News Karnataka Kannada
Tuesday, April 23 2024
Cricket
ಕರ್ನಾಟಕ

ವೆಂಟಿಲೇಟರ್ ಕೊರತೆಯಿಂದ ಶಿಕಾರಿಪುರದ ಸೋಂಕಿತ ಸಾವು

Photo Credit :

ವೆಂಟಿಲೇಟರ್ ಕೊರತೆಯಿಂದ ಶಿಕಾರಿಪುರದ ಸೋಂಕಿತ ಸಾವು

ಶಿವಮೊಗ್ಗ: ವೆಂಟಿಲೇಟರ್ ಸಮಸ್ಯೆಯೇ ಇಲ್ಲವೆನ್ನುತ್ತಿದ್ದ ಸಚಿವರ ಮತ್ತು ಅಧಿಕಾರಿಗಳ ಹೇಳಿಕೆ ಈ ದೃಶ್ಯ ಸುಳ್ಳು ಮಾಡಿದೆ.

 

ಶಿಕಾರಿಪುರದ ಆನಂದ್(46) ಎಂಬ ವ್ಯಕ್ತಿಗೆ ಸೋಂಕು ತಗುಲಿದೆ. ಮೆಗ್ಗಾನ್ ಗೆ ನಿನ್ನೆ ಕರೆದುಕೊಂಡು ಬರಲಾಗಿದೆ. ವೆಂಟಿಲೇಟರ್ ಬೇಕಾದ ವ್ಯಕ್ತಿಗೆ ಕೇವಲ ಆಕ್ಸಿಜನ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ವೆಂಟಿಲೇಟರ್ ಇಲ್ಲದ ಕಾರಣ ವ್ಯಕ್ತಿ ನರಳಿ ನರಳಿ ಸಾವನ್ನಪ್ಪಿದ್ದಾನೆ.

 

ಐಸಿಯುಗೆ ಶಿಫ್ಟ್ ಮಾಡಬೇಕಾದ ವ್ಯಕ್ತಿಯನ್ನ ಕೇವಲ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇಲ್ಲಿನ ಬೆಡ್ ವ್ಯವಸ್ಥೆ ಬಗ್ಗೆನೂ ಸರಿಯಾದ ಮಾಹಿತಿಗಳನ್ನ ಅಧಿಕಾರಿಗಳು ಹೇಳುವುದಿಲ್ಲ.

 

ಆದರೆ ಕೋವಿಡ್ ರೋಗಿಗಳಿಗೆ O² ಬೆಡ್ ಇಲ್ಲವೆಂಬ ಬೋರ್ಡ್ ನಿನ್ನೆಯೂ ಸಹ ಮುಂದು ವರೆದಿತ್ತು. ಮೇ.4 ರ ಅಂಕಿ ಅಂಶದ ಪ್ರಕಾರ ಆಕ್ಸಿಜನ್ ಬೆಡ್ 400 ಯಾವುದೇ ಖಾಲಿ ಇಲ್ಲ. ವೆಂಟಿಲೇಟರ್ 30 ಯಾವುದೇ ಖಾಲಿ ಇಲ್ಲ ಹಾಗೂ ಹೆಚ್ ಎಫ್ ಎನ್ ಸಿ ಬೆಡ್ 20 ಯಾವುದೇ ಖಾಲಿ ಇಲ್ಲವೆಂಬ ಮಾಹಿತಿ ಪ್ರಕಟಿಸಲಾಗಿದೆ. ಆದರೆ ನಿನ್ನೆ 8 ನೇ ತಾರೀಕಿನ ಮಾಹಿತಿಯೇ ಇಲ್ಲ.

 

ಹೀಗಾಗಗಿ ಮೆಗ್ಗಾನ್ ನಲ್ಲಿ ದಿನಾ ಸಾಯುವವರಿಗೆ ಅಳುವವರು ಯಾರು? ಸೋಂಕಿತನ ದಾಖಲಾತಿ ಮತ್ತು ಸೋಂಕಿತನ ಸಾವು ಕೇವಲ ಅಂಕಿಸಂಖ್ಯೆಗೆ ಮೀಸಲಾದಂತೆ ಕಾಣುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು