News Karnataka Kannada
Friday, April 19 2024
Cricket
ಕರ್ನಾಟಕ

ವೀರಯೋಧ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆ ಅನಾವರಣ

Photo Credit :

ವೀರಯೋಧ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ಪ್ರತಿಮೆ ಅನಾವರಣ

ಮಡಿಕೇರಿ: ಭಾರತ-ಪಾಕ್ ನಡುವಣ 1965ರ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಹುತಾತ್ಮರಾದ ವೀರಯೋಧ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಅತ್ಯಾಕರ್ಷಕ ಪ್ರತಿಮೆಯನ್ನು, ಅವರ 55ನೇ ಪುಣ್ಯ ಸ್ಮರಣೆಯ ದಿನವಾದ ಸೋಮವಾರ ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿಯ ವೃತ್ತದಲ್ಲಿ ಅನಾವರಣಗೊಳಿಸಲಾಯಿತು.

ಅಜ್ಜಮಾಡ ಕುಟುಂಬಸ್ಥರು, ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ಸ್ಮಾರಕ ಟ್ರಸ್ಟ್ ಮತ್ತು ಕೊಡವ ಮಕ್ಕಡ ಕೂಡದ ಸಾಂಘಿಕ ಪ್ರಯತ್ನದ ಮೂಲಕ, ಯುವ ಸಮೂಹಕ್ಕೆ ಪ್ರೇರಕ ಶಕ್ತಿಯಾಗಲೆಂಬ ಆಶಯದೊಂದಿಗೆ ಕಂಚಿನ ಪ್ರತಿಮೆ ನಿರ್ಮಾಣಗೊಂಡಿದೆ. ಆರು ಮುಕ್ಕಾಲು ಅಡಿ ಎತ್ತರದ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಯನ್ನು ಏರ್ ಮಾರ್ಷಲ್ ಕೆ.ಸಿ. ನಂದಾ ಕಾರ್ಯಪ್ಪ(ನಿವೃತ್ತ) ಮತ್ತು ಸ್ಕ್ವಾ.ಲೀ. ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ ಅವರು ಅನಾವರಣಗೊಳಿಸಿ, ಪುಷ್ಪಾರ್ಚನೆಯ ಮೂಲಕ ಗೌರವ ವಂದನೆಯನ್ನು ಸಲ್ಲಿಸಿದರು. ಈ ಸಂದರ್ಭ ದೇವಯ್ಯರ ಪುತ್ರಿ ಪ್ರೀತ ದೇವಯ್ಯ ಹಾಗೂ ಹಾಜರಿದ್ದ ಗಣ್ಯರು ವೀರಯೋಧನಿಗೆ  ಗೌರವ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಏರ್.ಮಾರ್ಷಲ್ ಕೆ.ಸಿ.ಕಾರ್ಯಪ್ಪ( ನಿವೃತ್ತ) ಅವರು, ಸರಳ ಕಾರ್ಯಕ್ರಮದ ಐದೂವರೆ ದಶಕಗಳ ಹಿಂದೆ, ಇದೇ ದಿನದಂದು ಶತ್ರು ರಾಷ್ಟ್ರದ ಶಕ್ತಿ ಶಾಲಿ ಯುದ್ಧ ವಿಮಾನವನ್ನು ತಮ್ಮ ಮಿಸ್ಟಿ ಏರ್ ಕ್ರಾಫ್ಟ್ ಮೂಲಕ ಹೊಡೆದುರುಳಿಸಿ ಸಾಹಸ ಮೆರೆಯುವ ಮೂಲಕ ಸ್ಕ್ವಾಡರ್ನ್ ಲೀಡರ್ ದೇವಯ್ಯ ಅವರು ಅಸುನೀಗುತ್ತಾರೆ. ಇದು ಭಾರತ ಮಾತೆಗೆ ಅವರು ನೀಡಿರುವ ಪರಮೋಚ್ಛ ಬಲಿದಾನವೆಂದು ಸ್ಮರಿಸಿಕೊಂಡರು.

ತಮ್ಮ ಅತ್ಯುನ್ನತ ಸೇವಾ ಕಾರ್ಯಕ್ಕೆ ಮಹಾವೀರ ಚಕ್ರ ಪುರಸ್ಕಾರವನ್ನು ಪಡೆದ ಕೊಡಗಿನ ಇಬ್ಬರು ವೀರ ಪುತ್ರರಲ್ಲಿ ಸ್ಕ್ವಾಡರ್ನ್ ಲೀಡರ್ ದೇವಯ್ಯ ಅವರು ಒಬ್ಬರಾಗಿದ್ದು, ಮತ್ತೊಬ್ಬರು ಪುಟ್ಟಿಚಂಡ ಗಣಪತಿಯವರಾಗಿದ್ದಾರೆ. ರಾಷ್ಟ್ರ ರಕ್ಷಣೆಗಾಗಿ ಸಲ್ಲಿಸಿದ ಮಹೋನ್ನತ ಬಲಿದಾನವನ್ನು ಸ್ಮರಿಸಿಕೊಂಡು, ವೀರ ಯೋಧನ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ಅತ್ಯಂತ ಶ್ಲಾಘನೀಯವೆಂದರು.

ಸ್ಕ್ವಾಡರ್ನ್ ಲೀಡರ್ ದೇವಯ್ಯ ಅವರ ಪತ್ನಿ ಅಜ್ಜಮಾಡ ಸುಂದರಿ ದೇವಯ್ಯ ಅವರು, ತಮ್ಮ ಪತಿಯ ಪ್ರತಿಮೆಯನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಲು ಕಾರಣಕರ್ತರಾದವರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು