News Karnataka Kannada
Sunday, April 21 2024
Cricket
ಕರ್ನಾಟಕ

ಸುಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇಗುಲದ ಕಾಣಿಕೆ ಹಣ ಎಣಿಕೆ

Photo Credit :

ಸುಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇಗುಲದ ಕಾಣಿಕೆ ಹಣ ಎಣಿಕೆ

ಚಾಮರಾಜನಗರ: ಕಳೆದ ಒಂದೂ ಮುಕ್ಕಾಲು ವರ್ಷದಿಂದ ಬೀಗ ಹಾಕಿದ್ದ ಜಿಲ್ಲೆಯ ಹನೂರು ತಾಲ್ಲೂಕಿನ ಸೂಳ್ವಾಡಿ ಕಿಚ್ಚಗುತ್ತಿ ಮಾರಮ್ಮದೇವಾಲಯದ ಹುಂಡಿಯಲ್ಲಿ ಸಂಗ್ರಹವಾದ ಕಾಣಿಕೆ ಹಣವನ್ನು ಏಣಿಕೆ ಮಾಡಲಾಗಿದ್ದು, 2,60, 577 ರೂ. ಸಂಗ್ರಹವಾಗಿದೆ.

ಸೂಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಾಲಯದ ಮೇಲೆ ಹಿಡಿತ ಸಾಧಿಸುವ ಸಲುವಾಗಿ ವಿಷ ಪ್ರಸಾದ ವಿತರಣೆ ನಡೆದು ಮೂವರು ಪ್ರಾಣಕಳೆದುಕೊಂಡು ನೂರಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಈ ಘಟನೆ ಇಡೀ ರಾಜ್ಯದ ಗಮನಸೆಳೆದಿತ್ತಲ್ಲದೆ, ಆರೋಪಿಗಳು ಇನ್ನು ಕೂಡ ಜೈಲಿನಲ್ಲಿದ್ದಾರೆ.

ವಿಷ ಪ್ರಸಾದ ವಿತರಣೆ ಘಟನೆ ನಡೆದ ಬಳಿಕ ದೇವಾಲಯಕ್ಕೆ ಬೀಗ ಹಾಕಲಾಗಿತ್ತು. ಆದರೆ ದೇವಾಲಯಕ್ಕೆ ಭಕ್ತರು ಬಂದು ಕೈಮುಗಿದು, ಹುಂಡಿಗೆ ಕಾಣಿಕೆ ಹಾಕಿ ಹೋಗುತ್ತಿದ್ದರು. ಇದೀಗ ದೇವಾಲಯದ ಹುಂಡಿಯ ಕಾಣಿಕೆ ಹಣವನ್ನು ಎಣಿಕೆ ಮಾಡಲಾಗಿದ್ದು, ಎರಡು ಲಕ್ಷದ ಅರವತ್ತು ಸಾವಿರದ ಐನೂರ ಇಪ್ಪತ್ತೇಳು ರೂಪಾಯಿ ಅಲ್ಲದೆ, ಒಂದು ಗ್ರಾಂ ಇನ್ನೂರು ಮಿಲಿ ಗ್ರಾಂ ಚಿನ್ನ ಹಾಗೂ ಮೂವತ್ತೆರಡು ಗ್ರಾಂ ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿದೆ.

ಅಕ್ಟೋಬರ್ 20 ರಂದು ಸೂಳ್ವಾಡಿ ಕಿಚ್ಚಗುತ್ತಿ ಮಾರಮ್ಮ ದೇವಾಲಯ ಭಕ್ತರ ದರ್ಶನಕ್ಕೆ ಮುಕ್ತವಾಗುವ ಹಿನ್ನಲೆಯಲ್ಲಿ ಪೆÇಲೀಸ್ ಬಂದೂಬಸ್ತ್ ನೊಂದಿಗೆ ಹುಂಡಿ ಏಣಿಕೆ ಕಾರ್ಯ ನಡೆಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು