News Karnataka Kannada
Tuesday, April 30 2024
ಕರ್ನಾಟಕ

ಕೇಂದ್ರ ಸಚಿವರಿಗೂ ದಲಿತ ಎಂಬ ಕಾರಣಕ್ಕೆ ಪ್ರವೇಶ ನಿಷೇದಿಸಿದ ಗ್ರಾಮಸ್ಥರು

Minister Narayana Swamy 9 7 21
Photo Credit :

ಚಿತ್ರದುರ್ಗ: ನಮಗೆಲ್ಲರಿಗೂ ತಿಳಿದಿರುವಂತೆ ದಲಿತರು ಇಂದಿಗೂ ಎಲ್ಲಾ ವರ್ಗದ ಜನರಿಂದ ತಾರತಮ್ಯಗಳನ್ನು ಎದುರಿಸುತ್ತಾರೆ. ನಾಲ್ಕು ಬಾರಿ ಶಾಸಕರು, ಮಾಜಿ ಮಂತ್ರಿಗಳು, ಹಾಲಿ ಸಂಸದರು ಮತ್ತು ಕರ್ನಾಟಕದ ಪ್ರಸಿದ್ಧ ದಲಿತ ಮುಖಂಡ ಎ. ನಾರಾಯಣಸ್ವಾಮಿ ಅವರು ಎಸ್‌ಸಿ ಜಾರಿಗೆ ಸೇರಿದವರಾಗಿದ್ದರಿಂದ ಪೆಮ್ಮನಹಳ್ಳಿ ಗೊಲ್ಲರಹಟ್ಟಿ ಹಳ್ಳಿಯವರು ದೇವಾಲಯಕ್ಕೆ ಪ್ರವೇಶವನ್ನು ನಿರಾಕರಿಸಿದ್ದರು. 2019 ರಲ್ಲಿ ಅದು ರಾಷ್ಟ್ರೀಯ ಸುದ್ದಿಯಾಗಿತ್ತು. ಎಸ್‌ಸಿ ಅಭ್ಯರ್ಥಿಗಳಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರವೂ ಅಲ್ಲಿನ ಜನರು ನಾರಾಯಣಸ್ವಾಮಿ ಅವರನ್ನು ಸ್ವಾಗತಿಸುವುದಿಲ್ಲ. ಈ ಸುದ್ದಿ ಇತ್ತೀಚಿಗೆ ಇಂಟರ್‌ನಟ್‌ನಲ್ಲಿ ವೈರಲ್‌ ಆಗಿದೆ. ಈ ಗ್ರಾಮ ಸಹ ಅದೇ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ಪ್ರಧಾನಿ ಮೋದಿಯವರು ಕ್ಯಾಬಿನೆಟ್ ಸಹೋದ್ಯೋಗಿಯಾಗಿ ನಾರಾಯಣ ಸ್ವಾಮಿಯವರನ್ನು ಆಯ್ಕೆ ಮಾಡಿದ ನಂತರ ಸುದ್ದಿ ಸಂಸ್ಥೆ ಐಎಎನ್‌ಎಸ್ ಗ್ರಾಮಕ್ಕೆ ಭೇಟಿ ನೀಡಿದಾಗ ಮತ್ತು ನಾರಾಯಣಸ್ವಾಮಿಯನ್ನು ಗ್ರಾಮಕ್ಕೆ ಪ್ರವೇಶಿಸದಂತೆ ತಡೆದ ಹಿಂದಿನ ಘಟನೆಯ ಬಗ್ಗೆ ಗ್ರಾಮಸ್ಥರೊಂದಿಗೆ ಮಾತನಾಡಿದಾಗ, ಇಂದಿಗೂ ಅವಕಾಶ ಇಲ್ಲ. ಅವರು ಎಸ್‌ಸಿ ಜಾತಿಗೆ ಸೇರಿದವನಾಗಿದ್ದಾರೆ ಎಂದು ಗ್ರಾಮದ ಜನರು ಹೇಳಿದ್ದಾರೆ ಎನ್ನುವುದು ಬಯಲಾಗಿದೆ. ಪೆಮ್ಮಾನಹಳ್ಳಿ ಗೊಲ್ಲರಹಟ್ಟಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗ್ರಾಮವಾಗಿದ್ದು 1,000 ಜನಸಂಖ್ಯೆಯನ್ನು ಹೊಂದಿದೆ ಮತ್ತು ಇವರೆಲ್ಲರೂ ಗೊಲ್ಲ ಸಮುದಾಯಕ್ಕೆ ಸೇರಿದವರು. ಇತ್ತೀಚಿನವರೆಗೂ, ಮುಟ್ಟಿನ ದಿನಗಳು ಮತ್ತು ಗರ್ಭಾವಸ್ಥೆಯಲ್ಲಿರುವ ಮಹಿಳೆಯರನ್ನು ತಮ್ಮ ಮನೆಯ ಹೊರಗೆ ಇರಿಸುವ ಆಚರಣೆಗಳು ಇಲ್ಲಿವೆ. ಆ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ತಿಮ್ಮರಾಯಪ್ಪ ಅವರು ಎಂದಿಗೂ ಗ್ರಾಮಕ್ಕೆ ಕಾಲಿಡುವುದಿಲ್ಲ. ಅವರು ಸ್ವಲ್ಪ ದೂರದಲ್ಲಿ ನಿಂತು ಸಮಸ್ಯಗಳ ಕುರಿತು ಚರ್ಚೆ ಮಾಡುತ್ತಾರೆ ಎಂದು ಸ್ಥಳೀಯ ವ್ಯಕ್ತಿ ಹೇಳಿದರು. ಸಂಪ್ರದಾಯಗಳನ್ನು ಮುರಿಯಲು ಸಾಧ್ಯವಿಲ್ಲ. ನಮ್ಮ ಅಜ್ಜನ ದಿನಗಳಿಂದ ನಾವು ದಲಿತರಿಗೆ ಅವಕಾಶ ನೀಡುತ್ತಿಲ್ಲ. ಅದರಲ್ಲಿ ಏನಿದೆ ಎಂದು ವ್ಯಕ್ತಿಯೊಬ್ಬರು ಹೇಳಿದರು.
ಸಂಸದ ನಾರಾಯಣಸ್ವಾಮಿ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಬಗ್ಗೆ ನಮಗೆ ಏನೂ ತಿಳಿದಿಲ್ಲ. ಹಾಗೂ ನಮಗೆ ಯಾವುದೇ ಆಸಕ್ತಿ ಕೂಡ ಇಲ್ಲ ಎಂದು ಯುವತಿ ಹೇಳಿದ್ದಾರೆ. ಜೊತೆಗೆ, ಜಾತಿಗೆ ಸಂಬಂಧಿಸಿದ ಸಂಪ್ರದಾಯಗಳನ್ನು ಮುರಿಯಲು ಸಾಧ್ಯವಿಲ್ಲ ಎಂದೂ ಸಮರ್ಥಿಸಿಕೊಂಡಿದ್ದಾರೆ. ಪರಿಶಿಷ್ಟ ಜಾತಿಯ ಜನರು ಸಹ ಇತರ ಸಮುದಾಯಗಳಿಂದ ಯಾರನ್ನೂ ತಮ್ಮ ದೇವಾಲಯಗಳಿಗೆ ಅನುಮತಿಸುವುದಿಲ್ಲ ಎಂದು ಯುವಕರು ಪ್ರತಿಪಾದಿಸಿದರು. ಈ ಘಟನೆಗಳ ನಡುವೆ ಗ್ರಾಮದ ಮುಖ್ಯಸ್ಥ ಮುದ್ದಪ್ಪ, 2019 ರ ಘಟನೆಯ ನಂತರ ಗ್ರಾಮಸ್ಥರು ನಾರಾಯಣಸ್ವಾಮಿಯವರನ್ನು ಹೂವು ಹಾಕುವ ಮೂಲಕ ಸ್ವಾಗತಿಸಲಾಯಿತು ಮತ್ತು ದೇವಸ್ಥಾನಕ್ಕೆ ಕರೆದುಕೊಂಡು ಹೋಗಲಾಯಿತು ಎಂದು ವಿವರಿಸಿದರು.
ಪ್ರವೇಶಿಸಬಾರದೆಂದು ಹೇಳಿದ ವೃದ್ಧ ಮೃತಪಟ್ಟರು ಮತ್ತು ಪ್ರವೇಶಿಸಬಾರದೆಂದು ಹೇಳಿದ ಯುವಕನ್ನು ಬೆಂಗಳೂರಿಗೆ ಹೋಗಿದ್ದನು ಎಂದು ವಿವರಿಸಿದರು. ‘ಮೂಲಭೂತ ಅಗತ್ಯಗಳನ್ನು ಪೂರೈಸಿದರೆ ನಾನು ಗ್ರಾಮಸ್ಥರಿಗೆ ಮನವರಿಕೆ ಮಾಡಬಹುದು. ಜನರು ಕುಡಿಯುವ ನೀರಿನ ಸೌಲಭ್ಯ, ಶಾಲೆಯ ನಿರ್ಮಾಣ ಮತ್ತು ಮುಖ್ಯವಾಗಿ ತಮ್ಮ ಭೂಮಿಯನ್ನು ಆದಾಯ ಭೂಮಿ ಎಂದು ಗುರುತಿಸಲಿ ಎಂದು ಜನರು ಎದುರು ನೋಡುತ್ತಿದ್ದಾರೆ ‘ಎಂದು ಊರಿನ ಮುಖ್ಯಸ್ಥ ವಿವರಿಸಿದರು. ಇಲ್ಲಿ ಜಾತಿಯ ಯಾವುದೇ ಸಮಸ್ಯೆ ಇಲ್ಲ, ಅದು ಅಭಿವೃದ್ಧಿಯ ಕುರಿತು ಇರುವ ಸಮಸ್ಯೆ, ಹಾಗೂ ನಾವು ಅಧುನಿಕವಾಗಿ ತುಂಬ ಮುಂದುವರಿದ್ದೇವೆ ಎಂದು ಅವರು ಹೇಳಿದರು. ಸಂಪ್ರದಾಯಗಳು ಕಠಿಣವಾಗಿದ್ದು ಸುಲಭವಾಗಿ ಮುರಿಯಲು ಸಾಧ್ಯವಿಲ್ಲ ಎಂದು ಗ್ರಾಮದ ಪದವೀಧರರಾದ ನಾಗೇಂದ್ರ ಹೇಳಿದರು. ಅದೇ ಸಮಯದಲ್ಲಿ, ನಾವು ಅವುಗಳನ್ನು ಮುರಿಯಲು ಮತ್ತು ಬದಲಾವಣೆಯನ್ನು ತರಲು ಪ್ರಯತ್ನಿಸಬೇಕು. “ಅವರಿಗೆ ಅವಕಾಶ ನೀಡಲಾಗುತ್ತದೆಯೇ ಅಥವಾ ಅನುಮತಿಸಲಾಗುವುದಿಲ್ಲ ಎಂಬ ವಿಷಯದ ಬಗ್ಗೆ ನನಗೆ ಕಾಳಜಿ ಇಲ್ಲ”. ಆದರೆ ಇಡೀ ಗ್ರಾಮದ ಆಸ್ತಿ ಹಕ್ಕುಗಳು ನಾಲ್ಕು ಜನರ ಹೆಸರಿನಲ್ಲಿದೆ. ಇದನ್ನು ಆದಾಯದ ಭೂಮಿಯಾಗಿ ಪರಿವರ್ತಿಸಿದರೆ, ಪ್ರತಿಯೊಬ್ಬರಿಗೂ ಆಸ್ತಿ ಹಕ್ಕು ದೊರೆಯುವುದರಿಂದ ಹೆಚ್ಚಿನ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಅವರು ಹೇಳುತ್ತಾರೆ.
ಹಾಗೂ ನಾರಾಯಣಸ್ವಾಮಿ ಅವರು ಇದರ ಕಾಳಜಿ ವಹಿಸಬೇಕು ಹಾಗೂ ಸಮಸ್ಯೆಯನ್ನು ಪರಿಹಾರಿಸಬೇಕು ಎಂದು ತಮ್ಮ ಅಭಿಲಾಷೆಯನ್ನು ಹಂಚಿಕೊಂಡಿದ್ದಾರೆ. 10 ನೇ ತರಗತಿಯಲ್ಲಿ ಓದುತ್ತಿರುವ ರಕ್ಷಿತಾ, ಜಾತಿ ವ್ಯವಸ್ಥೆಗೆ ಸಂಬಂಧಿಸಿದಂತೆ ಸಂಪ್ರದಾಯಗಳಲ್ಲಿ ಬದಲಾವಣೆ ಬಯಸಬೇಕೆಂದು ಸಮರ್ಥಿಸಿಕೊಂಡಳು. ಈ ಎಲ್ಲಾ ಅಭಿಪ್ರಾಯಗಳ ಜೊತೆಗೆ ಐಎಎನ್‌ಎಸ್ ನಾರಾಯಣಸ್ವಾಮಿ ಅವರನ್ನು ಸಂಪರ್ಕಿಸಿದಾಗ, ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ಗ್ರಾಮದ ಅರ್ಧದಷ್ಟು ಜನರು ದೇವಸ್ಥಾನ ಮತ್ತು ಹಳ್ಳಿಗೆ ಪ್ರವೇಶಿಸದಂತೆ ಯೋಚಿಸುತ್ತಿರುವುದರ ಬಗ್ಗೆ ನನಗೆ ಯಾವುದೇ ರೀತಿಯ ಕೋಪ ಇಲ್ಲ ಎಂದು ಪ್ರತಿಕ್ರಿಯಿ ನೀಡಿದರು. ಮನಸ್ಥಿತಿಯನ್ನು ಬದಲಾಯಿಸುವ ಅವಶ್ಯಕತೆಯಿದೆ. ಜನರಲ್ಲಿ ಕುರುಡು ನಂಬಿಕೆಗಳನ್ನು ನಿರ್ಮೂಲನೆ ಮಾಡುವತ್ತ ನಾವು ಗಮನ ಹರಿಸಬೇಕು ಎಂದು ನಾರಾಯಣಸ್ವಾಮಿ ಹೇಳಿದರು.
“ಗ್ರಾಮ ಮತ್ತು ಇಡೀ ತಾಲೂಕು ಎಲ್ಲಾ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಾನು ಸ್ಥಳೀಯ ಶಾಸಕ ಮತ್ತು ಇತರ ಪ್ರತಿನಿಧಿಗಳೊಂದಿಗೆ ಸಮನ್ವಯ ಸಾಧಿಸುತ್ತೇನೆ. ಉತ್ತರ ಭಾರತದಲ್ಲಿ ಸುಧಾರಣೆಗಳ ಕುರಿತು ನಾವು ಗಮನ ಹರಿಸುತ್ತೇವೆ, ಅಲ್ಲಿ ದಲಿತ ದೌರ್ಜನ್ಯದ ಕುರಿತು ಹೆಚ್ಚಿನ ವರದಿಗಳು ಕಂಡುಬಂದಿದೆ” ಎಂದು ಅವರು ಹೇಳಿದರು. ಸೆಪ್ಟೆಂಬರ್ 16, 2019 ರ ರಾತ್ರಿ, ನಾರಾಯಣಸ್ವಾಮಿಯನ್ನು ಗ್ರಾಮಸ್ಥರು ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಪ್ರವೇಶಿಸದಂತೆ ತಡೆದರು. ಹಾಗೂ ಗ್ರಾಮದ ಜನರು ಕೆಳಜಾತಿಯ ಯಾವುದೇ ಜನರು ತಮ್ಮ ಸ್ಥಳಕ್ಕೆ ಪ್ರವೇಶಿಸಬಾರದು ಎಂದು ಒತ್ತಾಯಿಸಿದರು.
ಕಾನೂನು ಪರಿಣಾಮಗಳ ಕುರಿತು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿತ್ತು. ಅದರೂ, ಬಜೆಟ್ ನಲ್ಲಿ ತಮ್ಮ ಗ್ರಾಮಕ್ಕೆ ಯಾವುದೇ ಅನುಕುಲವನ್ನು ಮಾಡಿಕೊಡದ ಕಾರಣ ನಾರಾಯಣಸ್ವಾಮಿಯೊಂದಿಗೆ ಗ್ರಾಮಸ್ಥರು ವಾಗ್ವಾದಕ್ಕೆ ಇಳಿದರು. ಇದರಿಂದಾಗಿ ನಾರಾಯಣಸ್ವಾಮಿ ಗ್ರಾಮವನ್ನು ಬಿಟ್ಟು ಹೋಗಬೇಕಾಯಿತು. ಗ್ರಾಮಸ್ಥರ ಕೋಪಕ್ಕೆ ಗುರಿಯಾದರು. ಆದರೆ, ಈ ಕುರಿತು ಕೋಪಗೊಂಡಿದ್ದರೂ ಗ್ರಾಮಸ್ಥರ ವಿರುದ್ದ ಯಾವುದೇ ದೂರು ದಾಖಲಿಸುವುದು ಉತ್ತಮ ಮಾರ್ಗವಲ್ಲ. ಅದರ ಬದಲು ಜಾಗೃತಿ ಮೂಡಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು