News Karnataka Kannada
Tuesday, April 23 2024
Cricket
ಕರ್ನಾಟಕ

ವಾಯು ಶುದ್ಧೀಕರಣ ಯಂತ್ರ : ನಗರದ ಗಾಳಿಯಲ್ಲಿ ಭಾರ ಲೋಹ ಪತ್ತೆ

Photo Credit :

ವಾಯು ಶುದ್ಧೀಕರಣ ಯಂತ್ರ : ನಗರದ ಗಾಳಿಯಲ್ಲಿ ಭಾರ ಲೋಹ ಪತ್ತೆ

ಬೆಂಗಳೂರು: ಇತ್ತೀಚಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಾದ್ಯಂತ ವಾಯುಮಾಲಿನ್ಯವನ್ನು ಎದುರಿಸುವ ಸಲುವಾಗಿ ವಾಯು ಶುದ್ಧೀಕರಣ ಘಟಕ ಸ್ಥಾಪಿಸುವ ಕುರಿತಾಗಿ ಸಾಫ್ಟ್‍ವೇರ್ ಕಂಪೆನಿಯಾಗಿರುವ ಆಟೆಕ್ಟ್ರಾನ್‍ನೊಂದಿಗೆ ಜ್ಞಾಪನಾಪತ್ರಕ್ಕೆ ಸಹಿ ಹಾಕಿದೆ. ಲ್ಯಾಬ್ ವರದಿಗಳ ಪ್ರಕಾರ ಸೀಸ ಹಾಗೂ ಕ್ರೋಮಿಯಂನಂತಹ ಭಾರವಾದ ಲೋಹಗಳು ನಗರದ ಗಾಳಿಯಲ್ಲಿ ದೊರಕಿದೆ.

ನಗರದ ವಾಯು ಶುದ್ಧೀಕರಣ ಯಂತ್ರಗಳಿಂದ ಸಂಗ್ರಹಿಸಿದ ವಾಯುಗಾಮಿ ಧೂಳಿನಿಂದ ಸೀಸ, ಸತು, ಕಬ್ಬಿಣ, ಮ್ಯಾಂಗನೀಸ್ ಮತ್ತು ಕ್ರೋಮಿಯಂ ದೊರಕಿರುವುದನ್ನು ಅಟೆಕ್ಟ್ರಾನ್‍ನ ಸಂಸ್ಥಾಪಕ ರಾಜೀವ್ ಕೃಷ್ಣ ಅವರು ದೃಢಪಡಿಸಿದ್ದಾರೆ. ನಗರದಲ್ಲಿ ಪಿಎಂ ಮಟ್ಟದ ಕಣಗಳ ಸಾಂದ್ರತೆಯು ಹೆಚ್ಚಿದ್ದು ಇದರ ಜೊತೆ ಭಾರ ಲೋಹಗಳು ಸೇರಿಕೊಂಡು ಮನುಷ್ಯರಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ.

ಲ್ಯಾಬ್ ವರದಿಗಳ ಪ್ರಕಾರ ಹಡ್ಸನ್ ಸರ್ಕಲ್‍ನಲ್ಲಿರಿಸಿದ್ದ ಏರ್ ಪ್ಯೂರಿಪೈರ್‍ನ ಪ್ರಾಥಮಿಕ ಪಿಲ್ಟರ್ ನಲ್ಲಿ 8 ಗಂಟೆಗಳ ಅವಧಿಯಲ್ಲಿ ಹತ್ತತ್ತಿರ 19 ಗ್ರಾಮ್‍ಗಳಷ್ಟು ಧೂಳು ಸಂಗ್ರಹವಾಗಿತ್ತು. ಇದರಲ್ಲಿನ ಸರಾಸರಿ ವಾಯುಗಾಮಿ ಧೂಳಿನಲ್ಲಿ ಪಿಎಂ ಮಟ್ಟದ ಕಣಗಳು, ಬ್ಲ್ಯಾಕ್ ಕಾರ್ಬನ್ ಮತ್ತು ಭಾರ ಲೋಹಗಳನ್ನು ಒಳಗೊಂಡಿತ್ತು. ಪ್ರತಿದಿನವೂ ವಾಯು ಶುದ್ಧೀಕರಣ ಯಂತ್ರಗಳಿಂದ 800 ಗ್ರಾಮ್‍ಗಳಿಂದ 1 ಕೆಜಿಯವರೆಗೆ ಧೂಳನ್ನು ಸಂಗ್ರಹಿಸಲಾಗುತ್ತಿದೆ.

ಇದಲ್ಲದೆ, ಸಂಚಾರ ದಟ್ಟಣೆಯ ಸಂದರ್ಭದ 8 ಗಂಟೆಗಳಲ್ಲಿ ಪಿಎಂ2.5 ಮಟ್ಟದ ಕಣಗಳನ್ನು ಸಂಗ್ರಹಿಸಿದಾಗ ಅದು 48 µg/m3 (1µg=10 ಲಕ್ಷ ಗ್ರಾಮ್ಸ್), ಡಬ್ಲ್ಯೂಹೆಚ್ ಒ ಮಿತಿಯು 10 µg/m3 ಆಗಿರುತ್ತದೆ. ಅದೇ ರೀತಿ ಪಿಎಂ10 ಕಣಗಳನ್ನು ಅದೇ ಸಮಯದಲ್ಲಿ ಸಂಗ್ರಹಿಸಿದಾಗ 90 µg/m3 ಬಂದಿದ್ದು, ಡಬ್ಲ್ಯೂಹೆಚ್‍ಒ ಪ್ರಕಾರ 20 µg/m3 ಇರಬೇಕು.

ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಇಕಾಲಜಿಕಲ್ ಸಯನ್ಸಸ್‍ನ ಪ್ರಾಧ್ಯಾಪಕ ಡಾ. ಟಿ. ವಿ. ರಾಮಚಂದ್ರ ಅವರ ಪ್ರಕಾರ ಬೆಂಗಳೂರಿನಲ್ಲಿ ಕಸ ಸುಡುವಿಕೆ, ಸಂಚಾರ ದಟ್ಟಣೆ ಹಾಗೂ ಕೈಗಾರಿಕೆಗಳ ಹೊರಸೂಸುವಿಕೆಯಿಂದ ಸಾಮಾನ್ಯವಾಗಿ ಲೋಹಗಳು, ಪ್ಲಾಸ್ಟಿಕ್, ಏರೋಸಾಲ್‍ಗಳನ್ನು ಒಳಗೊಂಡಿರುತ್ತದೆ. ಭಾರ ಲೋಹಗಳಾದ ಕ್ರೋಮಿಯಂ, ಕೋಪ್ಪರ್, ಮರ್ಕ್ಯುರಿ, ಸೀಸಗಳು ಗಾಳಿಯಲ್ಲಿ ಸೇರಿಕೊಳ್ಳಲು ಇದು ಕಾರಣವೊದಗಿಸಿದೆ.

ದತ್ತಾಂಶಗಳನ್ನು ಉಲ್ಲೇಖಿಸಿದ ಅವರು ಪಿಎಂ2.5 ಮತ್ತು ಪಿಎಂ10 ಕಣಗಳು ಡಬ್ಲ್ಯೂಹೆಚ್‍ಒ ಮಿತಿಗಿಂತ 8 ಪಟ್ಟು ಹೆಚ್ಚಾಗಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತವೆ ಎನ್ನುತ್ತಾರೆ.

“ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ ಪಿಸಿಬಿ) ದತ್ತಾಂಶವನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿತ್ತಿದ್ದು, ಮಾಲಿನ್ಯವನ್ನು ಮುಚ್ಚಿಟ್ಟು ಜನರಿಗೆ ವಂಚನೆ ಎಸಗುತ್ತಿರುವುದು ಸರಿಯಲ್ಲ” ಎಂದು ಡಾ. ರಾಮಚಂದ್ರ ಅಭಿಪ್ರಾಯಪಡುತ್ತಾರೆ.

ಸೆಂಟರ್ ಫಾರ್ ಸಯನ್ಸ್ ಸ್ಪಿರಿಚ್ಯುಆಲಿಟಿಯ ಕೇಂದ್ರದ ಮಕ್ಕಳ ವೈದ್ಯ ಡಾ. ಶಶಿಧರ ಗಂಗಯ್ಯ ಅವರ ಪ್ರಕಾರ ಭಾರ ಲೋಹಗಳಿಗೆ ಒಡ್ಡಿಕೊಳ್ಳುವುದರಿಂದ ಅನುವಂಶಿಕ ಮಟ್ಟದಲ್ಲಿ ಮಕ್ಕಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಕಸ ಸುಡುವುದರಿಂದ ಡಯಾಕ್ಸಿನ್‍ನಂತಹ ಅನಿಲಗಳು ಸಹ ಬಿಡುಗಡೆಯಾಗಿ ವಾತಾವರಣದಲ್ಲಿ ಸೇರಿಕೊಳ್ಳುತ್ತದೆ. ಇದು ಕ್ಯಾನ್ಸರ್‍ಗೆ ಕಾರಣವಾಗಬಹುದು.

ಇಂಟರ್‍ನ್ಯಾಶನಲ್ ಜರ್ನಲ್ ಫಾರ್ ಪ್ಯೂರ್ ಎಂಡ್ ಅಪ್ಲೈಡ್ ರೀಸರ್ಚ್ (ಐಜೆಪಿಎಆರ್) ತನ್ನ ಅಧ್ಯಯನದಲ್ಲಿ ಕಂಡುಕೊಂಡಂತೆ ಬೆಂಗಳೂರಿನ ಗಾಳಿಯಲ್ಲಿ ಅತಿಯಾದ ಭಾರ ಲೋಹಗಳಿವೆ. ಭಾರ ಲೋಹಗಳು ಮನುಷ್ಯನ ದೇಹಕ್ಕೆ ಅಪಾಯವನ್ನುಂಟು ಮಾಡುತ್ತದೆ. ಸತುವು ವಿವಿಧ ಚಾಯಪಚಯ ಕ್ರಿಯೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಮತ್ತು ಇದು ನೈಸರ್ಗಿಕ ಮತ್ತು ಮಾನವಜನ್ಯ ಮೂಲಗಳಿಂದಲೂ ತಯಾರಾಗುತ್ತವೆ, ಕಬ್ಬಿಣವು ಪರಿಸರಕ್ಕೆ ಅಪಾಯಕಾರಿಯೂ ಹೌದು.

ಕ್ಯಾಡ್ಮಿಯಂನ ಹೆಚ್ಚಿನ ಸಾಂದ್ರತೆಯು ಜೈವಿಕವಾಗಿ ಪ್ರಮುಖವಾದ ಅಣುಗಳ ಸಕ್ರಿಯ ತಾಣಗಳಲ್ಲಿ ಅಗತ್ಯ ಅಂಶಗಳನ್ನು ಬದಲಿಸುವ ಮೂಲಕ ಚಾಯಾಪಚಯ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಪರೋಕ್ಷವಾಗಿ ಪೌಷ್ಠಿಕಾಂಶದ ಕೊರತೆಗಳನ್ನು ಉಂಟುಮಾಡುತ್ತದೆ. ವಿಷಕಾರಿ ಅಂಶದ ಕೊರತೆಯಿರುವುದರಿಂದ ಮ್ಯಾಂಗನೀಸ್ ಬಹಳ ಕಡಿಮೆ ಅಪಾಯವನ್ನು ನೀಡುತ್ತವೆ.

ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾದ ಆಡಳಿತ ಸಮಿತಿ ಸದಸ್ಯ ಡಾ. ಯಲ್ಲಪ್ಪ ರೆಡ್ಡಿ ಅವರು ಮಾತನಾಡಿ ‘ನಗರದಲ್ಲಿನ ವಾಯುಮಾಲಿನ್ಯ ನೈಜ್ಯತೆಯನ್ನು ವಾಯುಶುದ್ಧೀಕರಣ ಯಂತ್ರಗಳು ನೈಜ್ಯ ದತ್ತಾಂಶಗಳ ಮೂಲಕ ತೋರಿಸಿಕೊಟ್ಟವು. ಕೆಎಸ್‍ಪಿಸಿಬಿಯು ವಂಚನೆಯ ಮೂಲಕ ದತ್ತಾಂಶಗಳನ್ನು ಮುಚ್ಚಿಡುತ್ತಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರ ಲೋಹಗಳು ಮನುಷ್ಯರಿಗಷ್ಟೇ ಅಪಾಯಕಾರಿಯಾಗಿಲ್ಲ, ಬದಲಾಗಿ ಬೆಂಗಳೂರಿನ ಗಿಡ, ಮರ, ಪ್ರಾಣಿಗಳು, ಜಲಮೂಲಗಳು ಮತ್ತು ಮಣ್ಣಿನ ಮೇಲೂ ಪರಿಣಾಮ ಬೀರುತ್ತವೆ ಎನ್ನುತ್ತಾರವರು.

ಎಲ್ಲದಕ್ಕೂ ನಗರದಲ್ಲಿರುವ ಕೈಗಾರಿಕೆಗಳನ್ನು ಮುಚ್ಚಬೇಕು, ಬೇರೆ ಯಾವುದೇ ಆಯ್ಕೆಗಳಿಲ್ಲ ಎಂದು ಅವರು ಸಲಹೆ ನೀಡುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು