ಬೆಂಗಳೂರು

ನವಂಬರ್. 8 ರಿಂದ ಅಂಗನವಾಡಿ ಆರಂಭ

ಬೆಂಗಳೂರು: ನವೆಂಬರ್ 8 ರಿಂದ ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ದಿನಕ್ಕೆ ಎರಡು ಗಂಟೆಗಳ ಕಾಲ ಅಂಗನವಾಡಿಗಳು ಕಾರ್ಯನಿರ್ವಹಿಸಲಿವೆ. ಎಲ್ಕೆಜಿ-ಯುಕೆಜಿ ಆರಂಭಿಸಲು ಅನುಮತಿ ನೀಡಿಲ್ಲ.ಅಂಗನವಾಡಿ ಜೊತೆಗೆ ಎಲ್ಕೆಜಿ-ಯುಕೆಜಿ ಸೇರಿದಂತೆ ನರ್ಸರಿ ಶಾಲೆಗಳ ಆರಂಭಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಮಾಂಟೆಸರಿಗಳು ಒತ್ತಾಯ ಮಾಡಿದ್ದರೂ ಸರ್ಕಾರ ಅಂಗನವಾಡಿಗೆ ಮಾತ್ರ ಅನುಮತಿ ನೀಡಿದೆ.ರಾಜ್ಯಾದ್ಯಂತ 61,227 ಮುಖ್ಯ ಅಂಗನವಾಡಿ ಕೇಂದ್ರಗಳು ಮತ್ತು 3331 ಮಿನಿ ಅಂಗನವಾಡಿ ಕೇಂದ್ರಗಳು ಆರಂಭವಾಗಲಿವೆ. 3 ರಿಂದ 6 ವರ್ಷದೊಳಗಿನ ಸುಮಾರು 15.94 ಲಕ್ಷ ಮಕ್ಕಳು ಇದ್ದಾರೆ. ಕೊರೋನಾ ಕಾರಣದಿಂದ ಕಳೆದ 18 ತಿಂಗಳಿನಿಂದ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು. ಈಗ ಪುನಾರಂಭಿಸಲು ಸರ್ಕಾರ ಅನುಮತಿ ನೀಡಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.

Swathi MG

Recent Posts

ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ರಘುಪತಿ ಭಟ್ ನಾಮಪತ್ರ ಸಲ್ಲಿಕೆ

ನೈರುತ್ಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ. ರಘುಪತಿ ಭಟ್ ಅವರು ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ…

8 mins ago

ಮೂರು ಕಾಲು, ನಾಲ್ಕು ಕೈ ಹಾಗೂ ಒಂದು ಶಿಶ್ನವನ್ನು ಹೊಂದಿದ ಸಯಾಮಿ ಅವಳಿ ಮಕ್ಕಳಿಗೆ ಜನ್ಮ

ಒಂದು ದೇಹ ಎರು ಜೀವ ಎಂಬಂತೆ ಮಹಿಳೆಯೊಬ್ಬರು ಮೂರು ಕಾಲು, ನಾಲ್ಕು ಕೈ ಹಾಗೂ ಒಂದು ಶಿಶ್ನವನ್ನು ಹೊಂದಿರುವ ಸಯಾಮಿ…

20 mins ago

ಕೋವಿಶೀಲ್ಡ್ ನಂತೆ ‘ಕೋವ್ಯಾಕ್ಸಿನ್’ ಕೂಡ ಅಡ್ಡಪರಿಣಾಮಗಳನ್ನು ಹೊಂದಿದೆ: ವರದಿ

ಕೋವಿಶೀಲ್ಡ್ ಅಡ್ಡಪರಿಣಾಮದ ಸುದ್ದಿ ಹಸಿರಾಗಿರುವಂತೆಯೇ ಇತ್ತ ಭಾರತದಲ್ಲಿ ವ್ಯಾಪಕವಾಗಿ ನೀಡಲಾಗಿದ್ದ ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡ ಪರಿಣಾಮಗಳು ಇವೆ…

30 mins ago

ಹಾವುಗಳ ರಕ್ಷಣೆಗೆ ಸಹಾಯವಾಣಿ ಬಿಡುಗಡೆ ಮಾಡಿದ ಬೆಂಗಳೂರು ಮಹಾನಗರ ಪಾಲಿಕೆ

ಹಾವುಗಳ ರಕ್ಷಣೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ. ಈ ಕುರಿತು ಡಿಐಪಿಆರ್‌ ಕರ್ನಾಟಕ ಎಕ್ಸ್‌ ಖಾತೆಯಲ್ಲಿ…

38 mins ago

ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಪ್ರಾರಂಭ

ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

53 mins ago

ಮೋದಿ ರಾಕ್ಷಸನಿದ್ದಂತೆ, ಪುನಃ ಗೆದ್ದರೆ‌ ಸರ್ವಾಧಿಕಾರಿ: ಮುಖ್ಯಮಂತ್ರಿ ಚಂದ್ರು

75 ವರ್ಷಕ್ಕೆ ಸಕ್ರಿಯ ರಾಜಕಾರಣದಿಂದ ಬಿಜೆಪಿಯ ಅನೇಕ ಮುಖಂಡರಿಗೆ ನಿವೃತ್ತಿಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಂದಿನ ವರ್ಷ 75 ತುಂಬುತ್ತದೆ.…

1 hour ago