News Karnataka Kannada
Saturday, April 13 2024
Cricket
ಕರ್ನಾಟಕ

ಸೌಜನ್ಯದಿಂದ ವರ್ತಿಸಲು ಖಾಸಗಿ ಫೈನಾನ್ಸ್ ಗೆ ಸೂಚನೆ

Photo Credit :

ಸೌಜನ್ಯದಿಂದ ವರ್ತಿಸಲು ಖಾಸಗಿ ಫೈನಾನ್ಸ್ ಗೆ ಸೂಚನೆ

ಗುಂಡ್ಲುಪೇಟೆ: ಕೊರೋನಾ ಮಹಾಮಾರಿಯಿಂದ ತತ್ತರಿಸಿರುವ ಜನರಿಗೆ ಖಾಸಗಿ ಫೈನಾನ್ಸ್ ಸಂಸ್ಥೆಗಳು  ಆಗಿಂದ್ದಾಗೆ ಕಿರುಕುಳ ನೀಡುತ್ತಿರುವುದು ತಾಲೂಕಿನಲ್ಲಿ ಮರುಕಳಿಸುತ್ತಿದ್ದು, ಇದನ್ನು ಗಮನಿಸಿರುವ ತಹಸೀಲ್ದಾರು ಎಂ.ನಂಜುಂಡಯ್ಯ  ಅವರು ಖಾಸಗಿ ಫೈನಾನ್ಸ್ ಕಂಪೆನಿಗಳಿಗೆ ಪತ್ರ ಬರೆದು ಸಾರ್ವಜನಿಕರಿಂದ ಬಲವಂತವಾಗಿ ಹಣ ವಸೂಲಿ ಮಾಡಲು ಮುಂದಾಗದೆ ಸೌಜನ್ಯದಿಂದ ವರ್ತಿಸಲು ಸೂಚನೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ಗುಂಡ್ಲುಪೇಟೆ ಪಟ್ಟಣದ ಖಾಸಗಿ ಪೈನಾನ್ಸ್ ಸಂಸ್ಥೆಯ ಉದ್ಯೋಗಿಗಳು ಬೇಗೂರು ಗ್ರಾಮದಲ್ಲಿ ಸಾಲದ ಕಂತು ಕಟ್ಟಲು ಕಾಲಾವಕಾಶ ಕೇಳಿದ ಮಹಿಳೆಯರನ್ನು ನಿಂದಿಸಿ ಮಾನಸಿಕ ಹಿಂಸೆ ನೀಡಿದ್ದರು. ಈ ವೇಳೆ ಮಹಿಳೆಯೊಬ್ಬರು ತಮ್ಮ ಚಿನ್ನಾಭರಣ ಗಿರವಿಗಿಟ್ಟು ಹಣಕೊಟ್ಟಿದ್ದರೂ ಪೂರ್ತಿ ಹಣ ಕೊಡುವಂತೆ ಒತ್ತಾಯಿಸಿದ್ದರು. ಇದರಿಂದ ಬೇಸತ್ತ ಮಹಿಳೆಯರು ಫೈನಾನ್ಸ್ ಸಿಬ್ಬಂದಿ ತಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಈ ಬಗ್ಗೆ ಬೇಗೂರು ಪೊಲೀಸ್ ಠಾಣೆಗೆ ಹಾಗೂ ತಹಸೀಲ್ದಾರ್ ಕಚೇರಿಗೂ ಖಾಸಗಿ ಫೈನಾನ್ಸ್ ನವರು ನೀಡುತ್ತಿರುವ ಕಿರುಕುಳದ ಬಗ್ಗೆ ತಿಳಿಸಿದ್ದರಲ್ಲದೆ, ಕರೊನಾ ಹಿನ್ನೆಲೆಯಲ್ಲಿ ಯಾವುದೇ ಕೂಲಿಕೆಲಸವೂ ಇಲ್ಲದೆ  ಜೀವನೋಪಾಯಕ್ಕೆ ತೊಂದರೆಯಾಗಿದ್ದು ಸ್ವಲ್ಪ ಕಾಲಾವಕಾಶ ಕೊಡಿಸುವಂತೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ. ನಂಜುಂಡಯ್ಯ ಖಾಸಗಿ ಫೈನಾನ್ಸ್ ಸಂಸ್ಥೆಯ ಸಿಬ್ಬಂದಿಗಳು ಬಲವಂತ ಸಾಲವಸೂಲಾತಿಗೆ ಮುಂದಾಗದೆ ಸೌಜನ್ಯದಿಂದ ವರ್ತಿಸಲು ಸೂಚನೆ ನೀಡುವಂತೆ ಮುಖ್ಯಸ್ಥರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು