Categories: ಕರ್ನಾಟಕ

ಕೊಡಗಿನ ಯುವತಿ ಐಸಿಸ್ ನೇಮಕದ ಮಾಸ್ಟರ್ ಮೈಂಡ್ ಆಗಿದ್ದು ಹೇಗೆ ಗೊತ್ತಾ ?

ಮಡಿಕೇರಿ ; ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕಾಶ್ಮೀರ , ಕೇರಳ ಹಾಗೂ ಮಂಗಳೂರಿನ ಉಳ್ಳಾಲ ದಲ್ಲಿ ಕಳೆದ ಆಗಸ್ಟ್ 4 ರಂದು ಧಾಳಿ ನಡೆಸಿ ಐವರನ್ನುಬಂಧಿಸಿದ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಈಬ್ಬರು ಶಂಕಿತಉಗ್ರರನ್ನು ಬಂಧಿಸಿದೆ.ಈಗಾಗಲೇ ಐಸಿಸ್ ನೆಟ್ ವರ್ಕ್ ನ ಸಂಪೂರ್ಣ ಜಾಲವನ್ನು ಬಯಲಿಗೆಳೆದಿರುವ ಎನ್ಐಏ ತಲೆಮರೆಸಿಕೊಂಡಿರುವ ಉಗ್ರರಿಗಾಗಿ ದೇಶದ ವಿವಿದೆಡೆ ಹುಡುಕಾಟ ನಡೆಸುತ್ತಿದೆ. ಈ
ಕಾರ್ಯಾಚರಣೆಯಿಂದ ಐಸಿಸ್ ಭಾರತದಲ್ಲೂ ತನ್ನ ಬೇರುಗಳನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವುದು ಸಾಬೀತಾಗಿದ್ದು ಇದನ್ನು ನಮ್ಮ ಭದ್ರತಾ ಪಡೆಗಳು ವಿಫಲಗೊಳಿಸಿವೆ. ಈಗಾಗಲೇ ಕಾಶ್ಮೀರದಲ್ಲಿ ದಿನೇ ದಿನೇ ಪಾಕಿಸ್ಥಾನ ಪ್ರಾಯೋಜಿತ ಭಯೋತ್ಪಾದಕರನ್ನು ಎನ್ಕೌಂಟರ್ ಮೂಲಕ ಭದ್ರತಾ ಪಡೆಗಳು ಸಮರ್ಥವಾಗಿ ಹೊಡೆದು ಉರುಳಿಸುತ್ತಿರುವುದು ಪಾಕಿಸ್ಥಾನದ ಭಯೋತ್ಪಾದಕ ಸಂಘಟನೆಗಳಿಗೆ ನುಂಗಲಾರದ ತುತ್ತಾಗಿದೆ. ಈಗ ಡ್ರೋನ್ ಮೂಲಕ ಭಯೋತ್ಪಾದಕ ಧಾಳಿ ನಡೆಸುವ ಯೋಜನೆಯನ್ನೂ ನಮ್ಮ ಸೇನಾ ಪಡೆಗಳು ವಿಫಲಗೊಳಿಸುತ್ತಿವೆ. ವಿಫಲವಾಗುತ್ತಿರುವ ಯೋಜನೆಗಳ ಬಗ್ಗೆ ತಲೆ ಕೆಡಿಸಿಕೊಂಡಿರುವ ಭಯೋತ್ಪಾದಕ ಸಂಘಟನೆಗಳು ದೇಶದ ದಕ್ಷಿಣದ ರಾಜ್ಯಗಳಲ್ಲಿ ಸ್ಲೀಪರ್ ಸೆಲ್ ಸ್ಥಾಪಿಸಿ ಆ ಮೂಲಕ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಶತ ಪ್ರಯತ್ನ ನಡೆಸುತ್ತಿವೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಆದರೆ ಕೊಡಗು ಜಿಲ್ಲೆಯ ಬಂಟ ಸಮುದಾಯದ ಯುವತಿಯೊಬ್ಬಳು ಈ ಭಯೋತ್ಪಾದಕ ಸಂಘಟನೆಯ ಉಗ್ರರ ನೇಮಕಾತಿಗೆ ಮಾಸ್ಟರ್ ಮೈಂಡ್ ಆಗಿ ಪರಿವರ್ತಿತಳಾಗಿರುವುದು ತನಿಖಾ ಸಂಸ್ಥೆ ಗಳಿಗೆ ಅಚ್ಚರಿ ಹುಟ್ಟಿಸಿದೆ. ಈ ಕುರಿತು ಮಾಹಿತಿ ಸಂಗ್ರಹಿಸಿದಾಗ ಗುಡ್ಡೆ ಹೊಸೂರಿನ ದೀಪ್ತಿ ಮಾರ್ಲ ಎಂಬ ಯುವತಿ 2012 ರಲ್ಲಿಯೇ ಮಂಗಳೂರಿನ ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನಲ್ಲಿ ಫಿಜಿಯೋಥೆರಪಿ ಕೋರ್ಸ್ ಮಾಡುತಿದ್ದಾಗ ಮೊಹಮದ್ ಅಮ್ಮಾರ್ ಎಂಬಾತನ ಪರಿಚಯ ಆಗುತ್ತದೆ. ಪರಿಚಯ ಗಾಡವಾದ ನಂತರ ಇಬ್ಬರೂ ಪ್ರೀತಿಸತೊಡಗುತ್ತಾರೆ. ಆತ ಈಕೆಯನ್ನು ಧಾರ್ಮಿಕ ವಿದ್ವಾಂಸರ ಪ್ರಚೋದನಾಕಾರಿ ಭಾಷಣ , ಡಾ ಜಾಕೀರ್ ನಾಯ್ಕ್ ನ ಭಾಷಣದ ಸಿಡಿ ಕೇಳಲು ಅನುವು ಮಾಡಿಕೊಡುತ್ತಾನೆ. ಈ ಭಾಷಣಗಳೆಲ್ಲದರಲ್ಲೂ ಏಕದೇವ ವಿಶ್ವಾಸವನ್ನೇ ಬೋಧಿಸಿ ಇದೇ ಜಗತ್ತಿನ ಸತ್ಯ ಮಿಕ್ಕವೆಲ್ಲ ಸುಳ್ಳು ಎಂಬ ವಾದವನ್ನು ತಲೆಗೆ ತುಂಬಲಾಗುತ್ತದೆ. ಇದರಿಂದ ಪ್ರಭಾವಿತಳಾದ ಯುವತಿ ಕೇರಳದ ಪೊನ್ನಾಣಿಯಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಮರಿಯಂ ಎಂಬುದಾಗಿ ಬದಲಾಯಿಸಿಕೊಳ್ಳುತ್ತಾಳೆ.

ಇದರ ಬೆನ್ನಲ್ಲೇ ಆಕೆ ಮದುವೆ ಆಗುತ್ತಾಳೆ. ಆ ಸಂದರ್ಭದಲ್ಲಿ ಈಕೆಯ ತಾಯಿ ಮಡಿಕೇರಿಯ ಸರ್ಕಾರೀ ಕಚೇರಿಯೊಂದರಲ್ಲಿ ಕೆಲಸ ಮಾಡುತಿರುತ್ತಾರೆ. ತಮ್ಮ ಮಗಳ ಮದುವೆ ಮಂಗಳೂರಿನ ಕಟೀಲು ದುರ್ಗಾ ಪರಮೇಶ್ವರೀ
ದೇವಾಲಯದಲ್ಲಿ ಸಡನ್ ಆಗಿ ಫಿಕ್ಸ್ ಆಗಿದೆ. ಹುಡುಗ ಕೊಂಕಣಿ ಆಗಿದ್ದು ಅಮೇರಿಕಾದಲ್ಲಿ ಎಂಜಿನಿಯರ್ ಆಗಿದ್ದು ರಜೆ ಇಲ್ಲದಿರುವುದರಿಂದ ಕೂಡಲೇ ಅಮೇರಿಕಾಗೆ ತೆರಳಬೇಕಿದೆ ಎಂದು ಹೇಳಿ ಬರೀ ಬೆರಳೆಣಿಕೆಯಷ್ಟು ಕುಟುಂಬಸ್ಥರು ಮಾತ್ರ ಮದುವೆಗೆ ಹೋಗುತಿದ್ದೇವೆ ಎನ್ನುತ್ತಾರೆ. ತಮ್ಮ ಪಕ್ಕದಲ್ಲೇ ದಿನವಿಡೀ ಕೂತು ಕೆಲಸ ಮಾಡುತಿದ್ದ ಸಹೋದ್ಯೋಗಿಗಳನ್ನೂ ಇವರು ಮದುವೆಗೆ ಅಹ್ವಾನಿಸುವುದಿಲ್ಲ. ಆದರೆ ಇವರು ಮದುವೆಗೆ ತೆರಳಿದ್ದು ಉಳ್ಳಾಲದ ಮಸೀದಿಗೆ ಆಗಿದ್ದು ಅಲ್ಲಿಯೇ ನಿಖಾ ನಡೆಯಿತು ಎಂದು ಮೂಲಗಳು ತಿಳಿಸಿವೆ. ಮಗಳು ಬೇರೆ ಧರ್ಮೀಯನನ್ನು ಮದುವೆ ಆಗುತ್ತಿರುವುದಾಗಿ ಎಲ್ಲರಿಗೂ ಗೊತ್ತಾದರೆ ಸಾರ್ವಜನಿಕ ಮುಜುಗರ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಪತಿ, ಪತ್ನಿ, ಮೂವರು ಮಕ್ಕಳಿರುವ ಈ ಕುಟುಂಬ ಯಾರಿಗೂ ಗುಟ್ಟನ್ನು ಬಿಟ್ಟು ಕೊಡುವುದೇ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆಗ ಈಕೆಯ ಪತಿ ಅಮ್ಮಾರ್ ಉದ್ದನೆ ಗಡ್ಡ ಬಿಟ್ಟಿರುತ್ತಾನೆ, ಇದರಿಂದಾಗಿ ಈ ಕುಟುಂಬ ಆರತಕ್ಷತೆಯನ್ನೂ ನಡೆಸುವುದಿಲ್ಲ.
ಮದುವೆಯ ನಂತರ ದೀಪ್ತಿ ಮಾರ್ಲ ಸಂಪೂರ್ಣ ಉಗ್ರವಾದಿಯೇ ಆಗಿ ಬದಲಾಗುತ್ತಾಳೆ. ಇವರದೇ ಒಂದು ತಂಡವನ್ನು ಕಟ್ಟಿಕೊಂಡು ಆನ್ ಲೈನ್ ಸಾಮಾಜಿಕ ತಾಣಗಳ ಮೂಲಕ ಯುವಕರನ್ನು ಸೆಳೆಯುವ ಕಾರ್ಯದಲ್ಲಿ ತೊಡಗುತ್ತಾರೆ. ಈ ಮದುವೆಯ ನಂತರ ಈಕೆಗೆ ಮಂಗಳೂರೇ ಕೇಂದ್ರ ಸ್ಥಾನ ಆಗಿರುತ್ತದೆ. ಆದರೆ 2019 ರಲ್ಲಿ ಒಮ್ಮೆ ಭೂ ಕುಸಿತದ ನಂತರ ಗುಡ್ಡೆ ಹೊಸೂರಿನಲ್ಲಿರುವ ತನ್ನ ಮನೆಗೆ ಬಂದು ಹೋಗಿದ್ದಾಳೆ ಎಂದು ತಿಳಿದು ಬಂದಿದೆ. ಆಗ ಭುಕುಸಿತವಾದ ಪ್ರದೆಶಗಳಿಗೂ ಭೇಟಿ ನೀಡಿದ್ದಾಳೆ ಎನ್ನಲಾಗಿದೆ. ಆ ಸಂದರ್ಭದಲ್ಲಿ ತಾನು ಪತಿ ಮಕ್ಕಳೊಂದಿಗೆ ಅಮೇರಿಕಾದಲ್ಲಿ ನೆಲೆಸಿರುವುದಾಗಿ ನೆರೆ ಹೊರೆಯವರಿಗೆ ತಿಳಿಸಿದ್ದಾಳೆ. ಈಕೆಯ ಓರ್ವ ಸಹೋದರ ಕೂಡ ಕುವೈತ್ ನಲ್ಲೇ ಕುಟುಂಬದೊಂದಿಗೆ ನೆಲೆಸಿದ್ದಾನೆ. ಈಗಲೂ ಈ ಕುಟುಂಬ ಮಗಳು ಅಮೇರಿಕದಲ್ಲಿಯೇ ಸೆಟಲ್ ಆಗಿರುವುದಾಗಿ ಎಲ್ಲರೊಂದಿಗೆ ಹೇಳಿಕೊಂಡಿದೆ. ಇವರ ಬಂಧನದ ನಂತರ ಅಮ್ಮಾರ್‌ ಹಾಗೂ ದೀಪ್ತಿ ಇಬ್ಬರ ಪಾಸ್ಪೋರ್ಟ್ ಗಳನ್ನು ಎನ್ಐಏ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಅಚ್ಚರಿಯ ಸಂಗತಿಯೆಂದರೆ ಪಾಸ್ಪೋರ್ಟ್ ನಲ್ಲಿ ಈಕೆಯ ಹೆಸರು ದೀಪ್ತಿ ಮಾರ್ಲ ಎಂದೇ ಇದೆ. ತನ್ನ ಬದಲಾದ ಹೆಸರಿನಲ್ಲಿ ಪಾಸ್ಪೋರ್ಟ್
ಪಡೆದುಕೊಂಡರೆ ಉಗ್ರ ಚಟುವಟಿಕೆಗಳಿಗೆ ಮತ್ತು ವಿಮಾನದಲ್ಲಿ ಪ್ರಯಾಣಿಸುವಾಗ ಅಧಿಕಾರಿಗಳಿಗೆ ಅನುಮಾನ ಬಾರದಿರಲಿ ಎಂದೇ ಮೂಲ ಹೆಸರನ್ನು ಉಳಿಸಿಕೊಂಡಿದ್ದಾಳೆ ಎಂದು ಎನ್ಐಏ ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇದಲ್ಲದೆ ಮರಿಯಂ ಅನ್ನುವ ಹೆಸರು ಕ್ರಿಶ್ಚಿಯನ್ ಹೆಸರನ್ನೇ ಹೋಲುವುದೂ ಕೂಡ ಈಕೆ ಇದೇ ಹೆಸರನ್ನು ಅಯ್ಕೆ ಮಾಡಿಕೊಳ್ಳಲು ಕಾರಣ ಎನ್ನಲಾಗಿದೆ.

ಶೇಕಡಾ ನೂರರಷ್ಟು ಸಾಕ್ಷರರಿರುವ ರಾಜ್ಯ ಎಂದೇ ಹೆಸರು ಪಡೆದಿರುವ ಕೇರಳದ ಯುವ ಜನಾಂಗ ಏಕೆ ಉಗ್ರ ಚಟುವಟಿಕೆಗೆ ಬಹಳ ಬೇಗನೇ ಆಸಕ್ತಿ ತೋರುತ್ತಿದೆ ಎಂಬುದಕ್ಕೆ ಹಲವು ಕಾರಣಗಳಿವೆ. ಮೊದಲೆಲ್ಲ ಅನಕ್ಷರಸ್ಥರು ಉಗ್ರವಾದದೆಡೆಗೆ ಆಕರ್ಷಿತರಾದರೆ ಈಗ ವಿದ್ಯಾವಂತರು ಅದರಲ್ಲೂ ಎಂಜಿನಿಯರಿಂಗ್ , ವೈದ್ಯಕೀಯ ಶಿಕ್ಷಣ ಪಡೆದವರೇ ಆಕರ್ಷಿತರಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ ಆಗಿದೆ. ಈ ಕುರಿತು ಪ್ರತಿಕ್ರಿಯಿಸಿದ ರೀಸರ್ಚ್ ಮತ್ತು ಅನಾಲೈಸಿಸ್ ವಿಂಗ್ ನ ಮಾಜಿ ಅಧಿಕಾರಿ ವಿ ಬಾಲ ಚಂದ್ರನ್ ಅವರು ಇತ್ತೀಚೆಗೆ ಕೇರಳದಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ವಹಾಬಿಸಂ ಇದಕ್ಕೆ ಮೂಲ ಕಾರಣ ಎನ್ನುತ್ತಾರೆ. ಇದರ ಮುಂದುವರಿದ ಭಾಗವೇ ಸಲಫಿ ಮೂವ್ ಮೆಂಟ್
ಆಗಿದೆ. ಸಲಫಿಗಳು ಆಧುನಿಕತೆಯನ್ನು ತಿರಸ್ಕರಿಸುತ್ತಾರೆ. ಇದಲ್ಲದೆ ಪೀಸ್ ಫೌಂಡೇಷನ್ ನ ಸಂಸ್ಥಾಪಕ ಡಾ ಜಾಕೀರ್ ನಾಯ್ಕ್ ನ ತಿರುಚಿದ ಧಾರ್ಮಿಕ ಬೋಧನೆಗಳು ಕೂಡ ಯುವ ಜನಾಂಗದ ಮೇಲೆ ಪರಿಣಾಮ ಬೀರುತ್ತಿದೆ ಎಂದ ಅವರು ಸ್ವತಃ ವೈದ್ಯನಾಗಿದ್ದು ಮುಸ್ಲಿಂ ವಿದ್ವಾಂಸ ಆಗಿರುವ ಜಾಕೀರ್ ನಾಯ್ಕ್ ನ ವಾಕ್ಚಾತುರ್ಯದ ಭಾಷಣಗಳು ಉನ್ನತ ಶಿಕ್ಷಣ ಪಡೆದಿರುವ ಯುವಕರಿಗೂ ಪ್ರೇರಣೆ ಆಗುತ್ತಿದೆ ಎಂದರು. ಜಾಕೀರ್ ನಾಯ್ಕ್ ನಿಗೆ
ಮುಸ್ಲಿಂ ದೇಶಗಳೂ ,ಭಾರತವೂ ಸೇರಿದಂತೆ ಅನೇಕ ದೇಶಗಳು ನಿಷೇಧ ಹೇರಿರುವುದನ್ನು ಇಲ್ಲಿ ಸ್ಮರಿಸಬಹುದು. ಜಾಕೀರ್ ನಾಯ್ಕನ ಪೀಸ್ ಟಿವಿಗೂ ಕೂಡ ಅನೇಕ ದೇಶಗಳಲ್ಲಿ ನಿರ್ಬಂಧ ವಿಧಿಸಲಾಗಿದ್ದು ಆನ್ಲೈನ್ ನಲ್ಲಿ ಪ್ರಸರಣ ಇದೆ. ಇದರಿಂದಾಗಿಯೇ ಯುವ ಜನಾಂಗ ದಾರಿ ತಪ್ಪುತ್ತಿದೆ ಎನ್ನಲಾಗಿದೆ.
ದೇಶದ ಗುಪ್ತಚರ ಮತ್ತು ತನಿಖಾ ಸಂಸ್ಥೆಗಳು ಇಂತಹ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವುದೇ ಜನರು ಸುರಕ್ಷಿತವಾಗಿರುವುದಕ್ಕೆ ಕಾರಣವಾಗಿದೆ. ಮತಾಂಧ ಮೂಲಭುತವಾದಿ ಸಂಘಟನೆ ಐಸಿಸ್‌ ಸೇರಲು ಭಾರತದಿಂದ ಸುಮಾರು 22 ಜನರ ತಂಡವು 2016 ರಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಕೊರಾಸನ್‌ ಪ್ರಾಂತ್ಯಕ್ಕೆ (ISKP) ಹೋಯಿತು. ಈ ತಂಡದಲ್ಲಿ ನಾಲ್ವರು ಮಹಿಳೆಯರೂ ಇದ್ದರು. ಆದರೆ ಅಫ್ಘಾನಿಸ್ಥಾನದ ಗುಡ್ಡಗಾಡು ಪ್ರದೇಶದಲ್ಲಿ ಪ್ರಾಬಲ್ಯ ಸಾದಿಸಿದ್ದ ತಾಲಿಬಾನಿಗಳನ್ನು ಅಮೇರಿಕಾ ಮತ್ತು ಅಫ್ಘಾನ್‌ ಪಡೆಗಳು ಜಂಟಿ ಕಾರ್ಯಾಚರಣೆಯಲ್ಲಿ ಕೇರಳದಿಂದ ತೆರಳಿದ್ದ ಪುರುಷ ಉಗ್ರರು ಹತರಾದರು. ಇನ್ನು ಇವರ ಪತ್ನಿಯರಾದ ನಾಲ್ವರು ಈಗಲೂ ಅಫ್ಘಾನಿಸ್ಥಾನದ ಜೈಲಿನಲ್ಲಿ ಬಂಧಿಗಳಾಗಿದ್ದಾರೆ. ಇವರಲ್ಲಿ ಮೂವರು ಮತಾಂತರಗೊಂಡವರಾಗಿದ್ದಾರೆ.
ಕೇರಳದ ಪಾಲಕ್ಕಾಡಿನ ಬಿಂದು ಎಂಬ ಮಹಿಳೆಯ ಮಗಳಾದ ನಿಮಿಷಾ ಎಂಬಾಕೆ 2016 ರಲ್ಲಿ ಬೆಕ್ಸನ್‌ ಎಂಬಾತನನ್ನು ಮದುವೆ ಆಗುತ್ತಾಳೆ. ಕ್ರಿಶ್ಚಿಯನ್‌ ಆಗಿದ್ದ ಬೆಕ್ಸನ್‌ ಉಗ್ರವಾದ ಸಿದ್ದಾಂತದೆಡೆ ಆಕರ್ಷಿತನಾಗಿ ಒಪ್ಪಿಕೊಂಡು ನಿಮಿಷಾಳೊಂದಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಾನೆ. ನಂತರ ತಮ್ಮ ಹೆಸರನ್ನು ಫಾತಿಮಾ ಮತ್ತು ಇಸಾ ಎಂದು ಬದಲಾಯಿಸಿಕೊಳ್ಳುತ್ತಾರೆ. ಇದಕ್ಕೂ ಮೊದಲು ಸೋನಿಯಾ ಸೆಬಾಸ್ಟಿಯನ್ ಎಂಬ ಯುವತಿ ,
ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಆಯಿಷಾ ಹೆಸರಿನಲ್ಲಿ ಅಬ್ದುಲ್ ರಶೀದ್ ಅಬ್ದುಲ್ಲಾರನ್ನು 2011 ರಲ್ಲಿ ವಿವಾಹವಾಗಿದ್ದಳು. ಸೋನಿಯಾ ಮತ್ತು ಅಬ್ದುಲ್ ರಶೀದ್ 2016 ರಲ್ಲಿ ತಮ್ಮ ಮಗಳೊಂದಿಗೆ ತಾಲಿಬಾನಿ ಆಡಳಿತವಿರುವ ಪ್ರಾಂತ್ಯಕ್ಕೆ ತೆರಳಿದರು. ಇದೇ ರೀತಿ ಮೆರಿನ್ ಜೇಕಬ್ ಅಲಿಯಾಸ್ ಮರಿಯಮ್ ಪಾಲಕ್ಕಾಡ್ ಮೂಲದ ಬೆಸ್ಟಿನ್ ವಿನ್ಸೆಂಟ್ ಅಲಿಯಾಸ್ ಯಹಿಯಾಳನ್ನು ವಿವಾಹವಾದ. ನಿಮಿಷಾ ಅಲಿಯಾಸ್ ಫಾತಿಮಾ ಬೆಸ್ಟಿನ್ ಸಹೋದರ ಬೆಕ್ಸನ್ ಅಲಿಯಾಸ್ ಇಜಾಳನ್ನು ವಿವಾಹವಾದರು. 2016 ರಲ್ಲಿ ಇಬ್ಬರೂ ದಂಪತಿಗಳು ದೇಶವನ್ನು ತೊರೆದರು. ಅಲ್ಲಿ, ನಿಮಿಷಾ ಹುಡುಗಿಗೆ ಜನ್ಮ ನೀಡಿದಳು ಮಗುವಿಗೆ ಈಗ ನಾಲ್ಕು ವರ್ಷವಾಗಿದೆ. ರಫೇಲಾ ಕಾಸರಗೋಡಿನ ವೈದ್ಯರಾಗಿದ್ದ ಇಜಾಸ್ ಕಲ್ಲುಕೆಟ್ಟಿಯ ಪುರಯಿಲ್ ಅವರನ್ನು ವಿವಾಹವಾಗಿದ್ದರು. ಎಲ್ಲಾ ನಾಲ್ಕು ಪುರುಷರು – ರಶೀದ್, ಬೆಸ್ಟಿನ್, ಬೆಕ್ಸನ್ ಮತ್ತು ಇಜಾಸ್ – ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟರು, ನಂತರ
ಅವರ ಹೆಂಡತಿಯರು ಮಕ್ಕಳೊಂದಿಗೆ ಶರಣಾದರು. ರಫೇಲಾ ಒಂದು ವರ್ಷದ ಮಗುವನ್ನು ಹೊಂದಿದ್ದಾಳೆ. ಇವರಲ್ಲಿ ಬಹಳಷ್ಟು ಮಂದಿ ಕ್ಷಿಪಣಿ ಧಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಫ್ಘಾನಿಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 27 2021 ರ ವರದಿಗಳ ಪ್ರಕಾರ, ಅಫ್ಘಾನ್ ರಾಷ್ಟ್ರೀಯ ಭದ್ರತಾ ನಿರ್ದೇಶಕರಾದ ಅಹ್ಮದ್ ಜಿಯಾ ಸರಜ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ 13 ದೇಶಗಳ ಇಸ್ಲಾಮಿಕ್ ಸ್ಟೇಟ್‌ನ 408 ಸದಸ್ಯರು ಪ್ರಸ್ತುತ ಅಫ್ಘಾನಿಸ್ತಾನದ ಕಾರಾಗೃಹದಲ್ಲಿದ್ದಾರೆ ಮತ್ತು ಇದರಲ್ಲಿ ನಾಲ್ಕು ಭಾರತೀಯ ಮಹಿಳೆಯರು ಸೇರಿದ್ದಾರೆ. ಈ ಮೊದಲು ಮಾರ್ಚ್ 2020 ರಲ್ಲಿ, ಖೋರಾಸನ್ ಫೈಲ್ಸ್: ದಿ ಜರ್ನಿ ಆಫ್ ಇಂಡಿಯನ್ ‘ಇಸ್ಲಾಮಿಕ್ ಸ್ಟೇಟ್’ ವಿಧವೆಯರು ಎಂಬ
ಶೀರ್ಷಿಕೆಯ 30 ನಿಮಿಷಗಳ ವೀಡಿಯೊವನ್ನು ಹೊಸದಿಲ್ಲಿ ಮೂಲದ ಸುದ್ದಿ ವೆಬ್‌ಸೈಟ್ ಸ್ಟ್ರಾಟ್ನ್ಯೂಸ್ ಗ್ಲೋಬಲ್ ಬಿಡುಗಡೆ ಮಾಡಿತ್ತು. ವರದಿಯಲ್ಲಿ ಸೋನಿಯಾ ಸೆಬಾಸ್ಟಿಯನ್ ಅಲಿಯಾಸ್ ಆಯಿಶಾ, ನಿಮಿಷಾ ಅಲಿಯಾಸ್ ಫಾತಿಮಾ ಮತ್ತು ರಫೇಲಾ ಎಂಬ ಮೂವರು ಮಹಿಳೆಯರನ್ನು ಭಾರತೀಯ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. 2016 ಮತ್ತು 2018 ರ ನಡುವೆ ಮೂವರು ಮಲಯಾಳಿ ಮಹಿಳೆಯರು ತಮ್ಮ ಪತಿಯರೊಂದಿಗೆ ಐಸಿಸ್ ಸೇರಲು ಪಲಾಯನಗೈದಿದ್ದರು. ಅವರ ಗಂಡಂದಿರು ಕೊಲ್ಲಲ್ಪಟ್ಟ ನಂತರ, ಅವರು 2019 ರಲ್ಲಿ ಅಫ್ಘಾನಿಸ್ತಾನ ಸರ್ಕಾರಕ್ಕೆ ಶರಣಾದರು ಎಂದು ತಿಳಿಸಿತ್ತು. ಈ ವೀಡಿಯೋದಲ್ಲಿ ಫಾತಿಮಾ (ನಿಮಿಷಾ) ಹೇಳುವುದನ್ನು ಕೇಳಬಹುದು, “ನಾನು ಗೊಂದಲಕ್ಕೊಳಗಾಗಿದ್ದೇನೆ ,ಭಾರತಕ್ಕೆ ಹಿಂದಿರುಗುವ ಬಗ್ಗೆ. ನಾನು ಯಾರನ್ನೂ ಅವಲಂಬಿಕೊಂಡಿಲ್ಲ. . ನನ್ನ ಗಂಡ ಅಥವಾ ನನ್ನ ಕುಟುಂಬದ ಆಧಾರದಲ್ಲಿ ನಾನು ಇದ್ದೇನೆ. ನನಗೆ ಖಂಡಿತವಾಗಿಯೂ ಬೇಕು ಆದಾಯ. ದಾಯೇಶ್ ನಲ್ಲಿ, ವಿಧವೆಯರು ಮತ್ತು ಅನಾಥರನ್ನು ನೋಡಿಕೊಳ್ಳುತ್ತಾರೆ ಮತ್ತು ಪ್ರತಿ ತಿಂಗಳು ಅವರಿಗೆ ಹಣವನ್ನು ನೀಡುತ್ತಾರೆ. ಖಂಡಿತ, ನಾನು ಅಫ್ಘಾನಿಸ್ತಾನದಲ್ಲಿ ವಾಸಿಸಲು ಬಯಸುತ್ತೇನೆ ಎಂದು ನಾನು ಹೇಳಲಾರೆ, ಇದು ನನ್ನ ಸ್ಥಾನವಲ್ಲ. ಭಾರತ ನನ್ನ ಸ್ಥಾನ, ಹಾಗಾಗಿ ಅವರು ನನ್ನನ್ನು ಕರೆದೊಯ್ದರೆ, ಅವರು ನನ್ನನ್ನು ಜೈಲಿಗೆ ಹಾಕದಿದ್ದರೆ ನಾನು ಭಾರತಕ್ಕೆ ಮರಳಲು ಬಯಸುತ್ತೇನೆ ಎಂದಿದ್ದಾಳೆ.ಮತ್ತೋರ್ವ ಮಹಿಳೆ ಸೋನಿಯಾ ವೀಡಿಯೋದಲ್ಲಿ ಮಾತನಾಡಿ ಹಿಂಸಾಚಾರದಲ್ಲಿ ತಾನು ವೈಯಕ್ತಿಕವಾಗಿ ಭಾಗಿಯಾಗಿಲ್ಲ ಎಂದು “ನನ್ನ ಪತಿ ಅವನಿಗೆ ಇಷ್ಟವಾದುದ್ದನ್ನು ಆಯ್ದುಕೊಂಡಿದ್ದಾನೆ. ಮತ್ತು ನಾನು ಅವನೊಂದಿಗೆ ಇಲ್ಲಿಗೆ ಬಂದಿದ್ದಕ್ಕೆ ವಿಷಾದಿಸುವುದಿಲ್ಲ. ನಾನು ಅವನೊಂದಿಗೆ ಇನ್ನೂ ಮೂರು ವರ್ಷಗಳನ್ನು ಕಳೆದಿದ್ದೇನೆ. ನಾನು ಐಸಿಸ್‌ ಪ್ರಾಂತ್ಯಕ್ಕೆ ತಲುಪಿದ್ದರೂ ನಾನು ಯಾವುದರಲ್ಲೂ ಭಾಗಿಯಾಗಿಲ್ಲ. ನಾವು ಮನೆಯಲ್ಲಿದ್ದೆವು, ನಾವು ಯಾವುದೇ ಕ್ರೌರ್ಯಗಳಿಗೆ ಒಳಗಾಗಲಿಲ್ಲ, ನಾವು ತುಂಬಾ ಸಾಮಾನ್ಯ ಜೀವನ ನಡೆಸುತ್ತಿದ್ದೆವು. ನಾವು ಯಾವುದಕ್ಕೂ ಅನುಭವಿಸಲಿಲ್ಲ ಎಂದು ಅವಳು ಹೇಳುತ್ತಾಳೆ. ಇವರು ಸಂಪೂರ್ಣ ಜಿಹಾದಿ ಸಿದ್ದಾಂತವನ್ನು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಖಡಕ್‌ ನಿರ್ಧಾರವನ್ನು ತೆಗೆದುಕೊಂಡಿದೆ. ದೇಶ ದ್ರೋಹದ
ಕೃತ್ಯದಲ್ಲಿ ಪಾಲ್ಗೊಂಡಿರುವವರನ್ನು ಭಾರತಕ್ಕೆ ಕರೆಸಿಕೊಂಡರೆ ಇಲ್ಲೂ ಪುನಃ ತಮ್ಮ ಸಿದ್ದಾಂತವನ್ನೇ ಪ್ರಚಾರಪಡಿಸಿ ದೇಶಕ್ಕೆ ಅಪಾಯವಿದೆ ಎಂಬ ಕಾರಣದಿಂದ ದೇಶ ಪ್ರವೇಶಿಸುವುದನ್ನು ನಿರ್ಬಂಧಿಸಿದೆ. ಈಗಾಗಲೇ ಸೆರೆ ಸಿಕ್ಕು ಜೈಲು ಶಿಕ್ಷೆ ಅನುಭವಿಸಿ ಬಂದವರೂ ಪುನಃ ಇದೇ ಕೃತ್ಯದಲ್ಲಿ ತೊಡಗಿದ್ದು ಪತ್ತೆ ಆಗಿರುವುದೇ ಇದಕ್ಕೆ ಕಾರಣವಾಗಿದೆ. ಅಫ್ಘಾನಿಸ್ಥಾನದ ಜೈಲಿನಲ್ಲಿರುವ ನಿಮಿಷಾ ಎಂಬಾಕೆಯ ತಾಯಿ ಬಿಂದು ಎಂಬಾಕೆ ಮಾದ್ಯಮಗಳೊಂದಿಗೆ ಪ್ರತಿಕ್ರಿಯಿಸಿ ಸರ್ಕಾರದ ನಿರ್ಧಾರದಿಂದ ನಾಲ್ವರು ಮಹಿಳೆಯರಿಗೆ ನಿರಾಶೆಯಾಗಿದೆ. “ಮಾನವ ಹಕ್ಕುಗಳ ಪ್ರಕಾರ ಮಹಿಳೆಗೆ ಹಿಂತಿರುಗುವ ಹಕ್ಕಿದೆ ಮತ್ತು ವಿಚಾರಣೆಯನ್ನು ಒಳಗೊಂಡಂತೆ ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಇಲ್ಲಿ ಎದುರಿಸಬಹುದು. ನನ್ನ ನಾಲ್ಕು ವರ್ಷದ ಮೊಮ್ಮಗಳನ್ನು ರಕ್ಷಿಸಬೇಕು ಎಂದು ಹೇಳಿದ್ದಾಳೆ. ಈಕೆಯು ಕಳೆದ ತಿಂಗಳು ಸಂದರ್ಶನ ನೀಡುತಿದ್ದ ಟಿವಿಯೊಂದರ ವರದಿಗಾರ ನಾಲ್ವರೂ ದೇಶ ದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸುವುದೇ ಸೂಕ್ತ ಎಂದು ಹೇಳಿದ್ದಕ್ಕೆ ಆಕೆ ಮೈಕ್‌ ಕಿತ್ತುಕೊಂಡು ಹಲ್ಲೆ ನಡೆಸಿದ್ದಳು. ಈ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿತ್ತು. ಈ ನಡುವೆ ಕೇರಳದ ಮಾನವ ಹಕ್ಕು ಸಂಸ್ಥೆಗಳು ಸೆರೆಯಲ್ಲಿರುವ ನಾಲ್ವರನ್ನು ಭಾರತಕ್ಕೆ ಕರೆಸಿಕೊಳ್ಳಲು ಕಾನೂನು ಹೋರಾಟ ನಡೆಸಲು ಮುಂದಾಗಿವೆ.

Indresh KC

Recent Posts

ಅಧಿಕಾರಿಗಳಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಮತದಾನದ ಆರೋಪ: ಸ್ಥಳಕ್ಕೆ ಉಮೇಶ ಜಾಧವ್ ಭೇಟಿ

ಇಲ್ಲಿನ ಕಲಬುರಗಿ ಉತ್ತರ ಮತಕ್ಷೇತ್ರದ ನ್ಯೂ ರಾಘವೇಂದ್ರ ಕಾಲೋನಿಯ ಬೂತ್ ಸಂಖ್ಯೆ 181 ರಲ್ಲಿ ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ…

1 hour ago

ಅತನೂರ ಗ್ರಾಮದಲ್ಲಿ ಸರ್ವಧರ್ಮಗಳ ಆರಾಧ್ಯದೈವ ನಂದಿ ಬಸವನ ಜಾತ್ರೆಯ ಸಡಗರ

ಅಫಜಲಪುರ ತಾಲೂಕಿನ ಅತನೂರ ಗ್ರಾಮದಲ್ಲಿ ಗ್ರಾಮದೇವ ನಂದಿ ಬಸವೇಶ್ವರ ಜಾತ್ರೆಯು ಸಡಗರದಿಂದ ನಡೆಯಲಿದೆ ಎಂದು ದೇವಸ್ಥಾನ ಮಂಡಳಿಯ ಸದಸ್ಯರು ತಿಳಿಸಿದರು.

1 hour ago

ಪ್ರೀತಿಸಿ ಮದುವೆಯಾದ ಅನ್ಯಕೋಮಿನ ಜೋಡಿ: ಹಿಂದೂ ಪರ ಸಂಘಟನೆಗಳಿಂದ ಪ್ರತಿಭಟನೆ

ಮುಸ್ಲಿಂ ಯುವತಿ ಬಾದಾಮಿ ಮೂಲದ ರುಬಿನಾ ಹಾಗೂ ಹಿಂದೂ ಯುವಕ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿ ರಕ್ಷಣೆ ಕೋರಿ ಬಾಗಲಕೋಟೆ…

2 hours ago

ಮೆಲ್ಬೋರ್ನ್‌ನಲ್ಲಿ ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ  ಭಾರತೀಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

2 hours ago

ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಸೋಮವಾರ ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಿತು. ಎಣ್ಣೆ ಮಜ್ಜನ ಸೇವೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾದಪ್ಪನ ದರ್ಶನ ಪಡೆದು…

3 hours ago

ಅಕ್ಷಯ ತೃತೀಯದಂದು ಬಾಲ್ಯವಿವಾಹ ನಡೆಯದಂತೆ ಕ್ರಮ

ಮೇ 10 ರಂದುಬಸವ ಜಯಂತಿ ಹಾಗೂ ಅಕ್ಷಯ ತೃತೀಯ ದಿನವಾದ ಕಾರಣ ಈ ಸಂದರ್ಭದಲ್ಲಿ ವೈಯಕ್ತಿಕ ವಿವಾಹಗಳು ಹಾಗೂ ಸಾಮೂಹಿಕ…

3 hours ago