News Karnataka Kannada
Thursday, April 18 2024
Cricket
ಕರ್ನಾಟಕ

ಶಿವಪೀಠ ಹತ್ತಿ ಪೂಜೆ ಮಾಡುತಿದ್ದ ಬಳ್ಳಾರಿಯ ಅರ್ಚಕ ಇನ್ನಿಲ್ಲ

Photo Credit :

ಶಿವಪೀಠ ಹತ್ತಿ ಪೂಜೆ ಮಾಡುತಿದ್ದ ಬಳ್ಳಾರಿಯ ಅರ್ಚಕ ಇನ್ನಿಲ್ಲ

ಬಳ್ಳಾರಿ: ಶಿವಪೀಠದ ಮೇಲೇರಿ ನಿತ್ಯವೂ ಪೂಜೆ ಸಲ್ಲಿಸಿ ಜಗತ್ತಿನ ಗಮನ ಸೆಳೆದವರು ಹಂಪಿಯ ಬಡವಿಲಿಂಗ ದೇವಸ್ಥಾನದ ಅರ್ಚಕ ಕೃಷ್ಣ ಭಟ್‌. ಶಿವನ ದೇವಸ್ಥಾನಕ್ಕೆ ಹೋಗುವವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ, ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಅರ್ಚಕ ಕೃಷ್ಣ ಭಟ್‌ ತಮ್ಮ 87ನೇ ವಯಸ್ಸಿನಲ್ಲಿ ಇಂದು ಶಿವನ ಪಾದ ಸೇರಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಾಸರವಳ್ಳಿಯ ಕೃಷ್ಣ ಭಟ್‌ ಅವರು 1979ರಲ್ಲಿ ಹಂಪಿಗೆ ಬಂದು ನೆಲೆಸಿದ್ದವರು. ಅಂದಿನಿಂದ ಬಡವಿ ಲಿಂಗಕ್ಕೆ ಪೂಜೆ ಮಾಡುತ್ತಿದ್ದರು. ವಯೋಸಹಜ ಕಾಯಿಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ವರ್ಷ ಪೂಜೆ ನಿಲ್ಲಿಸಿದ್ದರು. ಅವರ ಮಗ ಸದ್ಯ ಈ ಲಿಂಗದ ಪೂಜೆ ಮಾಡುತ್ತಿದ್ದಾರೆ.

ಹಂಪಿಯ ಬಡವಿಲಿಂಗದ ಭಕ್ತರ ಕಣ್ಣಿಗಷ್ಟೇ ಕಾಣಿಸುತ್ತಿದ್ದ ಕೃಷ್ಣ ಭಟ್‌ ಅವರು ಸಾಮಾಜಿಕ ಜಾಲತಾಣದಿಂದ ಬೆಳಕಿಗೆ ಬಂದವರು. ಇವರ ಪ್ರಭಾವ ಎಷ್ಟಿತ್ತು ಎಂದರೆ ಹಂಪಿಗೆ ಇವರನ್ನು ನೋಡಲು ಹೋಗುವವರ ಸಂಖ್ಯೆಯೇ ಅಧಿಕವಾಗಿತ್ತು. ಸರಳ ಜೀವನದ ಒಂದು ಉದಾಹರಣೆಯಂತಿದ್ದ ಭಟ್ಟರು ಅವಕಾಶ ಸಿಕ್ಕಾಗ ಕುತೂಹಲಿಗರೊಂದಿಗೆ ಮಾತಿಗೂ ಸಿಗುತ್ತಿದ್ದರು. ಹಾಗಾಗಿ ಜಾಲತಾಣದ ಹೀರೋ ಆಗಿದ್ದವರಿವರು. ಅವರ ಜತೆ ಸೆಲ್ಫಿ ತೆಗೆಸಿಕೊಂಡು ಅವರ ಬಗ್ಗೆ ಬರೆದವರಿಗಂತೂ ಲೆಕ್ಕವೇ ಇಲ್ಲ.

ನೀರಿನೊಳಕ್ಕೆ ಇಳಿದು ಇಷ್ಟು ವಿಶಾಲವಾಗಿರುವ ಶಿವಲಿಂಗಕ್ಕೆ ಕೃಷ್ಣ ಭಟ್‌ ಅವರು ಪೂಜೆ ಸಲ್ಲಿಸಲು ಶಿವನ ಪಾಣಿಪೀಠವನ್ನು ಏರಲೇಬೇಕಿತ್ತು. ಆದ್ದರಿಂದ ಪಾಣಿಪೀಠ ಏರಿ ಶಿವನ ಪೂಜೆ ಸಲ್ಲಿಸುತ್ತಿದ್ದ ಏಕೈಕ ವ್ಯಕ್ತಿ ಎಂದು ಇವರು ಹೆಸರುವಾಸಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು