News Karnataka Kannada
Wednesday, April 24 2024
Cricket
ಕರ್ನಾಟಕ

ಸಿಪಿಎಂ ಕಾರ್ಯಕರ್ತನ ಕೊಲೆ ಪ್ರಕರಣ: ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ

Photo Credit :

ಸಿಪಿಎಂ ಕಾರ್ಯಕರ್ತನ ಕೊಲೆ ಪ್ರಕರಣ: ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ

ಕಾಸರಗೋಡು: ಸಿಪಿಎಂ ಕಾರ್ಯಕರ್ತನಾಗಿದ್ದ ಕುಂಬಳೆ ಶಾಂತಿಪಳ್ಳದ  ಪಿ. ಮುರಳಿ(35) ಕೊಲೆ ಪ್ರಕರಣದ ಆರೋಪಿ ಬಿಜೆಪಿ ಕಾರ್ಯಕರ್ತ ಅನಂತಪುರದ  ಶರತ್ ರಾಜ್ ಗೆ ಜಿಲ್ಲಾ ಹೆಚ್ಚುವರಿ ಸೆಷನ್ಸ್ (2) ನ್ಯಾಯಾಲಯ ಕಠಿಣ  ಜೀವಾವಧಿ ಸಜೆ ಹಾಗೂ ಎರಡು ಲಕ್ಷ ರೂ. ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ದಂಡ ವಿಧಿಸದಿದ್ದಲ್ಲಿ ಒಂದು ವರ್ಷ ಅಧಿಕ ಶಿಕ್ಷೆ ಅನುಭವಿಸಬೇಕು. ದಂಡದ  ಮೊತ್ತವನ್ನು ಕೊಲೆಗೀಡಾದ ಮುರಳಿಯ ಕುಟುಂಬಕ್ಕೆ ನೀಡಲು ನ್ಯಾಯಾಲಯ ತೀರ್ಫು ನೀಡಿದೆ. 

ಪ್ರಕರಣದಲ್ಲಿ ಒಟ್ಟು  ಏಳು  ಆರೋಪಿಗಳಿದ್ದು, 6 ಮಂದಿಯನ್ನು ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಖುಲಾಸೆ ಗೊಳಿಸಿದೆ.  ದಿನೇಶ್, ವರದರಾಜ್, ಮಿಥುನ್ ಕುಮಾರ್, ನಿತಿನ್ ರಾಜ್, ಮಹೇಶ್, ಅಜಿತ್ ಕುಮಾರ್   ನನ್ನು ಖುಲಾಸೆಗೊಳಿಸಿದೆ.

2017ರ  ಅಕ್ಟೋಬರ್  17ರಂದು  ಸಂಜೆ 5 ಗಂಟೆಗೆ ಕೃತ್ಯ ನಡೆದಿತ್ತು. ಸೀತಾಂಗೋಳಿ  ಸಮೀಪ  ಮುರಳಿ ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾವನ್ನು ತಡೆದ  ತಂಡವು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದಿತ್ತು.

ಪ್ರಾಸಿಕ್ಯೂಷನ್ ಪರ ಹೆಚ್ಚುವರಿ  ಪಬ್ಲಿಕ್ ಪ್ರಾಸಿಕ್ಯೂಟರ್  ಅಬ್ದುಲ್  ಸತ್ತಾರ್ ಹಾಜರಾಗಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು