News Karnataka Kannada
Monday, April 22 2024
Cricket
ಕರ್ನಾಟಕ

ಸಮುದ್ರಕ್ಕೆ ಹಾರಿದ್ದ ಕಾಸರಗೋಡಿನ ಆರೋಪಿಯ ಶವ ಉಡುಪಿಯಲ್ಲಿ ಪತ್ತೆ

Photo Credit :

ಸಮುದ್ರಕ್ಕೆ ಹಾರಿದ್ದ ಕಾಸರಗೋಡಿನ ಆರೋಪಿಯ ಶವ ಉಡುಪಿಯಲ್ಲಿ ಪತ್ತೆ

ಕಾಸರಗೋಡು: ಕಾಸರಗೋಡು ಬಂದರು ಸಮೀಪ ಪೊಲೀಸರಿಂದ ಕಣ್ಣೆದುರಲ್ಲೇ ಸಮುದ್ರಕ್ಕೆ ಹಾರಿದ್ದ ಫೋಕ್ಸೋ ಆರೋಪಿಯ ಮೃತದೇಹ ಉಡುಪಿ ಸಮೀಪ ಕಡಲ ಕಿನಾರೆಯಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ.

ಕೂಡ್ಲು  ಕಾಳ್ಯಾಂಗಾಡ್ ನ ಮಹೇಶ್ ( 28) ಸಮುದ್ರಕ್ಕೆ ಹಾರಿದ್ದ ಆರೋಪಿ.

ಜುಲೈ 22 ಬೆಳಗ್ಗೆ  ಮಾಹಿತಿ ಕಲೆಹಾಕಲು ಕಲೆ ಹಾಕಲು  ಕಾಸರಗೋಡು ಬಂದರು ಬಳಿಗೆ ಕರೆ ತಂದ ಸಂದರ್ಭದಲ್ಲಿ ಈತ ತಪ್ಪಿಸಿ ಸಮುದ್ರಕ್ಕೆ ಹಾರಿದ್ದನು. ಈತನನ್ನು  ರಕ್ಷಿಸಲು ಜೊತೆಗಿದ್ದ ಪೊಲೀಸರು ಯತ್ನಿಸಿದರೂ  ಪ್ರಯೋಜನವಾಗಲಿಲ್ಲ.

ಮಹೇಶ್  ಗಾಗಿ ಮುಳುಗು ತಜ್ಞರು, ಕರಾವಳಿ ರಕ್ಷಣಾ ಪಡೆ ಸಿಬಂದಿ ಹಾಗೂ ಸ್ಥಳಿಯರು ಶೋಧ  ನಡೆಸಿದರೂ ಪತ್ತೆಯಾಗಿರಲಿಲ್ಲ. ಈ  ನಡುವೆ ಇಂದು ಬೆಳಗ್ಗೆ ಉಡುಪಿ ಸಮೀಪದ ಕಡಲ ಕಿನಾರೆಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಉಡುಪಿ ಪೊಲೀಸರು ನೀಡಿದ ಮಾಹಿತಿಯಂತೆ ಕಾಸರಗೋಡು ಪೊಲೀಸರು ತೆರಳಿದ್ದಾರೆ.

ಈತನ ವಸ್ತ್ರ ಹಾಗೂ  ಕೈಕೋಳದಿಂದ ಮೃತದೇಹ ಮಹೇಶ್ ನದ್ದೆಂದು  ಗುರುತಿಸಲಾಗಿದೆ.

ಶೌಚಾಲಯದಲ್ಲಿ ಅಪ್ರಾಪ್ತ  ಬಾಲಕಿಯ ದೃಶ್ಯವನ್ನು. ಮೊಬೈಲ್ ನಲ್ಲಿ ಚಿತ್ರೀಕರಿಸಿದ  ಪ್ರಕರಣಕ್ಕೆ ಸಂಬಂಧಪಟ್ಟಂತೆ ಫೋಕ್ಸೋ ಕಾಯ್ದೆ ಯಂತೆ   ಮಹೇಶ್ ನನ್ನು ಕಾಸರಗೋಡು ನಗರ ಠಾಣಾ  ಪೊಲೀಸರು ಬಂಧಿಸಿದ್ದರು. ದೃಶ್ಯ ಸೆರೆ ಹಿಡಿದ ಮೊಬೈಲನ್ನು ಕಾಸರಗೋಡು ಬಂದರು ಸಮೀಪ ಕಲ್ಲಿನೆಡೆಯಲ್ಲಿಟ್ಟಿರುವುದಾಗಿ ನೀಡಿದ ಮಾಹಿತಿಯಂತೆ ಮೊಬೈಲ್ ಕಸ್ಟಡಿಗೆ ಪಡೆಯಲು ಕರೆ ತಂದಿದ್ದಾಗ ತಪ್ಪಿಸಿ ಸಮುದ್ರಕ್ಕೆ ಹಾರಿದ್ದನು.  ಮೊಬೈಲನ್ನು ಬಳಿಕ ಪೊಲೀಸರು ಕಲ್ಲಿನೆಡೆಯಿಂದ ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು