News Karnataka Kannada
Sunday, April 21 2024
Cricket
ಕರ್ನಾಟಕ

ವರದಕ್ಷಿಣೆ ಪಿಡುಗಿಗೆ ಗೃಹಿಣಿ ಆತ್ಮಹತ್ಯೆ

Photo Credit :

ವರದಕ್ಷಿಣೆ ಪಿಡುಗಿಗೆ ಗೃಹಿಣಿ ಆತ್ಮಹತ್ಯೆ

ಚಾಮರಾಜನಗರ:  ವರದಕ್ಷಿಣೆ ಕಿರುಕುಳಕ್ಕೆ ಮನನೊಂದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಅಂಕನಶೆಟ್ಟಿಪುರದಲ್ಲಿ ನಡೆದಿದೆ.

ಕಳೆದ ಒಂದು ವರ್ಷದ ಹಿಂದೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದಿಂದ ಅಂಕನಶೆಟ್ಟಿಪುರ ಗ್ರಾಮದ ರಾಜೇಂದ್ರ ಎಂಬಾತನನ್ನು  ವಿವಾಹವಾಗಿದ್ದ  ತ್ರಿವೇಣಿ ಎಂಬ ಯುವತಿಯೇ ಆತ್ಮಹತ್ಯೆಮಾಡಿಕೊಂಡ ಗೃಹಿಣಿಯಾಗಿದ್ದಾರೆ.

ವರದಕ್ಷಿಣೆ ವಿಚಾರವಾಗಿ ತನಗೆ ಪ್ರತಿನಿತ್ಯ ಗಂಡನು ಸೇರಿದಂತೆ ಮನೆಯವರೆಲ್ಲ ಸೇರಿ ಕಿರುಕುಳ ನೀಡುತ್ತಿದ್ದರು ಎಂದು ತಮ್ಮ ಮಗಳು ತ್ರಿವೇಣಿ ಕೆಲದಿನಗಳ ಹಿಂದೆ ತಮಗೆ ತಿಳಿಸುತ್ತಿದ್ದಳು ಎಂದು ಆರೋಪಿಸುವ ಮೃತ ತ್ರಿವೇಣಿ ಪೋಷಕರು,  ತ್ರಿವೇಣಿಯ ಪತಿ ರಾಜೇಂದ್ರ ಹಾಗೂ ಈತನ ಮನೆಯವರ ವಿರುದ್ದ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಲ್ಲದೆ ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ ತ್ರಿವೇಣಿ ತನ್ನ ಗಂಡ ಹಾಗೂ ಮನೆಯವರು ತನ್ನೊಂದಿಗೆ ಪ್ರತಿ ದಿನ ಹೇಗೆ ನಡೆದುಕೊಳ್ಳುತ್ತಿದ್ದರು,  ಮಾನಸಿಕ ಕಿರುಕುಳ ನೀಡುತ್ತಿರುವ  ಬಗ್ಗೆ ಬರೆದುಕೊಂಡಿರುವ ಡೈರಿ ಹಾಗೂ ಪತಿ ರಾಜೇಂದ್ರನ ಮೊಬೈಲ್ ಅನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು