Categories: ಕರ್ನಾಟಕ

ದೇಶದಲ್ಲಿ ಕೊರೋನಾ ಏರಿಳಿತ : ಒಂದೇ ದಿನ 42,625 ಮಂದಿಗೆ ಸೋಂಕು

ನವದೆಹಲಿ, -ಕೊರೊನಾ ಸೋಂಕಿನ ಪ್ರಮಾಣದಲ್ಲಿ ಹಾವು-ಏಣಿ ಆಟ ಮುಂದುವರೆದಿದೆ. ನಿನ್ನೆಯಷ್ಟೆ 30 ಸಾವಿರದಷ್ಟಿದ್ದ ಸೋಂಕಿನ ಸಂಖ್ಯೆ ಇಂದು ದಿಢೀರ್ 42,625ಕ್ಕೆ ಏರಿಕೆಯಾಗಿದೆ. ಇಂದಿನ ಏರಿಕೆಯಿಂದಾಗಿ ದೇಶದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,17,625 ಕೋಟಿಯಷ್ಟಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಉಲ್ಲೇಖಿಸಿವೆ.
ನಿನ್ನೆಯಿಂದ 562 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಕೊರೊನಾ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 4,25,757 ಲಕ್ಷಕ್ಕೆ ಹೆಚ್ಚಳವಾಗಿದೆ.ಸೋಂಕಿನ ಪ್ರಮಾಣದಲ್ಲಿ ಏರಿಳಿಕೆಯಾಗುತ್ತಿರುವುದರ ಜತೆಗೆ ಕಳೆದ 24 ಗಂಟೆಗಳಲ್ಲಿ ಹೆಚ್ಚುವರಿ 5395 ಮಂದಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 4,10,353 ಲಕ್ಷಕ್ಕೆ ಹೆಚ್ಚಳಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.ನಿನ್ನೆ ಒಂದೇ ದಿನ 18 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಇದರೊಂದಿಗೆ ದೇಶದ 47 ಕೋಟಿಗೂ ಹೆಚ್ಚು ಮಂದಿಯ ಕೊರೊನಾ ಪರೀಕ್ಷೆ ನಡೆಸಿದಂತಾಗಿದೆ.ದಿನದ ಕೊರೊನಾ ಪಾಸಿಟಿವಿಟಿ ದರ ಶೇ.2.31ಕ್ಕೆ ಸೀಮಿತಗೊಂಡಿದ್ದರೆ, ವಾರದ ಪಾಸಿಟಿವಿಟಿ ರೇಟ್ ಶೇ.2.36 ರಷ್ಟಿದೆ.3.17 ಕೋಟಿ ಸೋಂಕಿತರ ಪೈಕಿ ಈಗಾಗಲೇ 3.09 ಕೋಟಿಯಷ್ಟು ಮಂದಿ ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ.
ಸೋಂಕು ಹೆಚ್ಚಳಗೊಳ್ಳುತ್ತಿದ್ದಂತೆ ಲಸಿಕೆ ಹಾಕಿಸಿಕೊಳ್ಳಲು ಜನ ಮುಗಿಬಿಳುತ್ತಿದ್ದು, ಇದುವರೆಗೂ 48.52 ಕೋಟಿ ಮಂದಿಗೆ ಲಸಿಕೆ ಹಾಕಲಾಗಿದೆ.ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 562 ಮಂದಿ ಬಲಿಯಾಗಿದ್ದು, ಇದರಲ್ಲಿ ಸೋಂಕು ಹೆಚ್ಚಳಗೊಳ್ಳುತ್ತಿರುವ ಮಹಾರಾಷ್ಟ್ರದಲ್ಲಿ 177 ಹಾಗು ಕೇರಳದಲ್ಲಿ 148 ಮಂದಿ ಸಾವನ್ನಪ್ಪಿರುವುದು ಉಲ್ಲೇಖಾರ್ಹ.ಕೊರೊನಾ ಸೋಂಕಿನಿಂದ ಮೃತಪಟ್ಟ 4,25 ಲಕ್ಷ ಮಂದಿಯಲ್ಲಿ ಶೇ.70 ರಷ್ಟು ಮಂದಿ ಇನ್ನಿತರ ಕಾಯಿಲೆಗಳಿಂದ ನರಳುತ್ತಿದ್ದವರೆ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.

Indresh KC

Recent Posts

ಆಮ್ ಆದ್ಮಿ ಪಕ್ಷಕ್ಕೆ 7 ಕೋಟಿ ರೂ ವಿದೇಶಿ ಫಂಡಿಂಗ್: ತನಿಖೆ ಕೋರಿ ಗೃಹ ಸಚಿವಾಲಯಕ್ಕೆ ಇಡಿ ಪತ್ರ

ಆಮ್ ಆದ್ಮಿ ಪಕ್ಷಕ್ಕೆ  ವಿದೇಶಿ ಮೂಲಗಳಿಂದ 7 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಿಕ್ಕಿರುವ ಬಗ್ಗೆ ಎಫ್‌ಸಿಆರ್‌ಎ ತನಿಖೆಯನ್ನು ಕೋರಿ…

47 mins ago

ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಸಾವು

ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗ…

1 hour ago

ಕಾಂಗ್ರೆಸ್ ಸರ್ಕಾರದ ಒಂದು ವರ್ಷ, ಕೊಲೆಗಡುಕರಿಗೆ ಹರ್ಷ: ಲೇವಡಿ ಮಾಡಿದ ಆರ್.‌ ಅಶೋಕ್‌

ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ರಾಜ್ಯ ಸರ್ಕಾರದ…

1 hour ago

ಚಿಕ್ಕಮಗಳೂರು: ಫಲಾನುಭವಿಗಳಿಗೆ ಯಶಸ್ವಿನಿ ಕಾರ್ಡ್ ವಿತರಣೆ

ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…

2 hours ago

ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಿಲ್ಲಿಸಿ ಪರಿಹಾರ ನೀಡಿ: ರಮೇಶ ಹೂಗಾರ ಮನವಿ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…

2 hours ago

ಅಂಜಲಿ ಕೊಲೆ ಪ್ರಕರಣ ಸಿಐಡಿಗೆ, ನೇಹಾ ಕೇಸ್​ ಸಿಬಿಐಗೆ ಕೊಡಲ್ಲ: ಗೃಹ ಸಚಿವ

ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…

2 hours ago