ಕರ್ನಾಟಕ

ಕೋವಿಡ್‌ ನಿಂದ ಸಾವನ್ನಪ್ಪಿದ ರೈತರ ಒಂದು ಲಕ್ಷ ಸಾಲ ಮನ್ನಾ

ಬೆಂಗಳೂರು : ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ ರೈತರ ಒಂದು ಲಕ್ಷ ರೂ ವರೆಗಿನ ಸಾಲ ಮನ್ನಾ ಮಾಡಲಾಗುವುದು. ಈ ಕುರಿತು ಇನ್ನೆರಡು ದಿನಗಳಲ್ಲಿ ತೀರ್ಮಾನ ನಡೆಸಿ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಸಹಕಾರ ಸಚಿವ ಎಸ್ ​ಟಿ ಸೋಮಶೇಖರ್​ ತಿಳಿಸಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೊರೋನಾದಿಂದ ಸಾವನ್ನಪ್ಪಿರುವ ರೈತರಿಗೆ ಸಹಾಯ ಮಾಡಬೇಕಾದ ಹೊಣೆಗಾರಿಗೆ ಸರ್ಕಾರದ ಮೇಲೆ ಇದೆ. ಅದಕ್ಕಾಗಿ ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಮೂಲಕ ಸಾಲ‌ಮನ್ನಾ ಯೋಜನೆ ಜಾರಿ ಮಾಡಲಾಗುವುದುದು ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಎಲ್ಲಾ ಸಹಕಾರ ಸಂಸ್ಥೆಗಳಿಗೆ ಸಾವನ್ನಪ್ಪಿರುವ ರೈತರ ಮಾಹಿತಿ ಕೊಡಲು ಸೂಚನೆ ನೀಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಅಂತಿಮ ತಿರ್ಮಾನ ಪ್ರಕಟಿಸಲಾಗುವುದು. ಆರ್ಥಿಕವಾಗಿ ಸಬಲವಾಗಿರುವ ಡಿಸಿಸಿ ಬ್ಯಾಂಕ್ ಗಳ ಮೂಲಕ ಸಾಲ ಮನ್ನಾ ಪ್ರಕ್ರಿಯೆ ನಡೆಸಲಾಗುವುದು. ಇದರಿಂದ ಡಿಸಿಸಿ ಬ್ಯಾಂಕ್​ ಹಾಗೂ ಅಪೆಕ್ಸ್​ ಬ್ಯಾಂಕ್​ಗಳಿಂದ ಆರ್ಥಿಕ ನೆರವು ಸಿಗಲಿದೆ ಎಂದು ತಿಳಿಸಿದರು.
ಮೃತ ರೈತರ ಗರಿಷ್ಠ 1 ಲಕ್ಷ ರೂ ಸಾಲ ಮನ್ನಾಕ್ಕೆ ನಿರ್ಧರಿಸಲಾಗಿದೆ. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ನಡೆಸಲಾಗುವುದು. ಬಳಿಕ ಈ ಬಗ್ಗೆ ಸಿಎಂ ಘೋಷಿಸಲಿದ್ದಾರೆ. ಕೋವಿಡ್​ ನಿಂದ ಸಾವನ್ನಪ್ಪಿದ ರೈತರ ಕುಟುಂಬದ ಸದಸ್ಯರು ಹತ್ತಿರದ ಡಿಸಿಸಿ ಬ್ಯಾಂಕ್​ಗಳಲ್ಲಿ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.ಕೋವಿಡ್ ನಿಂದ ಮೃತಪಟ್ಟ ರೈತರ ಸಾಲ ಮನ್ನಾ ಮಾಡುವ ಕುರಿತು ಮುಖ್ಯಮಂತ್ರಿಗಳೇ ಇನ್ನೆರಡು ದಿನಗಳಲ್ಲಿ ತಿಳಿಸಲಿದ್ದಾರೆ. ಎಷ್ಟು ಜನ ರೈತರು ಕೋವಿಡ್ ನಿಂದ ಮೃತರಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಿ, ಸಾಲ ಮನ್ನಾ ಮಾಡಲಾಗುವುದು.
ಕೇಂದ್ರ ಸರ್ಕಾರದಲ್ಲಿ ಸಹಕಾರ ಇಲಾಖೆಗೆ ಸಚಿವರನ್ನು ನೇಮಕ ಮಾಡಿರುವು ಕುರಿತು ಪ್ರತಿಕ್ರಿಯಿಸಿದ ಅವರು, ಕೃಷಿಗೆ ಹೆಚ್ಚಿನ ಸಹಕಾರ ನೀಡಲಾಗಿತ್ತು. ಆದರೆ, ಸಹಕಾರ ಇಲಾಖೆ ಗೆ ನೀಡಲಾಗುತ್ತಿರಲಿಲ್ಲ. ಈಗ ಸಹಕಾರ ಇಲಾಖೆಯ ಸಚಿವಾಲಯ ತೆರೆಯಲಾಗಿದೆ. ಇದಕ್ಕಾಗಿ ಪ್ರಧಾನಿ ಹಾಗೂ ಅಮಿತ್ ಶಾ ರನ್ನ ಅಭಿನಂದಿಸುತ್ತೇನೆ. ಕೇಂದ್ರದಿಂದ ಸದ್ಯದಲ್ಲೆ 720 ಕೋಟಿ ಬೆಂಬಲ ಬೆಲೆ ಬಿಡುಗಡೆಯಾಗುತ್ತದೆ. ಕೇಂದ್ರದ ಸಹಕಾರ ಇಲಾಖೆ ಇಂದ ರಾಜ್ಯದ ಸಹಕಾರ ಇಲಾಖೆಗೆ ಯಾವುದೇ ತೊಂದರೆ ಆಗಲ್ಲ ಎಂದರು.

Indresh KC

Recent Posts

ಉದಯ ಟಿವಿಯಲ್ಲಿ‘ಶ್ರೀಮದ್ ರಾಮಾಯಣ’ ಧಾರಾವಾಹಿ ನೋಡಿ ಬಹುಮಾನ ಗೆಲ್ಲಿ

ಈಗ ‘ಉದಯ’ ವಾಹಿನಿಯು ಒಂದು ಹೊಸ ಧಾರಾವಾಹಿಯನ್ನು ಪ್ರೇಕ್ಷಕರ ಎದುರು ತರುತ್ತಿದೆ. ‘ಶ್ರೀಮದ್ ರಾಮಾಯಣʼ ಸೀರಿಯಲ್ ಪ್ರಸಾರಕ್ಕೆ ಸಜ್ಜಾಗಿದೆ. ಮೇ…

6 seconds ago

ಲಾರಿಗೆ ಬಸ್‌ ಡಿಕ್ಕಿ : 4 ಸಾವು, 15ಕ್ಕೂ ಹೆಚ್ಚು ಮಂದಿಗೆ ಗಾಯ

ಓವರ್​ಟೇಕ್​ ಮಾಡುವ ಭರದಲ್ಲಿ ಪ್ರಯಾಣಿಕರಿದ್ದ ಬಸ್​ವೊಂದು​ ಲಾರಿಗೆ ಡಿಕ್ಕಿ ಹೊಡೆದ ಘಟನೆ ಚೆನ್ನೈ-ತಿರುಚಿ ಹೆದ್ದಾರಿಯಲ್ಲಿ ಇಂದು ನಡೆದಿದೆ.ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.…

21 mins ago

ಸ್ಲೊವಾಕಿಯಾ ಪ್ರಧಾನ ಮಂತ್ರಿಗೆ ಗುಂಡೇಟು : ಶಂಕಿತ ಅರೆಸ್ಟ್

ಅಮೆರಿಕ ವಿರೋಧಿ ನಿಲುವುಗಳನ್ನು ಹೊಂದಿರುವ ತೀವ್ರ ಎಡಪಂಥೀಯ ನಾಯಕ, ಸ್ಲೊವಾಕಿಯಾ ಪ್ರಧಾನ ಮಂತ್ರಿ ರಾಬರ್ಟ್ ಫಿಕೊ ಹತ್ಯೆ ಯತ್ನಬುಧವಾರ ನಡೆದಿದೆ.…

41 mins ago

49 ಅಭ್ಯರ್ಥಿಗಳಿಂದ ಉಮೇದುವಾರಿಕೆ : ನಾಮಪತ್ರ ಸಲ್ಲಿಕೆಗೆ ಇಂದು ಕೊನೆ ದಿನ

ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನ.…

58 mins ago

ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವು

ವೈದ್ಯರ ಎಡವಟ್ಟಿಗೆ ಆಸ್ಪತ್ರೆಯಲ್ಲಿ ರೋಗಿ ಸಾವನಪ್ಪಿರುವ ಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.ಕೃಷ್ಣಪ್ಪ ಗೌಡ(47) ಮೃತ ವ್ಯಕ್ತಿ. ಬಂಟ್ವಾಳ ತಾಲೂಕಿನ…

1 hour ago

ನೀವು ತಡರಾತ್ರಿ ವರೆಗೆ ಎಚ್ಚರ ಇರುತ್ತೀರಾ? ಇದರ ಸಮಸ್ಯೆಗಳೇನು ಗೊತ್ತೇ?

ತಡರಾತ್ರಿ ಇಲ್ಲ ಮುಂಜಾವರೆಗೂ ಕೆಲವರು ನಿದ್ದೆ ಗೆಡುತ್ತಾರೆ ಇದೊಂದು ಈಗಿನ ಜಯಮಾನದ ಸಾಮಾನ್ಯ ಅಭ್ಯಾಸವಾಗಿದೆ.ಕೆಲಸದ ಒತ್ತಡ, ಕಚೇರಿಯ ಕೆಲಸಗಳು, ಸಾಮಾಜಿಕ…

2 hours ago