News Karnataka Kannada
Tuesday, April 23 2024
Cricket
ಕರ್ನಾಟಕ

ಹೋಂ ಸ್ಟೇಗಳ ಮಾಹಿತಿ ಒಂದು ವಾರದೊಳಗೆ ನೀಡಿ: ಕೊಡಗು ಡಿಸಿ ಸೂಚನೆ

Photo Credit :

ಹೋಂ ಸ್ಟೇಗಳ ಮಾಹಿತಿ ಒಂದು ವಾರದೊಳಗೆ ನೀಡಿ: ಕೊಡಗು ಡಿಸಿ ಸೂಚನೆ

ಮಡಿಕೇರಿ: ಜಿಲ್ಲೆಯಲ್ಲಿ ಅಧಿಕೃತವಾಗಿ ಆನ್‍ಲೈನ್ ಮೂಲಕ ನೋಂದಣಿಯಾಗಿರುವ ಹೋಂ ಸ್ಟೇಗಳ ದಾಖಲಾತಿಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೋಂದಣಿಯಾಗಿರುವ ಹೋಂ ಸ್ಟೇಗಳ ಮಾಹಿತಿ ಪಡೆದು ಅವರು ಮಾತನಾಡಿದರು.

ಕಂದಾಯ ಸಚಿವರ ಸೂಚನೆಯಂತೆ ಅಧಿಕೃತ ಹೋಂ ಸ್ಟೇಗಳ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತಿದ್ದು, ಈ ಸಂಬಂಧ ಹೋಬಳಿವಾರು ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿತ್ತು, ಆದರೆ ಕೆಲವು ಹೋಬಳಿಗಳಲ್ಲಿ ಸರಿಯಾದ ಮಾಹಿತಿ ನೀಡಿಲ್ಲ ಎಂದರು. 

ಆನ್‍ಲೈನ್ ಮೂಲಕ ನೋಂದಣಿಯಾಗಿರುವ ಹೋಂ ಸ್ಟೇಗಳಿಗೆ ಸಂಬಂಧಿಸಿದಂತೆ ದಾಖಲಾತಿ ಸಮರ್ಪಕವಾಗಿ ಇಲ್ಲದಿದ್ದರೆ  20 ದಿನದೊಳಗೆ ದಾಖಲಾತಿ ಸರಿಪಡಿಸಿಕೊಳ್ಳಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 397 ಹೋಂ ಸ್ಟೇಗಳು ಆನ್‍ಲೈನ್ ಮೂಲಕ ನೋಂದಣಿಯಾಗಿದೆ. ಇದರಲ್ಲಿ 136 ಉಪ ತಹಶೀಲ್ದಾರರು ಪರಿಶೀಲಿಸಿ ವರದಿ ನೀಡಿದ್ದಾರೆ. 15 ಹೋಂ ಸ್ಟೇಗಳ ದಾಖಲಾತಿ ಸರಿಯಾಗಿದ್ದು, 80 ಹೋಂ ಸ್ಟೇಗಳ ದಾಖಲಾತಿ ಅಪೂರ್ಣ ಎಂದು ವರದಿ ನೀಡಿದ್ದಾರೆ ಎಂದು ತಿಳಿಸಿದರು. ತಹಶೀಲ್ದಾರ್ ಮಹೇಶ್, ಗೋವಿಂದ ರಾಜು, ನಂದೀಶ್, ಇತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು