News Karnataka Kannada
Monday, April 22 2024
Cricket
ಕರ್ನಾಟಕ

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಅಂಧ ಕುಟುಂಬಕ್ಕೆ ಮಾಸಾಶನ ವಿತರಣೆ

Photo Credit :

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ಅಂಧ ಕುಟುಂಬಕ್ಕೆ ಮಾಸಾಶನ ವಿತರಣೆ

ತುಮಕೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ತುಮಕೂರು ನಗರದ ಮರಳೂರು ದಿಣ್ಣೆಯ 5 ಅಂಧ ಕುಟುಂಬಗಳಿಗೆ ತಲಾ ಸಾವಿರ ರೂ.ಗಳ ಮಾಸಾಶನವನ್ನು ವಿತರಿಸಲಾಯಿತು.

ಈ ವೇಳೆ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಜಯಲಕ್ಷ್ಮೀ ಮಾತನಾಡಿ, ನಮ್ಮ ಸಂಸ್ಥೆಯಿಂದ ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ಒಂದೊತ್ತಿನ ಊಟಕ್ಕೂ ತೊಂದರೆ ಇರುವಂತವರಿಗೆ ಅವರ ಅಗತ್ಯತೆ ಪೂರೈಸಲು ಸಾವಿರ ರೂಗಳ ಮಾಸಾಶನವನ್ನು ನೀಡುತ್ತಿದ್ದೇವೆ. ಜಿಲ್ಲಾಯಾದ್ಯಂತ ಸುಮಾರು ಆರುನೂರು ಕುಟುಂಬಗಳಿಗೆ ಈ ರೀತಿಯ ಮಾಸಾಶನವನ್ನು ನೀಡಿದ್ದಾಗಿ ತಿಳಿಸಿದರು.

ತಾಲೂಕು ಯೋಜನಾಧಿಕಾರಿ ಚನ್ನಕೇಶವ ಮಾತನಾಡಿ, ಮರಳೂರು ದಿಣ್ಣೆಯಲ್ಲಿ ಕುಟುಂಬದ ಎಲ್ಲ ಸದಸ್ಯರು ಹುಟ್ಟು ಅಂಧರಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹಾಡು ಹೇಳಿಕೊಂಡು ತುತ್ತಿನ ಚೀಲವನ್ನ ತುಂಬಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ನಮಗೆ ತಿಳಿಯಿತು. ಮಾಹಿತಿ ಬಂದ ನಂತರ ವಾಸ್ತವವಾಗಿ ಆ ಕುಟುಂಬವನ್ನ ಭೇಟಿ ಮಾಡಿ  ಪರಿಶೀಲಿಸಿ, ಅವರ ಸಂಕಷ್ಟದ ಜೀವನದ ಬಗ್ಗೆ ಸಂಸ್ಥೆಯ ಹಿರಿಯ ಗಮನಕ್ಕೆ ತರಲಾಗಿದ್ದು ಅದರ ಫಲವಾಗಿ ಇಂದು ಸಂಸ್ಥೆಯಿಂದ ಮಂಜುನಾಥ ಸ್ವಾಮಿಯ ಪ್ರಸಾದದ ರೀತಿಯಲ್ಲಿ ಈ 5 ಕುಟುಂಬಗಳಿಗೆ ತಲಾ 1,000 ಸಾವಿರದಂತೆ ಮಾಸಾಶನ ನೀಡುತ್ತಿದ್ದೇವೆ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ಹನುಮಂತರಾಜು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಅವರು ಮತ್ತು ಧರ್ಮಸ್ಥಳ ಸಂಸ್ಥೆಯವರು ಮಾಡುತ್ತಿರುವ ಕಾರ್ಯ ಸ್ತುತ್ಯಾರ್ಹ, ಬಹುಶಃ ಒಂದು ಸರ್ಕಾರ ಮಾಡುವಂತಹ ಕೆಲಸಗಳನ್ನ ಸದರಿ ಸಂಸ್ಥೆ ಮಾಡುತ್ತಿದೆ. ಬಡವರ ರೈತರ ಮಹಿಳೆಯರ ಸಮುದಾಯಗಳ ಆರ್ಥಿಕ ಸ್ವಾವಲಂಬನೆಗೆ ಸಂಸ್ಥೆಯು ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿವಲಕ್ಷ್ಮೀ ಹಾಗೂ ಒಕ್ಕೂಟದ ಪದಾಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು