Categories: ಕರ್ನಾಟಕ

ಕಾಸರಗೋಡು ಜಿಲ್ಲೆ ವಿದ್ಯುತ್  ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ…

ಕಾಸರಗೋಡು: ಜಿಲ್ಲೆಯು ವಿದ್ಯುತ್  ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಮುನ್ನುಗ್ಗುತ್ತಿದ್ದು, ಪೈವಳಿಕೆಯ ಸೋಲಾರ್‌ ಪಾರ್ಕ್ ಉದ್ಘಾಟನೆಗೆ ಸಜ್ಜಾಗಿದೆ.

ಕೇರಳ ರಾಜ್ಯ ಸರಕಾರದ ಮಹತ್ತರ ಯೋಜನೆ ಇದಾಗಿದ್ದು, ಪೈವಳಿಕೆ ಕೊಮ್ಮಂಗಳದ ಸೌರ ವಿದ್ಯುತ್‌ ಘಟಕವು ಕಾಸರಗೋಡು ಜಿಲ್ಲೆಯ ಎರಡನ ಅತಿ ದೊಡ್ಡ ಸೋಲಾರ್‌ ಪಾರ್ಕ್ ಎಂಬ ಖ್ಯಾತಿ ಪಡೆದಿದೆ.

ರಾಜ್ಯ ವಿದ್ಯುಚ್ಚಕ್ತಿ ಮಂಡಳಿ ಅಧೀನದಲ್ಲಿ ನಿರ್ಮಾಣವಾದ ಸೋಲಾರ್‌ ಪಾರ್ಕ್ ಅನ್ನು ಜ. 23ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಉದ್ಘಾಟಿಸುವರು.

ಪೈವಳಿಕೆ ಘಟಕ ಕಾರ್ಯಾರಂಭಗೊಂಡ ನಂತರ ಕಾಸರಗೋಡು ಜಿಲ್ಲೆಯು ಕೇರಳ ರಾಜ್ಯದಲ್ಲೇ ಅತಿ ಹೆಚ್ಚು ಸೌರ ವಿದ್ಯುತ್‌ ಉತ್ಪಾದಿಸುವ ಪ್ರಥಮ ಜಿಲ್ಲೆಯಾಗಿ ಮಾರ್ಪಾಡಾಗಲಿದೆ. ಸುಮಾರು 256 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಸೌರ ವಿದ್ಯುತ್‌ ಫಲಕಗಳು ಜಿಲ್ಲೆಯ ನಿತ್ಯ ಬಳಕೆಗೆ ವರ ದಾನವಾಗಲಿದೆ.

ವಿದ್ಯುತ್‌ ವ್ಯತ್ಯಯ ತಪ್ಪಿಸಲು ಹಾಗೂ ನಿಯಮಿತ ವಿದ್ಯುತ್‌ ಪೂರೈಸಲು ಪೈವಳಿಕೆ ಸೋಲಾರ್‌ ಪಾರ್ಕ್ ಫಲಪ್ರದವಾಗಲಿದೆ.

ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿ ಪೂರ್ಣತೆ ಹಂತ ತಲುಪಿದೆ. ಜವಾಹರಲಾಲ್‌ ನ್ಯಾಶನಲ್‌ ಸೋಲಾರ್‌ ಮಿಶನ್‌ ಯೋಜನೆ ಮೂಲಕ ಜಿಲ್ಲೆಯಲ್ಲಿ   ನಿರ್ಮಿಸಿದ ಎರಡನೇ ಅತಿ ದೊಡ್ಡ ಯೋಜನೆ ಇದಾಗಿದ್ದು, ಪ್ರಥಮ ಹಂತದ ಯೋಜನೆಯು ಕಾಞಂಗಾಡಿನ ಅಂಬಲತ್ತರದಲ್ಲಿಕಳೆದ ವರ್ಷ ಪೂರ್ಣಗೊಂಡು ವಿದ್ಯುತ್‌ ಪೂರೈಕೆಯಾಗುತ್ತಿದೆ. 3ನೇ ಹಂತದ ಯೋಜನೆ ನೆಲ್ಲತ್ತಡಂನಲ್ಲಿ ಆರಂಭವಾಗಲಿದೆ

ಪೈವಳಿಕೆಯಲ್ಲಿಉತ್ಪಾದನೆಯಾಗುವ ವಿದ್ಯುತ್‌ ಕುಬಣೂರು 110 ಕೆ.ವಿ. ಸಬ್‌ ಸ್ಟೇಶನ್‌ಗೆ ಪ್ರವಹಿಸಲಿದ್ದು, . ಯೋಜನೆ ನೆಲೆಗೊಂಡಿರುವ ಕರ್ಮಂತೋಡಯಿಂದ ಕುಬಣೂರಿಗೆ ವಿದ್ಯುತ್‌ ಪೂರೈಸುವ ನಿಟ್ಟಿನಲ್ಲಿ8.5 ಕಿ.ಮೀ. ದೂರದವರೆಗೆ ಕವರ್ಡ್‌ ಕಂಟೈನರ್‌ ಇರುವ 33 ಕೆ.ವಿ. ಡಬಲ್‌ ಸಕ್ರ್ಯೂಟ್‌ ಲೈನ್‌ ಅಳವಡಿಸಲಾಗಿದೆ. ಈ ಮೂಲಕ ಸಬ್‌ ಸ್ಟೇಶನ್‌ ತಲುಪುವ ವಿದ್ಯುತ್‌ನ್ನು ಸಬ್‌ಸ್ಟೇಶನಲ್ಲಿರುವ 25 ಎಂ.ವಿ.ಎ. ಟ್ರಾನ್ಸ್‌ಫಾರ್ಮರ್‌ ಮೂಲಕ ಸ್ವೀಕರಿಸಿ ಪೂರೈಸಲಾಗುವುದು. ಪೈವಳಿಕೆ ಸಬ್‌ ಸ್ಟೇಶನ್‌ ಡಿ. 31ರಂದು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಪೈವಳಿಕೆ ಯೋಜನೆ ಜಾರಿಗೊಳ್ಳುವ ಮೂಲಕ ಜಿಲ್ಲೆಯ ವಿದ್ಯುತ್‌ ವಲಯದಲ್ಲಿಬೃಹತ್‌ ಮುನ್ನಡೆ ಸಾಧಿಸಿದಂತಾಗುವುದು. ಕಾಸರಗೋಡು, ಮಂಜೇಶ್ವರದಲ್ಲಿ ವಿದ್ಯುತ್‌ ಪೂರೈಕೆ ಸಂಬಂಧಪಟ್ಟ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ರಿನ್ಯೂವೆಬಲ್‌ ಪವರ್‌ ಕಾರ್ಪೊರೇಶನ್‌ ಆಫ್‌ ಕೇರಳ ಲಿಮಿಟೆಡ್‌ ಸಿಇಒ ಅಗಸ್ಟಿನ್‌ ಥಾಮಸ್‌  ತಿಳಿಸಿದ್ದಾರೆ.

Desk

Recent Posts

ಜಾತಿ ನಿಂದನೆ ಕೇಸ್ ಹೆದರಿದ ಯುವಕ ಆತ್ಮಹತ್ಯೆಗೆ ಶರಣು

ಜಾತಿ ನಿಂದನೆ ಕೇಸ್‌ ದಾಖಲಿಸಿದ್ದಕ್ಕೆ ಹೆದರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮದಲ್ಲಿ…

10 mins ago

ಚಾರ್ಜ್​ಗೆ ಇಟ್ಟ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟ: ಹತ್ತಿರದ ಶಾಮಿಯಾನ‌ ಅಂಗಡಿ ಸುಟ್ಟು ಭಸ್ಮ

ಚಾರ್ಜ್​ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಗೊಂಡ ಘಟನೆ ಮಂಡ್ಯದ ಮಳವಳ್ಳಿ ಪಟ್ಟಣದ NES ಬಡಾವಣೆಯಲ್ಲಿ ನಡೆದಿದೆ.

25 mins ago

ದನದ ಮಾಂಸ ರಫ್ತಿನಲ್ಲಿ ಬಿಜೆಪಿ 2ನೇ ಸ್ಥಾನ: ಸಂತೋಷ್‌ ಲಾಡ್‌

ಬಿಜೆಪಿ ಸರಕಾರದ ಸಾಧನೆ ಕೇವಲ ಎರಡೇ ಎರಡು. ಒಂದು ದನದ ಮಾಂಸ ರಫ್ತಿನಲ್ಲಿ 2ನೇ ಸ್ಥಾನ. ಎರಡು ಮೋದಿ ಸ್ವಜಾಹೀರಾತಿಗಾಗಿ…

36 mins ago

ಚಾಮರಾಜನಗರ: ಸಾರಿಗೆ ಬಸ್‌ ತಡೆದು ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೆಳಗ್ಗೆ ಕಾಲೇಜುಗಳಿಗೆ ತೆರಳಲು ಸಮರ್ಪಕ ಬಸ್ ಸೌಕರ್ಯವಿಲ್ಲ ಎಂದು ಆರೋಪಿಸಿ ಕಾಲೇಜು ವಿದ್ಯಾರ್ಥಿಗಳು ಕೆ.ಎಸ್. ಆರ್. ಟಿ ಸಿ ಬಸ್…

49 mins ago

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿ ಹೃದಯಾಘಾತದಿಂದ ಮೃತ್ಯು

ಪುಣೆಯಿಂದ ಕುಂದಾಪುರಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಉದ್ಯಮಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಿನ್ನೆ ಹೊನ್ನಾವರದಲ್ಲಿ ನಡೆದಿದೆ.

1 hour ago

ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿದ ಶ್ರೀರಂಭಾಪುರಿ ಜಗದ್ಗುರು

ನೇಹಾ ಹಿರೇಮಠ ನಿವಾಸಕ್ಕೆ ಭೇಟಿ ನೀಡಿದ ಶ್ರೀರಂಭಾಪುರಿ ಜಗದ್ಗುರುಗಳು ಹಿರೇಮಠದ ದಂಪತಿಗೆ ಸಾಂತ್ವನ ಹೇಳಿದರು.

1 hour ago