News Karnataka Kannada
Thursday, April 25 2024
ಕರ್ನಾಟಕ

ಹುಲಿಗಳ ಆವಾಸ ತಾಣ ಬಂಡೀಪುರ

Photo Credit :

ಹುಲಿಗಳ ಆವಾಸ ತಾಣ ಬಂಡೀಪುರ

ಚಾಮರಾಜನಗರ: ಇವತ್ತು ವಿಶ್ವ ಹುಲಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಹುಲಿಗಳ ಬಗ್ಗೆ ಮಾತನಾಡುವಾಗಲೆಲ್ಲ ನಮಗೆ ಮೊದಲಿಗೆ ನೆನಪಿಗೆ ಬರುವುದು ಬಂಡೀಪುರ. ಏಕೆಂದರೆ ಬಂಡೀಪುರ ಹುಲಿಗಳ ಆವಾಸ ತಾಣವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶವಾಗಿದ್ದು, ಹುಲಿಗಳನ್ನು ಸಂರಕ್ಷಿಸುವ ಸಲುವಾಗಿ ಹಲವು ಕ್ರಮಗಳನ್ನು ಇಲ್ಲಿ ಕೈಗೊಳ್ಳಲಾಗಿದೆ. ಇಲ್ಲಿ ಹುಲಿಗಳ ಸಂತತಿ ಹೆಚ್ಚುತ್ತಾ ಸಾಗುತ್ತಿರುವುದು ಖುಷಿಯ ವಿಚಾರವಾಗಿದೆ. ಈ ಹುಲಿಗಳನ್ನು ನೋಡಲೆಂದೇ ದೇಶ ವಿದೇಶಗಳಿಂದ ಪ್ರವಾಸಿಗರು ಸಫಾರಿಗೆ ಬರುತ್ತಾರೆ. ಈ ವೇಳೆ ಅರಣ್ಯದಲ್ಲಿ ಅಡ್ಡಾಡುವ ಹುಲಿಗಳನ್ನು ನೋಡಿ ಪ್ರಾಣಿಪ್ರಿಯರು ಸಂಭ್ರಮಿಸುತ್ತಾರೆ.

ಇನ್ನು ಬಂಡೀಪುರದಲ್ಲಿ ಸುಮಾರು ನೂರೈವತ್ತಾರಕ್ಕೂ ಹೆಚ್ಚು ಹುಲಿಗಳಿವೆ ಎನ್ನಲಾಗುತ್ತಿದ್ದು, ಆದರೆ ಮೊದಲು ಇಲ್ಲಿ ಅಷ್ಟು ಹುಲಿಗಳು ಇರಲಿಲ್ಲ. ಕೇವಲ ಎಂಟು ಹುಲಿಗಳು ಮಾತ್ರವಿದ್ದವು. ಆದರೆ  1974ರಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಣಾ ಪ್ರದೇಶವಾಗಿ ಘೋಷಣೆ ಮಾಡಿದ ಬಳಿಕ ಇಲ್ಲಿ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗಿರುವುದನ್ನು ಕಾಣಬಹುದಾಗಿದೆ.

ಬಂಡೀಪುರ ಉದ್ಯಾನವು 874 ಚದರ ಕಿಲೋಮೀಟರ್ (337 ಚದರಮೈಲಿ) ಪ್ರದೇಶವನ್ನು ಹೊಂದಿದೆ. ಇನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನ (643 ಕಿಮಿ.2 (248 ಚದರಮೈಲಿ), ಮುದುಮಲೈ ರಾಷ್ಟ್ರೀಯ ಉದ್ಯಾನವನ (320 ಕಿಮಿ.2 (120 ಚದರಮೈಲಿ) ಮತ್ತು ವಯನಾಡ್ವನ್ಯ ಜೀವಿ ಅಭಯಾರಣ್ಯ (344 ಕಿಮಿ.2 (133 ಚದರಮೈಲಿ) ಜೊತೆಗೆ ನೀಲಗಿರಿ ಜೀವಗೋಳ ಮೀಸಲು ಅರಣ್ಯ ಒಟ್ಟು 2,183 ಕಿಮಿ.2 (843 ಚದರಮೈಲಿ) ಹೊಂದಿವೆ. ಇವುಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ಅತಿ ದೊಡ್ಡ ಸಂರಕ್ಷಿತ ಪ್ರದೇಶ ಬಂಡೀಪುರವಾಗಿದೆ. ಇದು ಹುಲಿ ಮಾತ್ರವಲ್ಲದೆ ದಕ್ಷಿಣ ಏಶ್ಯಾದಲ್ಲಿಯೇ ಕಾಡಾನೆಗಳ ಆವಾಸ ತಾಣವೂ ಆಗಿದೆ.

ಇನ್ನು ಈ ಕುರಿತಂತೆ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಹುಲಿ ಯೋಜನಾ ನಿರ್ದೇಶಕರಾದ ಟಿ.ಬಾಲಚಂದ್ರ ಮಾತನಾಡಿ ಬಂಡೀಪುರದಲ್ಲಿ  ಬೆರಳೆಣಿಕೆಯಷ್ಟು ಹುಲಿಗಳು ಮಾತ್ರ ವಾಸವಿತ್ತು ಟೈಗರ್ ಪ್ರಾಜೆಕ್ಟ್ ಆದ ನಂತರ ಅರಣ್ಯದಲ್ಲಿ ಅರಣ್ಯದಲ್ಲಿ  ಕಟ್ಟೆಚ್ಚರ ಹಾಗೂ ಆಂಟಿಪೋಚಿಂಗ್ ಕ್ಯಾಂಪ್ ಹೆಚ್ಚಿಸಲಾಯಿತು. ಅಲ್ಲದೆ ಹುಲಿ ಸಂತತಿ ಉಳಿವಿಗಾಗಿ ಸಾಕಷ್ಟು ಶ್ರಮ ವಹಿಸಲಾಯಿತು. ಹಾಗಾಗಿ  ವ್ಯಾಘ್ರ ಸಂತತಿ ಹೆಚ್ಚಾಗಿದ್ದು ಇದುವರೆಗೆ 130 ಹುಲಿಗಳ ದಾಖಲಾಗಿತ್ತು ಇದೀಗ ಸುಮಾರು 156 ಹುಲಿಗಳು  ವಾಸವಿರುವುದು ಕಂಡು ಬರುತ್ತಿದ್ದು ಹುಲಿ ಸಂತತಿ ಹೆಚ್ಚಾಗುತ್ತಿರುವುದು ಸಂತಸದ ಸಂಗತಿಯಾಗುವುದಾಗಿ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು