Categories: ಕರ್ನಾಟಕ

ಅಮೇಜಾನ್ ಕಂಪೆನಿಗೆ ಒಂದು ಕೋಟಿ ಮುಂಡಾಯಿಸಿದ ಕಾಫಿನಾಡಿನ ಖದೀಮರು

ಚಿಕ್ಕಮಗಳೂರು: ಮೋಸ ಹೋಗೋರು ಎಲ್ಲಿಯವರೆಗೂ ಇರ್ತಾರೋ, ಅಲ್ಲಿವರೆಗೂ ಮೋಸ ಮಾಡೋರು ಇರ್ತಾರೆ. ಕಾಫಿನಾಡಿನ ಖತರ್ನಾಕ್ ಕಳ್ಳರು ಆನ್‍ಲೈನ್ ಕಂಪೆನಿಗೆ ಕೋಟಿಗೂ ಅಧಿಕ ಹಣ ಮುಂಡಾಯಿಸಿದ್ದಾರೆ.

ಕಂಪೆನಿಗೆ ಈ ರೀತಿಯೂ ಮುಂಡಾಯಿಸ್ಬೋದು ಅಂತ ಪಿಯು ಮೆಟ್ಟಿಲತ್ತದ ನಾಲ್ವರು ತೋರಿಸಿಕೊಟ್ಟಿದ್ದಾರೆ. ಇವ್ರ ತಲೆ ಮುಂದೆ ಇಂಜಿನಿಯರ್ಸ್ ಏನೋ ಅಲ್ಲಾ. ಈ ಕಿಲಾಡಿ ಕಳ್ಳರ ಕೈಚಳಕ ನೋಡಿದ ಕಾಫಿನಾಡಿನ ಪೊಲೀಸರೆ ಶಾಕ್‍ನಿಂದ ಹೊರಬಂದಿಲ್ಲ. ಅಮೇಜಾನ್ ಕಂಪೆನಿ ಯಾರಿಗ್ ತಾನೇ ಗೊತ್ತಿಲ್ಲ. ದಿನಂ ಪ್ರತಿ ಲಕ್ಷಾಂತರ ರೂಪಾಯಿ ವ್ಯವಹರಿಸೋ ಕಂಪೆನಿ. ಒಂದು ಪೈಸೆ ಕೂಡ ಮಿಸ್ ಆಗದಂತೆ ಲೆಕ್ಕ ಹಾಕೋ ಕಂಪ್ಯೂಟರ್ ಹಾಗೂ ಸಾವಿರಾರು ಜನ ಕೆಲಸಗಾರರಿದ್ದಾರೆ.

ಆದರೆ, ಏನ್ ಪ್ರಯೋಜನ. ಈ ಹುಡುಗ್ರ ಮುಂದೆ ಅವರೆಲ್ಲಾ ಖಾಲಿ-ಖಾಲಿ. ಅಮೇಜಾನ್‍ನಲ್ಲಿ ಕಾಫಿನಾಡಿಗರು ಬುಕ್ ಮಾಡಿದ ವಸ್ತು ಬರೋದು ಏಕದಂತ ಕೊರಿಯರ್ ಸರ್ವೀಸ್‍ಗೆ. ಅಲ್ಲಿಂದ ಇವ್ರು ಡೆಲವರಿ ಮಾಡ್ತಾರೆ. ಗ್ರಾಹಕರ ಮೊಬೈಲ್‍ಗೆ ಡೆಲವರಿ ಸಕ್ಸಸ್‍ಫುಲ್ ಅಂತ ಮೆಸೇಜ್ ಬರುತ್ತೆ. ಆದ್ರೆ, ಗ್ರಾಹಕರು ಪಾವತಿಸೋ ಹಣ ಮಾತ್ರ ಹೋಗೋದು ಇವ್ರ ಅಕೌಂಟ್‍ಗೆ. ಈ ರೀತಿಯ ಮಾಸ್ಟರ್ ಮೈಂಡ್ ನಿಂದಾ ಆರು ತಿಂಗಳಿಂದಾ ಅಮೇಜಾನ್ ಕಂಪೆನಿಗೆ ಒಂದು ಕೋಟಿ, ಮೂವತ್ತು ಲಕ್ಷ ರೂಪಾಯಿ ಹಣವನ್ನು ಮುಂಡಾಯಿಸಿದ್ದಾರೆ.

ಬೆಂಗಳೂರಿನ ಅಮೇಜಾನ್ ಕಂಪೆನಿಯ ಮ್ಯಾನೇಜರ್ ನವೀನ್ ಕುಮಾರ್‍ ಗೆ ಆಡಿಟಿಂಗ್ ವೇಳೆ ಈ ಮೋಸ ಗೊತ್ತಾಗಿದೆ. ಕೂಡಲೇ ಎಸ್ಪಿ ಅಣ್ಣಾಮಲೈಗೆ ತಿಳಿಸಿದ್ದಾರೆ. ಅಣ್ಣಾಮಲೈ ತಂಡವನ್ನು ಮಾಡಿ ಜಾಡು ಹಿಡಿದಾಗ ಡೆಲವರಿ ಬಾಯ್ಸ್‍ಗಳ ಕಣ್ಣಾಮುಚ್ಚಾಲೆ ಆಟ ಗೊತ್ತಾಗಿದೆ. ಗ್ಯಾಂಗ್‍ನ ಕಿಂಗ್‍ಪಿನ್ ದರ್ಶನ್, ಪುನೀತ್, ಸಚಿನ್ ಶೆಟ್ಟಿ ಹಾಗೂ ಅನಿಲ್ ಅಂದರ್ ಆಗಿದ್ದಾರೆ. ತನಿಖೆ ಮಾಡಿದಾಗ ಗ್ರಾಹಕರನ್ನು ಪರ್ಸನಲ್ ಟ್ಯಾಬ್‍ನಿಂದ ಮುಂಡಾಯಿಸಿರೋ ಕಥೆ ಗೊತ್ತಾಗಿದೆ. ಹಣಕ್ಕೆ ಗ್ರಾಹಕರು ಡೆಬಿಟ್ ಕಾರ್ಡ್ ಬಳಸುತ್ತಾರೆ ಅಂತ ಗೊತ್ತಾದ್ರೆ ಸಾಕು ತಮ್ಮ ಟ್ಯಾಬ್ ನಲ್ಲಿ ಸ್ವೈಪ್ ಮಾಡಿ ಹಣವನ್ನ ಅಕೌಂಟ್‍ಗೆ ಜಮಾ ಮಾಡ್ಕೊಂತ್ತಾರೆ.

ಇತ್ತ ಗ್ರಾಹಕರಿಗೂ ಡೆಲವರಿ ಮೆಸೇಜ್ ಬರುತ್ತೆ. ಅತ್ತ ಕಂಪನಿಗೂ ಮೆಸೇಜ್ ತಲುಪುತ್ತೆ. ಇಂತ ಟೆಕ್ನಾಲಜಿ ದೇಶದಲ್ಲಿ ಇದೇ ಮೊದಲಂತೆ. ಇವರೇ ಅಮೇಜಾನ್‍ನಲ್ಲಿ ನಕಲಿ ಖಾತೆ ಕ್ರಿಯೆಟ್ ಮಾಡಿ ತಾವೇ ಆರ್ಡರ್ ಮಾಡಿ ಬಳಿಕ ಕ್ಯಾನ್ಸಲ್ ಮಾಡಿ ವಸ್ತುವನ್ನು ಬೇರೆಯವರಿಗೆ ಮಾರುವ ಮೂಲಕ ಕಂಪನಿಗೆ ಟೋಪಿ ಹಾಕಿದ್ದಾರೆ. ಸದ್ಯ  ಬುಲೆಟ್, ಎರಡು ಪಲ್ಸರ್, ಒಂದು ಜಿಕ್ಸರ್ ಬೈಕ್ ಗಳು ಸೇರಿದಂತೆ 6 ಲಕ್ಷದ 44 ಸಾವಿರ ನಗದು, 21 ಮೊಬೈಲ್ ಫೋನ್, ಲ್ಯಾಪ್ ಟಾಪ್, 2 ಟ್ಯಾಬ್ ಗಳು ಸೇರಿದಂತೆ ಲಕ್ಷಾಂತರ ರೂಪಾಯಿ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ.

Desk

Recent Posts

ಕುಡಿಯುವ ನೀರಿನ ಸಮಸ್ಯೆ: ಕಲುಷಿತ ನೀರು ಸೇವಿಸಿ 114 ಮಂದಿಗೆ ಕಾಲರಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಧಾನಸಭೆ ಕ್ಷೇತ್ರವಾದ ವರುಣದ ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಅಲ್ಲಿನ ಜನ…

5 mins ago

ಆರ್‌ಸಿಬಿ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡದೇ ಮೈದಾನದಿಂದ ತೆರಳಿದ ಧೋನಿ..!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 27 ರನ್​ಗಳಿಂದ…

15 mins ago

ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ಬಂದಿದೆ ಹಸಿರು ಕಳೆ

ಬೇಸಿಗೆಯ ಬಿಸಿಲಿಗೆ ಸಿಲುಕಿ ಕೆಂಪಾಗಿದ್ದ ಚಾಮುಂಡಿಬೆಟ್ಟಕ್ಕೀಗ ವರುಣನ ಕೃಪೆಯಿಂದ ಹಸಿರು ಕಳೆ ಬಂದಿದೆ.  ಜನವರಿಯಿಂದ ಏಪ್ರಿಲ್ ತನಕವೂ ಮಳೆ ಸುರಿಯದ…

26 mins ago

ಆರ್​ಸಿಬಿಗೆ ಟ್ವೀಟ್​ ಮೂಲಕ ವಿಜಯ್​ ಮಲ್ಯ ಅಭಿನಂದನೆ

ಶನಿವಾರ ತಡರಾತ್ರಿ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಹಾಲಿ ಚಾಂಪಿಯನ್​…

36 mins ago

ತಾಯಿಯ ಶವದ ಜೊತೆಗೆ ನಾಲ್ಕು ದಿನ ಕಳೆದಿದ್ದ ಬುದ್ಧಿಮಾಂದ್ಯ ಪುತ್ರಿಯೂ ಮೃತ್ಯು

ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿದ ತನ್ನ ತಾಯಿಯ ಮೃತದೇಹದ ಮುಂದೆ ಅನ್ನ ನೀರು ಇಲ್ಲದೆ ಇದ್ದ ವಿಶೇಷಚೇತನ ಮಗಳು ಕೂಡ…

42 mins ago

ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡ ಜೀವಕ್ಕೆ ಗಂಡಾಂತರ

ಇಂದಿನ ದಿನಗಳಲ್ಲಿ ರಕ್ತದೊತ್ತಡದ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹೀಗೆ ರಕ್ತದೊತ್ತಡ ಸಮಸ್ಯೆ ಕಾಡುವುದಕ್ಕೆ ಕಾರಣಗಳು ಹಲವು. ಅದರಲ್ಲಿಯೂ ಮುಖ್ಯವಾಗಿ ನಮ್ಮ ಜೀವನ…

47 mins ago