News Karnataka Kannada
Thursday, April 18 2024
Cricket
ಕರ್ನಾಟಕ

ಸಮುದ್ರಕ್ಕೆ ಹಾರಿದ ಫೋಕ್ಸೋ ಪ್ರಕರಣ ಆರೋಪಿ

Photo Credit :

ಸಮುದ್ರಕ್ಕೆ ಹಾರಿದ ಫೋಕ್ಸೋ ಪ್ರಕರಣ ಆರೋಪಿ

ಕಾಸರಗೋಡು: ಪೋಕ್ಸೋ ಪ್ರಕರಣದ ಆರೋಪಿ  ಪೊಲೀಸರಿಂದ ತಪ್ಪಿಸಿ ಸಮುದ್ರಕ್ಕೆ  ಹಾರಿದ ಘಟನೆ  ಕಾಸರಗೋಡು ಬಂದರು ಬಳಿ ನಡೆದಿದೆ.

ಸೂರ್ಲು ಕಾಳ್ಯಾo ಗಾಡ್ ನ ಮಹೇಶ್(28) ಸಮುದ್ರಕ್ಕೆ ಹಾರಿದ ಆರೋಪಿ ಯಾಗಿದ್ದಾನೆ.

ಇಂದು ಬೆಳಗ್ಗೆ ಮಾಹಿತಿ ಕಲೆಹಾಕಲು  ಬಂದರು ಸಮೀಪಕ್ಕೆ ಕರೆ ತಂದ ಸಂದರ್ಭದಲ್ಲಿ ಪೊಲೀಸರಿಂದ ತಪ್ಪಿಸಿ ಸುಮಾರು 200 ಮೀಟರ್ ನಷ್ಟು ಓಡಿದ  ಈತ ಸಮುದ್ರಕ್ಕೆ ಹಾರಿದ್ದು,  ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.

ಆರೋಪಿಗಾಗಿ ಕರಾವಳಿ ಪದೇ ಸಿಬಂದಿಗಳು, ಸ್ಥಳೀಯರು ಹಾಗೂ ಪೊಲೀಸರು  ಶೋಧ  ನಡೆಸುತ್ತಿದ್ದಾರೆ.

ಶೌಚಾಲಯದ ಲ್ಲಿ ಬಾಲಕಿಯ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹೇಶ್ ನನ್ನು ಬಂಧಿಸಲಾಗಿತ್ತು. ಹೆಚ್ಚಿನ ಮಾಹಿತಿ ಕಲೆ ಹಾಕಲು ಕರೆ ತಂದಾಗ ಘಟನೆ ನಡೆದಿದೆ.

ಚಿತ್ರೀಕರಿಸಿದ ಮೊಬೈಲ್ ನ್ನು  ನೆಲ್ಲಿಕುಂಜೆಯ ಬಂದರು ಬಳಿ ಅಡಗಿಸಿಟ್ಟಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದು,  ಇದರಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಕರೆ ತರಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು