News Karnataka Kannada
Tuesday, April 23 2024
Cricket
ಕರ್ನಾಟಕ

ಸಕ್ಕರೆ ಕಾರ್ಖಾನೆ ಕಾರ್ಮಿಕರ ತಡೆದು ಪ್ರತಿಭಟನೆ

Photo Credit :

ಸಕ್ಕರೆ ಕಾರ್ಖಾನೆ ಕಾರ್ಮಿಕರ ತಡೆದು ಪ್ರತಿಭಟನೆ

ಭಾರತೀನಗರ: ರೈತರು ಸರಬರಾಜು ಮಾಡಿದ ಕಬ್ಬಿನ ಬಾಕಿ 35 ಕೋಟಿ ಹಣಕ್ಕಾಗಿ ಇಲ್ಲಿನ ಶ್ರೀ ಚಾಮುಂಡೇಶ್ವರಿ ಕಾರ್ಖಾನೆ ವಿರುದ್ಧ ರೈತರು ರೊಚ್ಚಿಗೆದ್ದು ಕಾರ್ಮಿಕರನ್ನು ಕೆಲಸಕ್ಕೆ ತೆರಳದಂತೆ ಅಡ್ಡಗಟ್ಟಿ ಮುಖ್ಯದ್ವಾರದ ಬಳಿ ಅಹೋರಾತ್ರಿ ಪ್ರತಿಭಟನೆ ನಡೆಸಿದರು.

ರೈತರು ಬಾಕಿ ಹಣಕ್ಕಾಗಿ ಹಲವಾರು ಭಾರಿ ಪ್ರತಿಭಟನೆ ನಡೆಸಿದರೂ ಯಾವುದಕ್ಕೂ ಕ್ಯಾರೆ ಎನ್ನದೆ ರೈತರನ್ನು ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ವಿರುದ್ಧ ರೊಚ್ಚಿಗೆದ್ದ ನೂರಾರು ರೈತರು ಕಾರ್ಮಿಕರು ಕೆಲಸಕ್ಕೆ ತೆರಳುವ ವೇಳೆ ಮುಖ್ಯದ್ವಾರದ ಬಳಿ ಅಡ್ಡಗಟ್ಟಿ ಆಡಳಿತ ಮಂಡಳಿ ಬಾಕಿ ಹಣ ನೀಡುವವರೆಗೂ ಕಾರ್ಮಿಕರು ಒಳಪ್ರವೇಶ ಮಾಡಬೇಡಿ ಎಂದು ತಾಕೀತು ಮಾಡಿ ಪ್ರತಿಭಟನೆ ಪ್ರಾರಂಭಿಸಿದರು.

ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ ಆರೇಳು ತಿಂಗಳು ಕಳೆದರೂ ಹಣ ಪಾವತಿ ಮಾಡಲು ವಿಳಂಬ ಮಾಡುತ್ತಿದ್ದು, ಇದರಿಂದ ರೈತರು ಆರ್ಥಿಕ ಮುಗ್ಗಟ್ಟಿಗೆ ಸಿಕ್ಕುವಂತೆ ಮಾಡಿದ್ದಾರೆ. ಹಣ ಪಾವತಿಸುವಂತೆ ಕೇಳಲು ತೆರಳಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಪ್ರತಿಭಟಿಸುವ ವೇಳೆ ಬಾಕಿ ಹಣ ಪೂರ್ತಿ ಪಾವತಿಸುತ್ತೇವೆಂದು ನಾಲ್ಕೈದು ಬಾರಿ ಕಾಲಾವಕಾಶ ಕೇಳಿಕೊಂಡಿದ್ದರು. ಆದರೂ ಸಹ ತಿಂಗಳುಗಳು ಉರುಳಿದರೂ ರೈತರ ಬಾಕಿ ಮಾತ್ರ ಪಾವತಿಯಾಗಿಲ್ಲವೆಂದು ಗುಡುಗಿದರು.

ಸಾಲ ಮಾಡಿ ಕಬ್ಬು ಬೆಳೆದು ಕಾರ್ಖಾನೆಗೆ ಸಾಗಿಸಿ ಅವರಿಂದ ಹಣ ಪಡೆಯಲು ಅಲೆಯುತ್ತಿದ್ದರೂ ಸಹ ಈ ಬಗ್ಗೆ ಯಾವುದೇ ಕ್ರಮ ವಹಿಸದೇ ಆಡಳಿತ ಮಂಡಳಿ ರೈತರನ್ನು ಗೋಳಾಡಿಸುತ್ತಿದ್ದಾರೆಂದು ಹರಿಹಾಯ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು