News Karnataka Kannada
Wednesday, April 17 2024
Cricket
ಕರ್ನಾಟಕ

`ಸಾರ್ವಜನಿಕರ ಹಿತಕ್ಕಾಗಿ ಎಕೆ ಸುಬ್ಬಯ್ಯ ಭವಿಷ್ಯದ ಬದುಕಿನ ತ್ಯಾಗ’

Photo Credit :

`ಸಾರ್ವಜನಿಕರ ಹಿತಕ್ಕಾಗಿ ಎಕೆ ಸುಬ್ಬಯ್ಯ ಭವಿಷ್ಯದ ಬದುಕಿನ ತ್ಯಾಗ’

ಪೊನ್ನಂಪೇಟೆ: ರಾಜ್ಯದ ರಾಜಕಾರಣದಲ್ಲಿ ಅಮರರಾಗಿರುವ ಎ.ಕೆ. ಸುಬ್ಬಯ್ಯನವರು ತಮ್ಮ ರಾಜಕೀಯ ಭವಿಷ್ಯವನ್ನು ಬಲಿಕೊಟ್ಟು ಸಾರ್ವಜನಿಕ ಹಿತ ಕಾಪಾಡಲು ಶ್ರಮಿಸಿದ ಮಹಾನ್ ವ್ಯಕ್ತಿತ್ವದವರು. ಯಾರ ಹಂಗಿಗೂ ಒಳಗಾಗದೆ ಸ್ವತಂತ್ರ ಚಿಂತನೆಯೊಂದಿಗೆ ಸುದೀರ್ಘ ವರ್ಷಗಳ ಕಾಲ ಜನನಾಯಕರಾಗಿ ಬದುಕಿದ ಎ. ಕೆ. ಸುಬ್ಬಯ್ಯ ಅವರ ಮಾತಿನ ಮೌಲ್ಯ ಅವರ ನಿಧನದ ನಂತರ ಜನರಿಗೆ ಅರಿವಾಗುತ್ತಿದೆ ಎಂದು ಮಾಜಿ ಸ್ಪೀಕರ್ ಆಗಿರುವ ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದರು.

ಆಗಸ್ಟ್ 27 ರಂದು ನಡೆಯಲಿರುವ ಎ.ಕೆ. ಸುಬ್ಬಯ್ಯ ಅವರ ಪ್ರಥಮ ಪುಣ್ಯಸ್ಮರಣಾ ದಿನದ ಅಂಗವಾಗಿ ‘ಎ.ಕೆ. ಸುಬ್ಬಯ್ಯ ಅಭಿಮಾನಿ ಬಳಗ’ದ ವತಿಯಿಂದ ಮಂಗಳವಾರ ಸಂಜೆ ‘ಮರೆಯಲಾಗದ ಆದರ್ಶ ಎ.ಕೆ. ಸುಬ್ಬಯ್ಯ ಅವರು ಇಲ್ಲವಾದ ಒಂದು ವರ್ಷದ ಸಂದರ್ಭದಲ್ಲಿ ಶ್ರದ್ಧಾಂಜಲಿ’ ಎಂಬ ಹೆಸರಿನಲ್ಲಿ ವೆಬಿನಾರ್ ಮೂಲಕ ನಡೆದ ರಾಜ್ಯಮಟ್ಟದ ‘ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ತೆಗೆದುಕೊಳ್ಳದಿದ್ದ ರಿಸ್ಕ್ ಅನ್ನು  ಏಳುಬೀಳುಗಳ ನಡುವೆ ನಿಭಾಯಿಸುತ್ತಿದ್ದ ಸುಬ್ಬಯ್ಯ ಅವರು ಸದಾ ಸಮಾಜದ ಹಿತವನ್ನು ಬಯಸುತ್ತಿದ್ದರು. ಅವರಲ್ಲಿದ್ದ

ವೈಚಾರಿಕ ಸ್ಪಷ್ಟತೆ ಅವರನ್ನು ಮತ್ತಷ್ಟು ತೀಕ್ಷ್ಣವನ್ನಾಗಿಸಿತು. ಸ್ವಾರ್ಥರಹಿತ ರಾಜಕಾರಣದ ಪ್ರತೀಕವಾಗಿದ್ದ ಸುಬ್ಬಯ್ಯನವರು ಸತ್ಯವನ್ನು ಬಹಿರಂಗವಾಗಿ ಹೇಳಲು ಯಾರಿಗೂ

ಹೆದರುತ್ತಿರಲಿಲ್ಲ. ಈ ರೀತಿಯ ತೀರಾ ಅಪರೂಪದ ವ್ಯಕ್ತಿತ್ವ ಸುಬ್ಬಯ್ಯನವರ ನಂತರ ಯಾರಲ್ಲೂ ಕಾಣುತ್ತಿಲ್ಲ ಎಂದು ವಿಷಾದಿಸಿದರು.

ಇದೀಗ ದೇಶದಲ್ಲಿ ಜನಾಂದೋಲನ ನಿಂತುಹೋಗಿದೆ. ವಿದ್ಯಾರ್ಥಿ, ಕಾರ್ಮಿಕ, ರೈತ ಚಳುವಳಿಯನ್ನು

ಇತ್ತೀಚಿನ ಕೆಲ ಸಮಯಗಳಿಂದ ದೇಶದಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ.  ನೊಂದವರ ಮತ್ತು ದಮನಿತರ

ಧ್ವನಿಯಾಗಬೇಕಾಗಿದ್ದ ಮಾಧ್ಯಮಗಳು ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ಒಡೆತನದಲ್ಲಿ ಸಿಲುಕಿ ನರಳುತ್ತಿದ್ದು, ಜನಸಾಮಾನ್ಯರ ಜನಾಭಿಪ್ರಾಯ ಸ್ವತಂತ್ರವಾಗಿ ಹೊರಬರುತ್ತಿಲ್ಲ. ಒಂದು ರೀತಿಯ ಬೌದ್ಧಿಕ ದಾರಿದ್ರ್ಯ ಕಾಡುತ್ತಿದೆ. ಈ ಸಂದರ್ಭದಲ್ಲಿ ಎ.ಕೆ. ಸುಬ್ಬಯ್ಯ ಅವರ

ಅಗತ್ಯವಿತ್ತು ಎಂದು ಪ್ರತಿಪಾದಿಸಿದ ರಮೇಶ್ ಕುಮಾರ್ ಅವರು, ತಮಗೆ ಆದರ್ಶರಾಗಿದ್ದ ಸುಬ್ಬಯ್ಯನವರು ಮಾರ್ಗದರ್ಶಕರೂ ಆಗಿದ್ದರು.  1978 ರಲ್ಲಿ ಪ್ರಥಮ ಬಾರಿಗೆ ವಿಧಾನಸಭೆಯ ಮೂಲಕ ಶಾಸನಸಭೆಗೆ ಬಂದ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಮನೆ ಮಾತಾಗಿದ್ದ ಸುಬ್ಬಯ್ಯನವರ ಗಾಂಭೀರ್ಯದ ಮಾತುಗಳನ್ನು ಕೇಳಲೆಂದೇ ವಿಧಾನಪರಿಷತ್ತಿಗೆ ಹೋಗಿ ಕುಳಿತುಕೊಳ್ಳುತ್ತಿದ್ದೆ ಎಂದು ಅಂದಿನ ದಿನಗಳನ್ನು ರಮೇಶ್ ಕುಮಾರ್ ಅವರು ಮೆಲುಕು ಹಾಕಿದರು.

 

ಸುಬ್ಬಯ್ಯನವರ ಆದರ್ಶಗಳು ನೆನಪು ಮಾಡಿಕೊಳ್ಳುವುದೇ ಅವರಿಗೆ ನೀಡುವ ಬಹುದೊಡ್ಡ ಗೌರವವಾಗಿದೆ.

ಸುಬ್ಬಯ್ಯನವರು ಶಾರೀರಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಹಲವರಿಗೆ ಅವರು ಸದಾ

ಸ್ಫೂರ್ತಿಯಾಗಿರುತ್ತಾರೆ ಎಂದು ರಮೇಶ್ ಕುಮಾರ್ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು