News Karnataka Kannada
Monday, April 22 2024
Cricket
ಕರ್ನಾಟಕ

ಹೃದ್ರೋಗಿಗಳಿಗೆ ಚಿಕಿತ್ಸೆ ನಿಲ್ಲಬಾರದು: ಡಾ. ಸಿ.ಎನ್.ಮಂಜುನಾಥ್

Photo Credit :

ಹೃದ್ರೋಗಿಗಳಿಗೆ ಚಿಕಿತ್ಸೆ ನಿಲ್ಲಬಾರದು: ಡಾ. ಸಿ.ಎನ್.ಮಂಜುನಾಥ್

ಮೈಸೂರು: ಕೋವಿಡ್-19ರ ಭಯದ ಹಿನ್ನೆಲೆಯಲ್ಲಿ ಹೃದಯಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆ ಪಡೆಯುವುದರಿಂದ ವಂಚಿತರಾಗಬಾರದು ಎಂದು ಖ್ಯಾತ ಹೃದಯತಜ್ಞ, ಬೆಂಗಳೂರಿನ ಶ್ರೀ ಜಯದೇವ, ಹೃದ್ರೋಗ ಸಂಸ್ಥೆಯ ನಿರ್ದೇಶಕ, ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಭಾರತ ಸರ್ಕಾರ, ಇವರು ಆಯೋಜಿಸಿದ್ದ ವೆಬಿನಾರಿನಲ್ಲಿ ಪ್ರಾತ್ಯಕ್ಷಿಕೆ ಸಹಿತ ಉಪನ್ಯಾಸ ನೀಡಿ ಮಾತನಾಡಿ, ಭಾರತದ ಆರೋಗ್ಯ ಸ್ಥಿತಿಗತಿಗಳ ಮೇಲೆ ಕೋವಿಡ್-19ರ ದೀರ್ಘಕಾಲೀನ ಪರಿಣಾಮ ಕುರಿತಂತೆ ನಡೆದ ಆನ್‍ಲೈನ್ ವಿಚಾರ ಸಂಕಿರಣದಲ್ಲಿ ಕೊರೋನ ವೈರಸನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಘಸಂಸ್ಥೆಗಳು ನೀಡುತ್ತಿರುವ ಶಮದಾನದ ಜೊತೆಗೆ ಸಾರ್ವಜನಿಕರೂ ಸ್ವಯಂ ಪ್ರೇರಿತರಾಗಿ ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿದರು.

 

ವೆಬಿನಾರಿನಲ್ಲಿ ಉಪನ್ಯಾಸ ನೀಡಿದ ಮತ್ತೋರ್ವ ವಿಷಯ ತಜ್ಞ, ಜೆ.ಎಸ್.ಎಸ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್.ಬಸವನ ಗೌಡಪ್ಪರವರು ಮಧುಮೇಹದಿಂದ ಬಳಲುತ್ತಿರುವವರ ಮೇಲೆ ಕೋವಿಡ್-19ರ ಪರಿಣಾಮ ಏನು? ಎಂಬುದನ್ನು ಸವಿವರವಾಗಿ ತಿಳಿಯಪಡಿಸಿದರು. ಸಮತೋಲಿತ ಆಹಾರ, ನಿಯಮ ಬದ್ಧ ವ್ಯಾಯಾಮ, ಸುಸ್ಥಿರ ಮನಸ್ಥಿತಿಯನ್ನು ಪಾಲಿಸಿದರೆ ಕೋವಿಡ್ ಮಾತ್ರವಲ್ಲ ಯಾವುದೇ ವೈರಾಣು ಸೋಂಕಿನಿಂದ ಅಬಾಧಿತವಾಗಿ ಇರಬಹುದು ಎಂದು ಅವರು ವಿಶ್ಲೇಷಿಸಿದರು.

 

ಮೈಸೂರಿನ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಉಪ ನಿರ್ದೆಶಕರಾದ ಡಾ.ಟಿ.ಸಿ ಪೂರ್ಣಿಮಾ ಅವರ ಸಂಯೋಜನೆಯಲ್ಲಿ ನಡೆದ ವೆಬಿನಾರ್ ಕಾರ್ಯಕ್ರಮದಲ್ಲಿ, ಡಾ. ಹನುಮಂತಚಾರ್ ಜೋಶಿ, ಪ್ರಾಂಶುಪಾಲರು, ಶಾರದಾ ವಿಲಾಸ್ ಕಾಲೇಜ್ ಆಫ್ ಫಾರ್ಮಸಿ, ಮೈಸೂರು ಮತ್ತು ಜಿ.ಎಸ್ ಗಣೇಶ್, ಗೌರವ ಕಾರ್ಯದರ್ಶಿ, ಆಪ್ನಾ ದೇಶ್ ಸಂವಾದಕರಾಗಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು