News Karnataka Kannada
Sunday, April 14 2024
Cricket
ಕರ್ನಾಟಕ

ಶಿವಮೊಗ್ಗದಲ್ಲಿ ಸರ್ಕಾರ ವಿಧಿಸಿದ ಲಾಕ್ ಡೌನ್ ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಖಂಡಿಸಿದೆ

Photo Credit :

ಶಿವಮೊಗ್ಗದಲ್ಲಿ ಸರ್ಕಾರ ವಿಧಿಸಿದ ಲಾಕ್ ಡೌನ್ ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಖಂಡಿಸಿದೆ

ಶಿವಮೊಗ್ಗ: ಸರ್ಕಾರದ ಜೋಕ್ ಲಾಕ್ ಡೌನ್ ಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಖಂಡಿಸಿದೆ. ವಾರದಲ್ಲಿ ನಾಲ್ಕು ದಿನದ ಸಂಪೂರ್ಣ ಲಾಕ್ ಡೌನ್ ನ್ನ ಅಲ್ಪಸಂಖ್ಯಾತರನ್ನ ನಿಗ್ರಹಿಸುವ ಸಲುವಾಗಿಯೇ ಜಾರಿಗೊಳಿಸಲಾಗುತ್ತಿದೆ ಎಂದು ಒಕ್ಕೂಟ ಗಂಭೀರ ಆರೋಪ ಮಾಡಿದೆ.

 

ಕೊರೊನ ಲಾಕ್ ಡೌನ್ ನಿಯಾಮವಳಿಯಲ್ಲಿ ಬದಲಾವಣೆ ತಂದು ಶಿವಮೊಗ್ಗ ನಗರಕ್ಕೆ ಗುರುವಾರದಿಂದ ಭಾನುವಾರದವರೆಗೆ ಹೊಸ ನಿಯಮ ಜಾರಿಗೊಳಿಸಿರುವುದನ್ನು ದುರುದ್ದೇಶಿತಪೂರಕವಾಗಿದೆ ಎಂದು ಒಕ್ಕೂಟದ ಶ್ರೀಪಾಲ್, ಮುದಾಸೀರ್ ಅಹ್ಮದ್, ಶಿ.ಜು.ಪಾಶ, ಡಿಎಸ್ ಎಸ್ ಗುರುಮೂರ್ತಿ, ಪ್ರೊ.ರಾಜೇಂದ್ರ ಚೆನ್ನಿ ಆರೋಪಿಸಿದ್ದಾರೆ.

 

ಕೊರೊನ ಮಹಾಮಾರಿ ವ್ಯಾಪಕವಾಗಿದ್ದರಿಂದ ಜನರಿಗೆ ಸೊಂಕು ತಗಲದಂತೆ ಕಳೆದ ಕೆಲವುದಿನಗಳಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಜವಾಬ್ದಾರಿಯುತ ನಾಗರೀಕರು ಕಟ್ಟು ನಿಟ್ಟಾಗಿ ನಿಯಮ ಪಾಲಿಸುತ್ತಿದ್ದಾರೆ.

 

ಸರ್ಕಾರದ ಲಾಕ್ ಡೌನ್ ನಿಯಾಮವಳಿ ಪ್ರಕಾರ, ಬೆಳಿಗ್ಗೆ 6 ರಿಂದ 10 ರ ಸಮಯದಲ್ಲಿ ಅಗತ್ಯವಸ್ತುಗಳ ಖರೀದಿಗೆ ಅನುವು ಮಾಡಿಕೊಡಲಾಗಿದೆ. ಇದರಿಂದ ನಾಗರಿಕರಿಗೂ ಅನುಕೂಲಕರವಾಗಿತ್ತು ಮತ್ತು ಇದರಿಂದ ಜೀವನೋಪಾಯಕ್ಕಾಗಿ ಹಣ್ಣು, ತರಕಾರಿ ಮಾರುವ ಹಲವರಿಗೆ ಅನುಕೂಲವಾಗಿತ್ತು,

 

ಆದರೆ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಸುದ್ದಿಗೋಷ್ಠಿ ನಡೆಸಿ, ಶಿವಮೊಗ್ಗ ನಗರದಲ್ಲಿ ಗುರುವಾರದಿಂದ ಭಾನುವಾರದವರೆಗೂ ಯಾರೂ ಮನೆಯಿಂದ ಅಗತ್ಯ ವಸ್ತುಗಳ ಖರೀದಿಗೂ ಹೊರ ಬರುವ ಹಾಗಿಲ್ಲವೆಂದು ಹೇಳಿರುವುದು ಖಂಡನೀಯ ಎಂದು ಅವರುಗಳು ತಿಳಿಸಿದ್ದಾರೆ.

 

ಇದು ಉಸ್ತುವಾರಿ ಸಚಿವರ ದುರುದ್ದೇಶಪೂರಿತ ತೀರ್ಮಾನವಾಗಿದೆ. ಇವರಿಗೆ ನಾಗರೀಕರ ಹಿತಕ್ಕಿಂತ ಬರುವ ರಂಜಾನ್ ಹಬ್ಬದಲ್ಲಿ ಅಲ್ಪ ಸಂಖ್ಯಾತ ಕೋಮಿನವರಿಗೆ ತೊಂದರೆ ಆಗಲಿ ಎಂಬ ದುರುದ್ದೇಶವೇ ಇದ್ದಂತೆ ಕಾಣುತ್ತಿದೆ. ಉಸ್ತುವಾರಿ ಸಚಿವರ ಈ ತೀರ್ಮಾನವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದ್ದಾರೆ.

 

ಹಲವು ರೋಗಿಗಳು ಹೋಮ್ ಐಸೋಲೆಷನ್ ನಲ್ಲಿರುವವರು ಸೇರಿದಂತೆ ಹಸುಗೂಸುಗಳು, ವಯೋವೃದ್ದರಿಗೆ ಕೆಲವು ಅಗತ್ಯ ವಸ್ತುಗಳು ಬೇಕೇಬೇಕು. ನಗರದ ನಾಗರೀಕರ ಹಿತದೃಷ್ಟಿಯಿಂದ ಯಾವ ರೀತಿಯಲ್ಲಿ ಬೆಳಿಗ್ಗೆ 6 ರಿಂದ 10 ರವರೆಗಿನ ರಿಯಾಯಿತಿ ಇತ್ತೋ ಅದನ್ನೇ ಮುಂದುವರೆಸಲು ಒಕ್ಕೂಟ ಒತ್ತಾಯಿಸಿದೆ.

 

ನಾಗರೀಕ ಸರ್ಕಾರವೊಂದು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಇಡೀ ಜಗತ್ತೇ ಕೊರೊನದಂತಹ ಮಹಾಮಾರಿಯ ಆತಂಕದಲ್ಲಿರುವಾಗ ಆಳುವ ಸರ್ಕಾರದ ಮಂತ್ರಿಯೊಬ್ಬರ ಕೋಮುದ್ವೇಷಕ್ಕೆ ಜನರ ನಾಗರಿಕ ಹಕ್ಕುಗಳನ್ನು ಬಲಿಕೊಡಬಾರದೆಂದು ಈ ಮೂಲಕ ಸರ್ಕಾರಕ್ಕೆ ತಿಳಿಸಿದ್ದಾರೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು