News Karnataka Kannada
Monday, April 15 2024
Cricket
ಕರ್ನಾಟಕ

ಹಳೇ ವಿನ್ಯಾಸದಲ್ಲಿಯೇ ಮಡಿಕೇರಿ ಕೋಟೆ ಅಭಿವೃದ್ಧಿ : ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಮತ

Photo Credit :

ಹಳೇ ವಿನ್ಯಾಸದಲ್ಲಿಯೇ ಮಡಿಕೇರಿ ಕೋಟೆ ಅಭಿವೃದ್ಧಿ : ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅಭಿಮತ

ಮಡಿಕೇರಿ: ಅರಸರ ಕಾಲದ ಮಡಿಕೇರಿ ಕೋಟೆಯನ್ನು ಹಳೆಯ ವಿನ್ಯಾಸದಲ್ಲಿಯೇ ಅಭಿವೃದ್ಧಿ ಪಡಿಸಿ ದೇಶ ವಿದೇಶದಿಂದ ಬರುವ ಪ್ರವಾಸಿಗರಿಗೆ ಕೊಡಗಿನ ಆಚಾರ ವಿಚಾರವನ್ನು ಪರಿಚಯಿಸುವ ಕೆಲಸವಾಗÀಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ತಿಳಿಸಿದ್ದಾರೆ.

ಕೋಟೆ ಆವರಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಚೀನ ಕಾಲದ ರಾಜರ ಕೋಟೆಯನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಹಲವಾರು ಬಾರಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ ಕೆಲವು ಗೊಂದಲಗಳಿಂದಾಗಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದೀಗ ನ್ಯಾಯಾಲಯದ ಅನುಮತಿಯ ಮೇರೆಗೆ 8 ಕೋಟಿ ರೂ. ವೆಚ್ಚದಲ್ಲಿ ಕೋಟೆಯ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ.

ಕೋಟೆಯನ್ನು ಹಳೇಯ ಮಾದರಿಯಲ್ಲಿಯೇ ಅಭಿವೃದ್ಧಿ ಪಡಿಸಿ ಮಡಿಕೇರಿ ರಾಜರ ಕಾಲದಿಂದ ಹಿಡಿದು ಮೂಲ ನಿವಾಸಿಗಳ ಆಚಾರ ವಿಚಾರ ಪದ್ಧತಿಯನ್ನು ಸೌಂಡ್ ಸಿಸ್ಟಮ್ ಮೂಲಕ ಮ್ಯೂಸಿಯಂ ಮಾದರಿಯಲ್ಲಿ ನಿರ್ಮಿಸಿ ಕೊಡಗಿನ ಸಂಸ್ಕøತಿಯನ್ನು ದೇಶಕ್ಕೆ ತಿಳಿಸುವ ಕೆಲಸವಾಗಬೇಕು ಎಂದರು.

ನಮ್ಮ ಚಿಂತನೆ ಇರುವುದು ಹಳೆಯ ರೀತಿಯಲ್ಲೇ ಕೋಟೆ ಉಳಿಯಬೇಕು. ಅದೇ ನಿಟ್ಟಿನಲ್ಲಿ ಕಟ್ಟಡದ ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳು ಆಗಬಾರದು. ಮೂಲ ವಿನ್ಯಾಸದಲ್ಲಿಯೇ ರಾಜರ ಕೋಟೆ ಕಟ್ಟಡ ಅಭಿವೃದ್ಧಿಯಾಗಬೇಕು ಎಂದು ತಿಳಿಸಿದರು.

ಈಗಾಗಲೇ ಕೋಟೆ ಒಳಭಾಗದಲ್ಲಿದ್ದ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲಸಗಳು ನಡೆದಿದೆ. ಕೋಟೆ ಆವರಣದಲ್ಲಿಯೇ ಹಳೆಯ ಕಾರಾಗೃಹ ಮತ್ತು ನ್ಯಾಯಾಲಯವಿದ್ದು, ಅದನ್ನು ಸಂರಕ್ಷಿಸಿ ಉತ್ತಮ ಪ್ರವಾಸಿತಾಣವನ್ನಾಗಿ ಅಭಿವೃದ್ಧಿಪಡಿಸುವ ಕಾರ್ಯವಾಗಬೇಕು ಎಂದು ಅಪ್ಪಚ್ಚುರಂಜನ್ ಹೇಳಿದರು.

ಸ್ಥಳದಲ್ಲಿದ್ದ ಅಧಿಕಾರಿಗಳು ಕೋಟೆ ಅಭಿವೃದ್ಧಿ ಕುರಿತು ಶಾಸಕರಿಗೆ ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು