ಕೊರೋನಾ ರೂಪಾಂತರಿ ‘ಒಮಿಕ್ರೋನ್’ ಬಹಳ ವೇಗವಾಗಿ ಹರಡುತ್ತಿದೆ -ಡಾ.ಕೆ. ಸುಧಾಕರ್

ಬೆಂಗಳೂರು: ರೂಪಾಂತರಿ ಕೊರೋನಾ ವೈರಸ್ ಬಹಳ ವೇಗವಾಗಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಇದರ ಬಗ್ಗೆ ಮಾಹಿತಿ ನೀಡಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ನಾಲ್ಕು ದೇಶಗಳಲ್ಲಿ ರೂಪಾಂತರಿ ‘ಒಮಿಕ್ರೋನ್’ ಪತ್ತೆಯಾಗಿದೆ.

ಹೊಸ ತಳಿ ವೈರಸ್ ಬಗ್ಗೆ ಈಗಾಗಲೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ. ರೋಗ ಲಕ್ಷಣಗಳು ಮೊದಲಿನಂತೆಯೇ ಇದೆ, ಡೆಲ್ಟಾಗಿಂತ ಇದು ಗಂಭೀರವಾಗಿದೆ ಎಂಬುದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಪರಿಶೀಲನೆ ನಡೆಸಿದೆ. 45 ಲಕ್ಷ ಜನ ಎರಡನೇ ಡೋಸ್ ಪಡೆದಿಲ್ಲ. ಆತಂಕ ಸೃಷ್ಟಿ ಮಾಡುವುದು ಬೇಡ, ಅವಧಿ ಮುಗಿದರೂ ಕೆಲವರು ಲಸಿಕೆ ಪಡೆದಿಲ್ಲ. ಉದಾಸೀನ ತೋರದೆ ಲಸಿಕೆ ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯಿಂದ ತೀವ್ರತೆ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಯಾರು ಭಯಪಡುವ ಅಗತ್ಯವಿಲ್ಲ. ಎಚ್ಚರಿಕೆ ಅಗತ್ಯವಿದೆ. ವಿದೇಶದಿಂದ ಬರುವವರಿಗೆ ಕೊರೊನಾ ಟೆಸ್ಟ್ ಕಡ್ಡಾಯಗೊಳಿಸಲಾಗಿದೆ. ಮಾರ್ಗಸೂಚಿ ಪ್ರಕಟಿಸಲಾಗಿದೆ. ಏರ್ಪೋರ್ಟ್ ಗಳಲ್ಲಿ ಟೆಸ್ಟ್ ಕಡ್ಡಾಯವಾಗಿದ್ದು, ನೆಗೆಟಿವ್ ಬಂದರೂ ಕೂಡ ಒಂದು ವಾರ ಹೋಂ ಕ್ವಾರಂಟೈನ್ ನಲ್ಲಿರಬೇಕಿದೆ. ವಾರದ ಬಳಿಕ ಮತ್ತೆ ಪರೀಕ್ಷೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

45 ಲಕ್ಷ ಜನರು ಎರಡನೇ ಡೋಸ್ ಪಡೆದುಕೊಂಡಿಲ್ಲ. ದಯಮಾಡಿ ಎರಡನೇ ಡೋಸ್ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಔಷಧ ಕೊರತೆ ಇಲ್ಲ. ಸೋಮವಾರದಿಂದ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು. ಎಲ್ಲಾ ಔಷಧಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಸೋಮವಾರದಿಂದ ಔಷಧಕ್ಕಾಗಿ ಚೀಟಿ ಬರೆದು ಕೊಡುವುದಿಲ್ಲ. ಹೊರಗಿನಿಂದ ಔಷಧ ತರುವಂತೆ ಚೀಟಿ ಬರೆದು ಕೊಡುವುದಿಲ್ಲ. ಈ ನಿಟ್ಟಿನಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

Swathi MG

Recent Posts

ಹೈಕೋರ್ಟ್​ ವಕೀಲೆ ಚೈತ್ರಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಹೈಕೊರ್ಟ್‌ನ ಅಡ್ವೋಕೇಟ್ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಸಂಜಯನಗರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಚೈತ್ರಾ ಬಿ.ಗೌಡ…

2 mins ago

ಸೆಕೆಂಡ್ ​ಹ್ಯಾಂಡ್ ಕಾರು ವ್ಯಾಪಾರಿ ಮೇಲೆ ಹಲ್ಲೆ: ಆರೋಪಿಗಳ ಬಂಧನ

ಹಣಕ್ಕೆ ಬೇಡಿಕೆ ಇಟ್ಟು ನಗರದ ಹಾಗರಗಾ ಕ್ರಾಸ್ ಬಳಿಯ ಮನೆಯೊಂದರಲ್ಲಿ  ಸೆಕೆಂಡ್​ ಹ್ಯಾಂಡ್ ಕಾರು ವ್ಯಾಪಾರಿಯನ್ನು ಬೆತ್ತಲೆ ಮಾಡಿ ಹಲ್ಲೆ…

12 mins ago

ಹೈಕೋರ್ಟ್ ಅಡ್ವೋಕೇಟ್ ಚೈತ್ರಾ ಬಿ.ಗೌಡ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಹೈಕೋರ್ಟ್ ಅಡ್ವೋಕೇಟ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಂಜಯನಗರ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

12 mins ago

ಘಟ್ಟದ ಮೇಲಿನ ಶಾಸಕರನ್ನ ಅವಮಾನಿಸಿದ ಕರಾವಳಿಯ ಶಾಸಕ

ಘಟ್ಟದ ಕಡೆಗಳಲ್ಲಿ ರಸ್ತೆಗಳಿಗೆ ಎರಡು ಹಂಪ್ ಗಳನ್ನ ಹಾಕಿದ್ರೆ ಅಚೀವ್ ಮೆಂಟ್ ಅಂತೆ' ಘಟ್ಟದ ಮೇಲೆ‌ ಶಾಸಕರ ಅಚೀವ್ ಮೆಂಟ್…

21 mins ago

ಮೋದಿ ಪ್ರಧಾನ ಮಂತ್ರಿ ಅಲ್ಲ, ರಾಜ ಎಂದ ರಾಹುಲ್

ನಾನು ನಿಜವನ್ನೇ ಹೇಳುತ್ತಿದ್ದೇನೆ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಅಲ್ಲ ಬದಲಾಗಿ ಅವರು ರಾಜರು ಎಂದು ರಾಹುಲ್‌ ಗಾಂಧಿ ಹೇಳಿದರು.

25 mins ago

ಎಂ.ಸಿ. ಸಿ. ಬ್ಯಾಂಕಿನ ನೂತನ ಆಡಳಿತ ಕಛೇರಿ ಉದ್ಘಾಟನೆ, 112ನೇ ಸ್ಥಾಪಕರ ದಿನಾಚರಣೆ

ಎಂಸಿ.ಸಿ. ಬ್ಯಾಂಕಿನ ನೂತನ ನವೀಕೃತ ಅತ್ಯಾಧುನಿಕ ಸುಸಜ್ಜಿತ ಆಡಳಿತ ಕಛೇರಿಯ ಉದ್ಘಾಟನೆ ಹಾಗೂ ಬ್ಯಾಂಕಿನ 112ನೇ ಸಂಸ್ಥಾಪಕರ ದಿನಾಚರಣೆಯ ಸಮಾರಂಭ…

31 mins ago