News Karnataka Kannada
Monday, April 15 2024
Cricket
ಕರ್ನಾಟಕ

ಸಿಎಂ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ: ಸಿ.ಪಿ.ಯೋಗೇಶ್ವರ್

Photo Credit :

ಸಿಎಂ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ: ಸಿ.ಪಿ.ಯೋಗೇಶ್ವರ್

ಚನ್ನಪಟ್ಟಣ: ಬಿಜೆಪಿ ಪಕ್ಷದಲ್ಲಿ ಯಾವುದೇ ರೀತಿಯ ಗುಂಪುಗಾರಿಕೆಯಿಲ್ಲ, ನನ್ನನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಮುಖ್ಯಮಂತ್ರಿಗಳೇ ಮಾಡಿದ್ದು, ಮುಂದೆ ಸಚಿವ ಸ್ಥಾನವನ್ನು ನೀಡುವ ಭರವಸೆ ನೀಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.

ಚನ್ನಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ರಿಟೈರ್ಡ್ ಕುದುರೆಗಳು, ಜಿಲ್ಲೆಯಲ್ಲಿ ಬಿಜೆಪಿ ಬಲಪಡಿಸಲು ತಮಗೆ ಯಾವುದೇ ಅಡ್ಡಿ ಆತಂಕವಿಲ್ಲ ಎಂದ ಅವರು, ರಾಜಕೀಯ ಆಶ್ರಯಕ್ಕಾಗಿ ಡಿ.ಕೆ.ಶಿವಕುಮಾರ್‍ಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡಲಾಗಿದೆ. ಈ ಹಿಂದೆಯೂ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರು. ಆಗ ಯಾವ ರೀತಿ ಪಕ್ಷವನ್ನು ಬಲಪಡಿಸಿದ್ದರು ಎಂಬುದು ಈಗಾಗಲೇ ತಿಳಿದಿದೆ, ಇನ್ನು ಕುಮಾರಸ್ವಾಮಿ ಹತಾಶೆಯ ಮಾತುಗಳನ್ನಾಡುತ್ತಿದ್ದಾರೆ ಅವರ ಪಕ್ಷ ಈಗಾಗಲೇ ನೆಲಕಚ್ಚಿದೆ ಎಂದರು.

 

ಮುಂದಿನ ದಿನಗಳಲ್ಲಿ ಸಾಮಥ್ರ್ಯ, ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸಿ ಬಿಜೆಪಿಯನ್ನು ಬಲಪಡಿಸುತ್ತೇನೆ. ಸಮ್ಮಿಶ್ರ ಸರ್ಕಾರ ಪತನಕ್ಕೂ ತಮಗೂ ಸಂಬಂಧವಿಲ್ಲ. ಅವರವರ ಆಂತರಿಕ ಭಿನ್ನಾಭಿಪ್ರಾಯಗಳಿಂದ ಸರ್ಕಾರ ಪತನವಾಗಿದೆ, ಕುಮಾರಸ್ವಾಮಿಯವರೇ ಅದನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‍ನವರು ಯಾವ ರೀತಿ ಅಸಹಕಾರ ತೋರಿದರು ಎಂಬುದನ್ನು ಸ್ವತಃ ಎಚ್‍ಡಿಕೆ ತಮ್ಮ ಕಾರ್ಯಕರ್ತರಿಗೆ ಹೇಳಿಕೊಂಡಿದ್ದಾರೆ ಹಾಗಾಗಿ ತಮ್ಮ ಪಾತ್ರವಿದೆ ಎಂಬುದು ಸುಳ್ಳು ಎಂದು ಸ್ಪಷ್ಟಪಡಿಸಿದರು.

 

ಸಾರ್ವತ್ರಿಕ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ವೈಯಕ್ತಿಕವಾಗಿ ಬೇಸರವಾಗಿತ್ತು, ಜನತೆ ಕೈಹಿಡಿಯಲಿಲ್ಲ ಎನ್ನುವ ಬೇಸರದಿಂದ ಸಾರ್ವಜನಿಕ ಬದುಕಿನಿಂದ ದೂರ ಉಳಿದುಕೊಂಡಿದ್ದೆ, ಎರಡು ವರ್ಷಗಳ ವನವಾಸವನ್ನು ಮುಗಿಸಿ ಇದೀಗ ಅಧಿಕಾರ ಪಡೆದು ಸಾರ್ವಜನಿಕ ಜೀವನಕ್ಕೆ ಮರಳಿ ಬಂದಿದ್ದೇನೆ, ಜನ ಕೈಬಿಟ್ಟ ಸಂದರ್ಭದಲ್ಲಿ ಪಕ್ಷ ನನ್ನ ಸಾರ್ವತ್ರಿಕ ಬದುಕು ಕೊನೆಯಾಗಬಾರದೆಂದು ಅವಕಾಶ ನೀಡಿದ್ದು ಇದನ್ನು ಬಳಸಿಕೊಂಡು ಮತ್ತೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.

 

ತಾಲೂಕಿನಲ್ಲಿ ಈಗ ಕುಮಾರಸ್ವಾಮಿ ಅವರೂ ಶಾಸಕರು, ನಾನೂ ಈಗ ಶಾಸಕ. ಕಳೆದ ಎರಡು ವರ್ಷಗಳಿಂದ ತಾಲೂಕು ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ, ಸದ್ಯ ಬಿಜೆಪಿ ಸರ್ಕಾರದಿಂದ ಯಾವ ಅನುದಾನಕ್ಕೆ ತಡೆಯಾಗಿದೆ ಎಂಬುದು ತಿಳಿದಿಲ್ಲ. ಯಾವ ಸಮಯದಲ್ಲಿ ಎಷ್ಟು ಅನುದಾನ ತಾಲೂಕಿಗೆ ಬಂದಿದೆ ಎಂದು ಗೊತ್ತಿಲ್ಲ. ಈ ಬಗ್ಗೆ ತಿಳಿದುಕೊಂಡು ತಾಲೂಕಿನ ಅಭಿವೃದ್ಧಿಗೆ ಕೈಜೋಡಿಸುತ್ತೇನೆ ಎಂದು ಹೇಳಿದರು.

 

ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಎಚ್.ರಾಜಣ್ಣ, ವಕೀಲ ಕೆ.ಟಿ.ತಿಮ್ಮೇಗೌಡ, ತಾಲೂಕು ಬಿಜೆಪಿ ಅಧ್ಯಕ್ಷರಾದ ಕೆ.ಟಿ.ಜಯರಾಮು, ಶಿವು, ಮಾಜಿ ಅಧ್ಯಕ್ಷ ಎಂ.ಎನ್.ಆನಂದಸ್ವಾಮಿ ಇದ್ದರು.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು