಸಿ ನಾಗೇಶ್ – ತಿಪಟೂರು
ಬೊಮ್ಮಾಯಿ ಸಂಪುಟದಲ್ಲಿ ಕೆಲವು ಶಾಸಕರನ್ನು ಸಚಿವ ಸ್ಥಾನದಿಂದ ಕೈ ಬಿಡಲಾಗಿದೆ. ಬಹಳ ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ಮಂತ್ರಿಗಿರಿ ಕೈತಪ್ಪಿದ್ದಕ್ಕೆ ಭಾರೀ ನಿರಾಸೆ ಉಂಟಾಗಿದೆ. ಅರವಿಂದ್ ಲಿಂಬಾವಳಿ ಅವರು ಸಿಎಂ ರೇಸ್​ನಲ್ಲಿದ್ದರು. ಆದರೆ ಮಂತ್ರಿ ಸ್ಥಾನವೂ ಸಿಗದಿರುವುದು ಭಾರೀ ಬೇಸರ ತರಿಸಿದೆ.
ಈ ಕೆಳಗಿನವರು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ.
ಆರ್ ಶಂಕರ್
ಸಿಪಿ ಯೋಗೇಶ್ವರ್
ಅರವಿಂದ್ ಲಿಂಬಾವಳಿ
ಶ್ರೀಮಂತ ಪಾಟೀಲ್
ಸುರೇಶ್ ಕುಮಾರ್
ಜಗದೀಶ್ ಶೆಟ್ಟರ್
ಲಕ್ಷಣಸವದಿ
ಬಿ ಯಸ್‌ ಯಡಿಯೂರಪ್ಪ ಅವರು ನೀಡಿದ್ದ ಸಚಿವರ ಪಟ್ಟಿಗೂ ಹೈಕಮಾಂಡ್‌ ಮಣೆ ಹಾಕಿಲ್ಲ. ಬಿಎಸ್​ವೈ ನೀಡಿದ್ದ ಪಟ್ಟಿಯಲ್ಲಿ ಎಂ ಪಿ ರೇಣುಕಾಚಾರ್ಯ, ಮಾಡಾಳು ವೀರೂಪಾಕ್ಷಪ್ಪ ಹರತಾಳು ಹಾಲಪ್ಪ,ರಾಜೂಗೌಡ ನಾಯಕ್
ಎಂಪಿ ಕುಮಾರಸ್ವಾಮಿ,ಪ್ರೀತಂಗೌಡ,ಶಿವನಗೌಡ ನಾಯಕ್,ಬಾಲಚಂದ್ರ ಜಾರಕಿಹೊಳಿ ಮತ್ತು ತಿಪ್ಪಾರೆಡ್ಡಿ ಅವರ ಹೆಸರು ಇತ್ತು ಎನ್ನಲಾಗಿದೆ.
ಈ ಬಾರಿ 13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲಿಲ್ಲ. ಮೈಸೂರು,ಕಲಬುರ್ಗಿ,ರಾಮನಗರ,ಕೊಡಗು,ರಾಯಚೂರು,ಹಾಸನ,ವಿಜಯಪುರ,ಬಳ್ಳಾರಿ,ದಾವಣಗೆರೆ,ಕೋಲಾರ,ಯಾದಗಿರಿ ಮತ್ತು ಚಿಕ್ಕಮಗಳೂರು ಸಚಿವ ವಂಚಿತವಾಗಿವೆ. ಆರು ಜಿಲ್ಲೆಗಳಿಂದ ತಲಾ ಇಬ್ಬರು ಮಂತ್ರಿಗಳನ್ನು ಆಯ್ಕೆ ಮಾಡಲಾಗಿದೆ.

Indresh KC

Recent Posts

ಹೊಳೆಯಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಮೃತ್ಯು

ಹೊಳೆಯಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಕಡವಿನಕಟ್ಟೆಯಲ್ಲಿ ನಡೆದಿದೆ.

1 min ago

ರಸ್ತೆ ತಿರುವಿನ ಅಪಾಯಕಾರಿ ವಿದ್ಯುತ್ ತಂತಿಗಳು: ಸುರಕ್ಷಿತ ಎತ್ತರಕ್ಕೆ ಏರಿಕೆ

ಸಾಣೂರಿನ ಲೈನ್ ಮ್ಯಾನ್  ಸುಭಾಷ್ ರವರು ತಮ್ಮ ತಂಡದೊಂದಿಗೆ ಮೇ 17 ರಂದು ಮುರತಂಗಡಿ ಇರುವತ್ತೂರು ರಸ್ತೆ ತಿರುವಿನಲ್ಲಿರುವ ವಿದ್ಯುತ್…

16 mins ago

ಕೇಸ್​ನಲ್ಲಿ ರಿಕವರಿ ಮಾಡಿದ್ದ ಅರ್ಧ ಕೆ.ಜಿ ಚಿನ್ನ ಕದ್ದ ಪೊಲೀಸ್​ ಪೇದೆ

ರಕ್ಷಕರೇ ಭಕ್ಷಕರಾದ ಘಟನೆಯೊಂದು ಕೋಲಾರದಲ್ಲಿ ನಡೆದಿದೆ . ಕಳವು ಕೇಸ್​ನಲ್ಲಿ ರಿಕವರಿ ಮಾಡಿದ್ದ 1 ಕೆಜಿ 408 ಗ್ರಾಂ ಚಿನ್ನದಲ್ಲಿ…

34 mins ago

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ: ಕಂಗನಾ ರಣಾವತ್

ಪ್ರಧಾನಿ ನರೇಂದ್ರ ಮೋದಿಯವರು ಮಣ್ಣಿನ ಮಗ, ಬಡ ಕುಟುಂಬದಲ್ಲಿ ಹುಟ್ಟಿ ದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಂದು ಹಿಮಾಚಲ…

50 mins ago

ವಾಸವಿ ಯುವಜನ ಸಂಘದಿಂದ ರಕ್ತದಾನ ಶಿಬಿರ : ದಿನೇಶ್‌ಗುಪ್ತ

ನಗರದ ವಾಸವಿ ಯುವಜನ ಸಂಘ ಮತ್ತು ವಾಸವಿ ಕ್ಲಬ್‌ ಆಶ್ರಯದಲ್ಲಿ ಇಂದು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು…

1 hour ago

ಗ್ರಾಮಸ್ಥರ ಆರೋಗ್ಯ ಸುರಕ್ಷತೆಗೆ ಕ್ರಮಕೈಗೊಳ್ಳಲು ಬಿಜೆಪಿ ಒತ್ತಾಯ

ಡೆಂಗ್ಯೂ ಸೋಂಕಿನಿಂದ ಬಳಲುತ್ತಿರುವ ಗ್ರಾಮಕ್ಕೆ ತಜ್ಞ ವೈದ್ಯಾಧಿಕಾರಿ ಗಳ ತಂಡವನ್ನು ರಚಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು ಎಂದು ಎರೆಹಳ್ಳಿ ಗ್ರಾಮಸ್ಥರು…

1 hour ago