News Karnataka Kannada
Thursday, May 02 2024
ಕರ್ನಾಟಕ

ಜಾರಕಿಹೊಳಿಯನ್ನು ಖೆಡ್ಡಾಗೆ ಕೆಡವಲು ಸಂಚು ನಡೆದಿದ್ದು ಎಷ್ಟು ಸಮಯದಿಂದ ಗೊತ್ತಾ ?

Jarkiholi
Photo Credit :

ಬೆಂಗಳೂರು,; ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನದ ನಂತರ ಪ್ರಭಾವಿ ನಾಯಕರನ್ನು ಹಣಿಯಲು ಒಂದು ವರ್ಷದ ಹಿಂದೆಯೇ ಯೋಜನೆ ರೂಪಿಸಲಾಗುತಿತ್ತು ಎನ್ನಲಾಗಿದೆ. ರಮೇಶ್‌ ಜಾರಕಿಹೊಳಿ ಅವರ ಸೆಕ್ಸ್‌ ಸಿಡಿ ನಿರ್ಮಿಸಿ ಇದನ್ನು ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡಲು ಎಲ್ಲ ರೀತಿಯ ಕಾರ್ಯತಂತ್ರ ರೂಪಿಸಲಾಗಿತ್ತು ಎನ್ನಲಾಗಿದೆ.
ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಯಾವಾಗ ಪರಿಚಯವಾಗಿತ್ತು ಮತ್ತು ಅವರ ನಡುವೆ ಸಾಮಾಜಿಕ ಜಾಲತಾಣದಲ್ಲೇ ಸಂಭಾಷಣೆ ನಡೆದು ಅದು ಸರಸದವರೆಗೂ ಮುಂದುವರೆದ ಬಗ್ಗೆ ಹಲವಾರು ಮಾಹಿತಿಗಳು ಈಗ ಬಿಚ್ಚಿಕೊಳ್ಳುತ್ತಿವೆ.
ಮೂಲಗಳ ಪ್ರಕಾರ, ಇದರ ಹಿಂದೆ ಒಂದು ತಂಡ ಕಾರ್ಯನಿರ್ವಹಿಸಿದ್ದು, ರಮೇಶ್ ಜಾರಕಿಹೊಳಿ ಅವರು ಸಚಿವರಾಗಿ ಅಕಾರ ವಹಿಸಿಕೊಂಡ ನಂತರದಲ್ಲಿಯೇ ಅವರನ್ನು ಖೆಡ್ಡಕ್ಕೆ ಬೀಳಿಸಲು ವ್ಯವಸ್ಥಿತ ಸಂಚು ಶುರುವಾಗಿತ್ತು ಎಂದು ಹೇಳಲಾಗಿದೆ.ಕಳೆದ ಆರು ತಿಂಗಳ ಹಿಂದೆಯೇ ಈ ಸಿಡಿ ಸಿದ್ಧವಾಗಿತ್ತು ಮತ್ತು ದೃಶ್ಯದಲ್ಲಿ ಕಾಣುವ ಯುವತಿಯು ಕೂಡ ಸದ್ಯ ದೇಶದಲ್ಲೇ ಇಲ್ಲ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ. ಇದರ ಹಿಂದೆಯೂ ಆ ತಂಡದ್ದೇ ಕರಾಮತ್ತು ನಡೆದಿದೆ ಎಂದು ಹೇಳಲಾಗುತ್ತಿದೆ.ಸಿಡಿ ಬಿಡುಗಡೆ ಕುರಿತಂತೆ ಸಮಯ-ಸಂದರ್ಭಗಳನ್ನು ಕಲೆ ಹಾಕಿ ಅವೇಶನಕ್ಕಾಗಿಯೇ ಕಾಯಲಾಗುತ್ತಿತ್ತು. ಯಾವುದೇ ರೀತಿ ಅನುಮಾನ ಬಾರದಂತೆ ಮತ್ತು ಎಲ್ಲಿಯೂ ಕೂಡ ಇದು ಲೀಕ್ ಆಗದಂತೆ ಅತ್ಯಂತ ಎಚ್ಚರಿಕೆಯಿಂದ ಕಣ್ಗಾವಲಿಡಲಾಗಿತ್ತು ಎಂದು ಕೂಡ ತಿಳಿದುಬಂದಿದೆ.
ಒಟ್ಟಾರೆ ಇದು ವ್ಯವಸ್ಥಿತವಾಗಿ ನಡೆದ ಕಾರ್ಯಾಚರಣೆಯಾಗಿದೆ ಎನ್ನಲಾಗಿದ್ದು, ಇತ್ತೀಚೆಗೆ ಇದರ ಬಗ್ಗೆ ಮಾಹಿತಿ ಪಡೆದಿದ್ದ ರಮೇಶ್ ಜಾರಕಿಹೊಳಿ ಅವರು ಎಚ್ಚೆತ್ತುಕೊಂಡಿದ್ದರು. ಆದರೆ, ಅದಕ್ಕೆ ಆಸ್ಪದ ಕೊಡದೆ ವಿದೇಶದಿಂದ ಯು ಟೂಬ್‍ನಲ್ಲಿ ಮೊದಲು ವಿಡಿಯೋ ಅಪ್‍ಲೋಡ್ ಮಾಡಲಾಗಿದೆ. ಇದು ಈಗ ಬಹಿರಂಗಗೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಒಟ್ಟಾರೆ ಪ್ರಭಾವಿಯನ್ನು ಖೆಡ್ಡಾಕ್ಕೆ ಕೆಡವಲು ಯುವತಿಯನ್ನು ಬಳಸಿಕೊಂಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಆದರೆ, ದೂರಿನಲ್ಲಿ ತಿಳಿಸಿರುವ ಮಾಹಿತಿ ಪ್ರಕಾರ, ಉದ್ಯೋಗ ಅರಸಿ ಬಂದಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಹೇಳಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು