News Karnataka Kannada
Saturday, April 20 2024
Cricket
ಕರ್ನಾಟಕ

ಹುಲಿ ಉಗುರು ಮಾರಾಟಕ್ಕೆ ಯತ್ನ: ನಾಲ್ವರ ಬಂಧನ

Photo Credit :

ಹುಲಿ ಉಗುರು ಮಾರಾಟಕ್ಕೆ ಯತ್ನ: ನಾಲ್ವರ ಬಂಧನ

ಕೊಳ್ಳೇಗಾಲ: ಹುಲಿ ಉಗುರು ಹಾಗೂ ವನ್ಯಪ್ರಾಣಿಗಳ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ಕು ಮಂದಿಯನ್ನು  ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿತ ಆರೋಪಿಗಳಿಂದ ಹುಲಿಯ ನಾಲ್ಕು ಉಗುರು ಮತ್ತು ಮೂಳೆಗಳು, ಚಿರತೆಯ ಎರಡು ಉಗುರು, ಎರಡು ಜಿಂಕೆ ಚರ್ಮ, ಎರಡು ಕಾಡು ಕುರಿಯ ಚರ್ಮ, ಎರಡು ಹಾರುವ ಅಳಿಲಿನ ಚರ್ಮ, ಸೀಳುನಾಯಿಯ ಚರ್ಮ ಹಾಗೂ ಮೂಳೆಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತಂತೆ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಡಿ.ಎಫ್.ಓ ಏಡುಕೊಂಡಲುರವರು ಮಾಹಿತಿ ನೀಡಿದರು. ಹನೂರು ತಾಲೂಕಿನ ನೆಲ್ಲಿಕತ್ತರಿ ಗ್ರಾಮದ ಮಹದೇವ ಬಿನ್ ಪಂದ(28),  ಕುಮಾರ ಬಿನ್ ಶನಿವಾರಗೌಡ(20), ಗೊಂಬೆಗಲ್ಲು ಗ್ರಾಮದಮಹದೇವ ಬಿನ್ ಸಿದ್ದೇಗೌಡ(22) ರಂಗಸ್ವಾಮಿ ಬಿನ್ ಕಾನ ಸಿದ್ದೇಗೌಡ(23) ಬಂಧಿತ ಆರೋಪಿಗಳಾಗಿದ್ದು ಇವರೆಲ್ಲರೂ ಸೋಲಿಗ ಜನಾಂಗಕ್ಕೆ ಸೇರಿವರಾಗಿದ್ದಾರೆ. ಈ ನಾಲ್ವರು ವನ್ಯಜೀವಿಗಳ ಮೂಳೆ, ಉಗುರು, ಚರ್ಮಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದು ಗಣೇಶ ಹಬ್ಬದ ಹಿನ್ನೆಲೆ ಹಣಕ್ಕಾಗಿ ಅವುಗಳನ್ನು ಮಾರಾಟ ಮಾಡಲು ಗುಂಡಾಲ್ ಜಲಾಶಯ ಸುತ್ತಮುತ್ತಲ ಅರಣ್ಯ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಾ ಖರೀದಿದಾರರನ್ನು ಹುಡುಕಲು  ಯತ್ನಿಸುತ್ತಿದ್ದರು.

ಇವರು ಹುಲಿ ಉಗುರು ಹಾಗೂ ಚರ್ಮವನ್ನು ಮಾರಾಟ ಮಾಡುತ್ತಿದ್ದಾರೆಂಬ ಸುಳಿವು ಸಿಕ್ಕ ಮಾಹಿತಿ ಮೇರೆಗೆ ಅದರ ಜಾಡು ಹಿಡಿದು ಅರಣ್ಯ ಇಲಾಖೆಯ ವನ್ಯ ಅಪರಾಧ ತಡೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ ಸಂಗ್ರಹಿಸಿಟ್ಟಿದ್ದ ವನ್ಯ ಪ್ರಾಣಿಗಳ ಉಗುರು, ಮೂಳೆ, ಚರ್ಮಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅಲ್ಲದೆ ಪಿ.ಜಿ.ಪಾಳ್ಯ ವನ್ಯಜೀವಿ ವಲಯ ಅರಣ್ಯಮೊಕದ್ದಮೆ ದಾಖಲಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು