Categories: ಕರ್ನಾಟಕ

ನಾರ್ವೆ ಜನರ ಮನಸೆಳೆದ ಕರಾವಳಿಯ ಶಿರವಾಡ ರೈಲ್ವೇ ನಿಲ್ದಾಣದ ಸೊಬಗು

ಕಾರವಾರ: ನಮ್ಮ ಪಶ್ಚಿಮ ಘಟ್ಟಗಳು ನಿತ್ಯ ಹರಿದ್ವರ್ಣ ಕಾಡುಗಳ ಬೀಡು. ಈ ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ಕರಾವಳಿಯ ಶಿರವಾಡದ ಕೊಂಕಣ ರೈಲ್ವೆ ನಿಲ್ದಾಣದ ಸೌಂದರ್ಯವು ವಿದೇಶಗಳಲ್ಲೂ ಮನಸೂರೆಗೊಳ್ಳುತ್ತಿದೆ. ಜಗತ್ತಿನಲ್ಲೇ ಪ್ರಕೃತಿ ಸೌಂದರ್ಯಕ್ಕೆ ಪ್ರಸಿದ್ಧವಾಗಿರುವ ನಾರ್ವೆ ದೇಶದ ಮಾಜಿ ಸಚಿವರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ರೈಲು ನಿಲ್ದಾಣದ ಚಿತ್ರವನ್ನು ಪ್ರಕಟಿಸಿ ‘ಅದ್ಭುತ’ ಎಂದಿದ್ದಾರೆ. ಇದು ಆ ದೇಶದ ಜನತೆಯ ಮನ ಸೆಳೆದಿದೆ.
ನಾರ್ವೆಯ ಅಂತರರಾಷ್ಟ್ರೀಯ ಅಭಿವೃದ್ಧಿ ಖಾತೆಯ ಮಾಜಿ ಸಚಿವ ಎರಿಕ್ ಸೊಲ್ಹೀಮ್ ಎಂಬುವವರು, ಜುಲೈ 6ರಂದು ಕಾರವಾರದ ರೈಲು ನಿಲ್ದಾಣದ ಚಿತ್ರವನ್ನು ಟ್ವೀಟ್ ಮಾಡಿ ‘ಅದ್ಭುತ ಹಸಿರು. ಕರ್ನಾಟಕದ ಕಾರವಾರದಲ್ಲಿರುವ ಈ ರೈಲು ನಿಲ್ದಾಣವು, ಭಾರತದ ಅತ್ಯಂತ ಹಸಿರಾದ ನಿಲ್ದಾಣಗಳಲ್ಲಿ ಒಂದಾಗಿರಲೇಬೇಕು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಜುಲೈ 13ರ ಸಂಜೆ 7.30ರ ತನಕ 6247 ಮಂದಿ ‘ಲೈಕ್’ ಮಾಡಿದ್ದು, 815 ಮಂದಿ ಪುನಃ ಟ್ವೀಟ್ ಮಾಡಿದ್ದಾರೆ. ಕಾರವಾರದವರೂ ಸೇರಿದಂತೆ ನೂರಾರು ಮಂದಿ ಕಮೆಂಟ್ ಮಾಡಿದ್ದು, ಎರಿಕ್ ಅವರ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ. ಟ್ವಿಟರ್‌ ನಲ್ಲಿ ವೈರಲ್‌ ಆಗಿರುವ ಈ ಚಿತ್ರವನ್ನು ಸೆರೆಹಿಡಿದವರು ಕಾರವಾರದ ರೋಶನ್‌ ಕಾನಡೆ. 2020ರಲ್ಲಿ ಅವರ ಕ್ಯಾಮೆರಾ ಕಣ್ಣಿನಲ್ಲಿ ಈ ಹಸಿರ ಸೊಬಗು ಸೆರೆಯಾಗಿತ್ತು. ರೈಲು ನಿಲ್ದಾಣದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ದಟ್ಟವಾದ ಕಾಡಿನಿಂದ ಕೂಡಿರುವ ಬೃಹತ್ ಬೆಟ್ಟವಿದೆ. ಅದನ್ನು ಸೀಳಿ ನಿರ್ಮಿಸಲಾದ ಸುರಂಗದಲ್ಲಿ ರೈಲು ಹಳಿ ಅಳವಡಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ‘ವಿಸ್ಟಾಡೋಮ್’ ಬೋಗಿಗಳ ಸಂಚಾರಕ್ಕೆ ನೈಋತ್ಯ ರೈಲ್ವೆಯು ಜುಲೈ 11ರಿಂದ ಚಾಲನೆ ನೀಡಿದೆ. ಅದೇ ಮಾದರಿಯಲ್ಲಿ ಕಾರವಾರದಿಂದ ಸಂಚರಿಸುವ ರೈಲಿಗೂ ವಿಸ್ಟಾ ಡೋಮ್‌ ಬೋಗಿಗಳನ್ನು ಅಳವಡಿಸಿ ಪ್ರಯಾಣಿಕರಿಗೆ ವಿನೂತನ ಅನುಭವ ಒದಗಿಸಬೇಕು ಎಂದು ಪ್ರಕೃತಿ ಪ್ರಿಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
Indresh KC

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

30 mins ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

47 mins ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

1 hour ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

1 hour ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

3 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

3 hours ago