ಕಾಳಗಿ: ಸೋಮವಾರ ರಾತ್ರಿಯಿಂದ ಇಂದು ಬೆಳಗ್ಗೆವರೆಗೆ ಸುರಿದ ಭಾರೀ ಮಳೆಯಿಂದಾಗಿ ಕಲಬುರ್ಗಿ–ಕಾಳಗಿ ರಾಜ್ಯಹೆದ್ದಾರಿ ಬಂದ್ ಆಗಿದೆ.
ವಾಹನಗಳು ಮುಂದಕ್ಕೆ ಹೋಗಲಾಗದೆ ಕೋರವಾರ ಮತ್ತು ವಚ್ಚಾ ಬಳಿಯ ಹೆದ್ದಾರಿ ಮೇಲೆ ನಿಂತುಬಿಟ್ಟಿದೆ. ಇದರಿಂದಾಗಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡುತ್ತಿದ್ದಾರೆ.