ಕರ್ನಾಟಕ

ದುರ್ಬಲಗೊಂಡ ಮುಂಗಾರು, ಸಾಧಾರಣ ಮಳೆ ಮುಂದುವರಿಕೆ

ಬೆಂಗಳೂರು, – ರಾಜ್ಯ ದಲ್ಲಿ ನೈಋತ್ಯ ಮುಂಗಾರು ದುರ್ಬಲ ಗೊಂಡಿದ್ದು, ಒಳನಾಡಿನಲ್ಲಿ ಚದುರಿ ದಂತೆ ಸಾಧಾರಣ ಮಳೆ ಮುಂದು ವರಿಯುವ ಮುನ್ಸೂಚನೆಗಳಿವೆ. ಜೂನ್ ಹಾಗೂ ಜುಲೈನಲ್ಲಿ ಉತ್ತಮ ಮಳೆಯಾಗಿತ್ತು. ಆದರೆ, ಆಗಸ್ಟ್ 1 ರಿಂದ 10ರ ಅವಧಿಯಲ್ಲಿ ಮುಂಗಾರು ಕ್ಷೀಣಗೊಂಡಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಶೇ.42ರಷ್ಟು ಮಳೆ ಕೊರತೆ ಉಂಟಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಆ.1 ರಿಂದ 10ರ ನಡುವಿನ ಅವಧಿಯಲ್ಲಿ 83 ಮಿಲಿ ಮೀಟರ್ ವಾಡಿಕೆ ಪ್ರಮಾಣದ ಮಳೆಯಾಗಿದ್ದು, ಕೇವಲ 48 ಮಿಮೀನಷ್ಟು ಮಾತ್ರ ಮಳೆಯಾಗಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮಳೆ ಕೊರತೆ ಉಂಟಾಗಿದೆ. ಜೂನ್ 1 ರಿಂದ ಆ.10ರ ನಡುವಿನ ಅವಧಿಯಲ್ಲೂ ರಾಜ್ಯದಲ್ಲಿ ಶೇ.3ರಷ್ಟು ಮಳೆ ಕೊರತೆ ಕಂಡುಬಂದಿದೆ.
ಈ ಅವಧಿಯಲ್ಲಿ 553 ಮಿಲಿ ಮೀಟರ್ ವಾಡಿಕೆ ಮಳೆಯಾಗಿದ್ದು, 536 ಮಿಲಿ ಮೀಟರ್‍ನಷ್ಟು ಮಾತ್ರ ಮಳೆ ಬಿದ್ದ ವರದಿಯಾಗಿದೆ. ಆದರೆ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದರೆ, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದೆ.

Indresh KC

Recent Posts

ದುರಸ್ತಿ ಮಾಡಿ ವಾರ ಕಳೆಯುವ ಮೊದಲೇ ಕಿತ್ತು ಬಂದ ರಸ್ತೆ

ಪಟ್ಟಣದ ಬಸವಕಲ್ಯಾಣ-ಭಾಲ್ಕಿ ಮುಖ್ಯ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ವಾರದ ಹಿಂದೆ ರಸ್ತೆ ದುರಸ್ತಿ ಕಾಮಗಾರಿ ಮಾಡಲಾಗಿದ್ದು, ವಾರ ಕಳೆಯುವ…

5 mins ago

ಬಿರುಗಾಳಿ ಸಹಿತ ಮಳೆಗೆ ಕಬ್ಬಿಣದ ಬಸವ ಮಹಾದ್ವಾರ ಕುಸಿತ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

17 mins ago

ನೂರಕ್ಕೆ ನೂರು ‘ಇಂಡಿಯಾ’ ಮೈತ್ರಿಗೆ ಅಧಿಕಾರ: ಈಶ್ವರ ಖಂಡ್ರೆ

'ದೇಶದಲ್ಲಿ ಈ ಸಲ 'ಇಂಡಿಯಾ' ಒಕ್ಕೂಟ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ…

22 mins ago

ನಾನು ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ ಎಂದ ವಿರಾಟ್​​ ಕೊಹ್ಲಿ

ವಿರಾಟ್​​ ಕೊಹ್ಲಿ ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ. ಅವರು ಹೇಳಿರುವ ಆಡಿಯೋ ಸಮೇತ ದೃಶ್ಯ ವೈರಲ್​ ಆಗಿದೆ. 

36 mins ago

ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಮಹಿಳೆಯ ತಲೆ ಸಿಕ್ಕಿಕೊಂಡು ಪರದಾಟ

ಕೆಎಸ್‌ಆರ್‌ಟಿಸಿ ಬಸ್‌ ನ ಕಿಟಕಿಯಿಂದ ಉಗುಳಲು ಹೋಗಿ ಮಹಿಳೆಯೊಬ್ಬರ ತಲೆ ಸಿಕ್ಕಿಕೊಂಡಿರುವ ಘಟನೆ ನಡೆದಿದೆ.

58 mins ago

92ನೇ ಜನ್ಮದಿನ ಆಚರಿಸಿಕೊಳ್ಳದಿರಲು ಎಚ್‌.ಡಿ. ದೇವೇಗೌಡರ ನಿರ್ಧಾರ!

ಇದೇ ತಿಂಗಳ 18 ರಂದು 92ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಈ ಬಾರಿ ಹುಟ್ಟುಹಬ್ಬ…

1 hour ago