News Karnataka Kannada
Sunday, April 21 2024
Cricket
ಕರ್ನಾಟಕ

ಸುಪಾರಿ ನೀಡಿ ಮಹಿಳೆಯ ಹತ್ಯೆಗೈದಿದ್ದ ಹಂತಕರು ಅರೆಸ್ಟ್

Photo Credit :

ಸುಪಾರಿ ನೀಡಿ ಮಹಿಳೆಯ ಹತ್ಯೆಗೈದಿದ್ದ ಹಂತಕರು ಅರೆಸ್ಟ್

ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಆಕೆಯ ಗಂಡನ ಅಣ್ಣಂದಿಯರೇ ಸುಪಾರಿ ನೀಡಿ ಕೊಲೆಗೈದಿರುವ ಘಟನೆ ನಡೆದಿದ್ದು, ಏಳು ಮಂದಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ನಿವಾಸಿ ದಿವಂಗತ ವಿರೂಪಾಕ್ಷ ಎಂಬುವರ ಪತ್ನಿ  ಗಂಗಮ್ಮ(42) ಎಂಬಾಕೆಯೇ ಹತ್ಯೆಗೀಡಾಗಿದವಳು. ಗಂಗಮ್ಮಳನ್ನು ಕಳೆದ 25 ವರ್ಷಗಳ ಹಿಂದೆ ಬೆಟ್ಟದಪುರ ಗ್ರಾಮದ ಬಚ್ಚೇಗೌಡರ ಕೊನೆಯ ಮಗ ವಿರೂಪಾಕ್ಷ ಎಂಬುವವರೊಂದಿಗೆ ವಿವಾಹ ಮಾಡಲಾಗಿತ್ತು. ಆದರೆ ಏಳು ವರ್ಷಗಳ ಹಿಂದೆ ವಿರೂಪಾಕ್ಷ ಸಾವನ್ನಪ್ಪಿದ್ದು, ಇವರಿಗೆ ಮಕ್ಕಳಿಲ್ಲದ ಕಾರಣ ಬೆಟ್ಟದಪುರ ಒಬ್ಬರೆ ವಾಸವಿದ್ದು ತಮ್ಮ ಭಾಗಕ್ಕೆ ಬಂದ ಜಮೀನು, ನಿವೇಶನಗಳನ್ನು ನೋಡಿಕೊಂಡು ಜೀವನ ಸಾಗಿಸುತ್ತಿದ್ದರು.

ಈ ನಡುವೆ ಗಂಗಮ್ಮ ಅವರು ಒಂದು ನಿವೇಶನವನ್ನು ಶಂಕರ ಎಂಬುವವರಿಗೆ ಮಾರಾಟ ಮಾಡಿದ್ದರು. ಇದರಿಂದ ಕೋಪಗೊಂಡ ಗಂಗಮ್ಮನ ಗಂಡನ ಅಣ್ಣಂದಿರು ನಿವೇಶನ ಖರೀದಿಸಿದ ಶಂಕರ ಎಂಬುವರ ಪತ್ನಿ ಜ್ಯೋತಿ  ಎಂಬುವವರೊಂದಿಗೆ ಜಗಳ ತೆಗೆದಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಗಂಗಮ್ಮ ಅವರು ಇದು ನನ್ನ ನಿರ್ಧಾರಾಗಿದ್ದು ಇದಕ್ಕೆ ತಲೆಹಾಕದಂತೆ ಎಚ್ಚರಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಗಂಗಮ್ಮನ ಬಾವಂದಿರು ಮತ್ತು ಮಕ್ಕಳಾದ ಕಿರಣ, ಶಿವರಾಜು, ರವಿಶಂಕರ್, ರಾಜೇಶ್, ಮಂಜು ಎಂಬುವರು ಗಂಗಮ್ಮನನ್ನು ಹತ್ಯೆಗೈಯ್ಯುವ ತೀರ್ಮಾನ ಮಾಡಿದ್ದರು.

ಇದೆಲ್ಲದರ ನಡುವೆ ಆ.3ರಂದು ಅಳಿಯ ಕುಮಾರ ಎಂಬಾತನ ಮನೆಗೆ ತೆರಳಿದ್ದು ಅಲ್ಲಿಂದ ವಾಪಾಸ್ ಮನೆಗೆ ತೆರಳಿದ ಆಕೆ ನಾಪತ್ತೆಯಾಗಿದ್ದಳು. ಎಲ್ಲಿಗೆ ಹೋದಳು? ಏನಾದಳು? ಎಂಬುದೇ ಗೊತ್ತಾಗಿರಲಿಲ್ಲ. ಹೀಗಾಗಿ ಗಂಗಮ್ಮಳ ಅಣ್ಣ ಗೋವಿಂದೇಗೌಡ ಎಂಬುವರು ಆ.13ರಂದು ಬೆಟ್ಟದಪುರ ಪೊಲೀಸ್ ಠಾಣೆಗೆ ತೆರಳಿ ಕಿರಣ, ರಾಜೇಶ್, ಮಂಜು ಎಂಬುವರ ಮೇಲೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದರು.

ಈ ಸಂಬಂಧ ತನಿಖೆ ಕೈಗೊಂಡ ಬೆಟ್ಟದಪುರ ಪೊಲೀಸರಿಗೆ ಗಂಗಮ್ಮಳನ್ನು ಸುಪಾರಿ ನೀಡಿ ಕೊಲೆ ಮಾಡಿದ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಕೊಲೆಯ ರಹಸ್ಯವನ್ನು ಬಾಯಿಬಿಟ್ಟಿದ್ದಾರೆ. ಗಂಗಮ್ಮ ತಮಗೆ ಆಸ್ತಿನೀಡದೆ ತಾನೆ ಮಾರಾಟ ಮಾಡುತ್ತಿರುವುದರಿಂದ ಆಕ್ರೋಶಗೊಂಡು ಕಿರಣ, ಶಿವರಾಜು, ರವಿಶಂಕರ್, ರಾಜೇಶ್, ಮಂಜು, ಎಂಬುವವರು ಹಾಸನದ ಅರಕಲಗೂಡಿನ ವೆಂಕಟೇಶ್ ಎಂಬಾತನ ಮೂಲಕ ಬೆಂಗಳೂರಿನ ಉಪೇಂದ್ರ ಎಂಬುವನಿಗೆ 15 ದಿನಗಳ ಹಿಂದೆ ಸುಫಾರಿ ನೀಡಿ ಮುಂಗಡವಾಗಿ 2 ಲಕ್ಷ ರೂ.ನ್ನು ನೀಡಿದ್ದರು ಅದರಂತೆ ಆ.3 ರಂದು ಗಂಗಮ್ಮಳನ್ನು ಮನೆಯಲ್ಲಿಯೆ  ಕೊಲೆಮಾಡಿದ್ದು ಶವವನ್ನು ಕೆ.ಆರ್.ನಗರ ತಾಲೂಕಿನ ದೊಡ್ಡಹನಸೋಗೆ ಬಳಿ ನದಿಗೆ ಎಸೆದಿದ್ದಾರೆ. ನಂತರ ಶಿವರಾಜು ಎಂಬಾತ ಒಡವೆ ಅಡವಿಟ್ಟು ಸುಫಾರಿಯ ಒಪ್ಪಂದಂತೆ ಉಳಿದ ಹಣವನ್ನು ನೀಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.

ಗಂಗಮ್ಮಳನ್ನು ಮನೆಯಲ್ಲಿಯೆ ಸಾಯಿಸಿ ಈಕೆಯ ಹೆಣವನ್ನು ಹನಗೋಡು ಬಳಿ ಕಾವೇರಿ ಹೊಳೆಗೆ ಎಸದಿರುವುದಾಗಿ ಆರೋಪಿಗಳು ಹೇಳಿರುವ ಹಿನ್ನಲೆಯಲಿ ಶವದ ಹುಡುಕಾಟ ನಡೆಸಲಾಗುತ್ತಿದೆ. ಈ ಸಂಬಂಧ ಕೃತ್ಯಕ್ಕೆ ಬಳಸಲಾದ ಶಿಫ್ಟ್ ಡಿಜೈರ್ ಮತ್ತು ಗೂಡ್ಸ್ ವಾಹನಗಳನ್ನು ವಶಪಡಿಸಿಕೊಂಡಿದ್ದು 7 ಮಂದಿಯನ್ನು ಬಂಧಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಬೆಟ್ಟದಪುರ ಎಸ್.ಐ ಪುಟ್ಟರಾಜು, ಬೈಲುಕುಪ್ಪೆ ಎಸ್.ಐ ಜಮೀರ್‍ಅಹಮ್ಮದ್, ಎಎಸ್‍ಐ ಸೋಮು, ಸಿಬ್ಬಂದಿ ಎಚ್.ದಿಲೀಪ್, ಮಂಜು, ಅಸ್ಲಾಂ, ರವೀಶ್, ಸತೀಶ್, ಭಾಸ್ಕರ್, ಗಣೇಶ್, ಸ್ವಾಮಿ, ಶೇಖರ್ ಮತ್ತಿತರು ಭಾಗವಹಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಹುಣಸೂರು ಡಿವೈಎಸ್‍ಪಿ ಸುಂದರ್‍ರಾಜು ಹಾಜರಿದ್ದರು. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು