News Karnataka Kannada
Wednesday, April 17 2024
Cricket
ಕರ್ನಾಟಕ

ಲಾಕ್ ಡೌನ್ ನಿಂದ ಮೂರಾಬಟ್ಟೆಯಾದ ಚಾಲಕರ ಬದುಕು

Photo Credit :

ಲಾಕ್ ಡೌನ್ ನಿಂದ ಮೂರಾಬಟ್ಟೆಯಾದ ಚಾಲಕರ ಬದುಕು

ತಿ.ನರಸೀಪುರ: ಕೊರೊನಾದಿಂದ ಆಟೋ ಮತ್ತು ಕಾರು ಚಾಲಕರು, ಸಣ್ಣ ಪುಟ್ಟ ಆಟಿಕೆ ವಸ್ತುಗಳನ್ನು ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದವರ ಬದಕು ಮೂರಾಬಟ್ಟೆಯಾಗಿದ್ದು, ಮಧ್ಯಮ ವರ್ಗ ಹಾಗೂ ಬಡತನ ರೇಖೆಗಿಂತ ಕೆಳಗಿನ ಕುಟುಂಬ ವರ್ಗದವರ ಬದುಕಿನ ಸ್ಥಿತಿ ಹೇಳ ತೀರದಾಗಿದೆ.

ದಿನ ನಿತ್ಯದ ದುಡಿಮೆಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಕುಟುಂಬಗಳಿಗೆ ಸಹಾಯಧನ ನೀಡಲು ಸರ್ಕಾರ ಯೋಜನೆಯನ್ನು ಘೋಷಿಸಿ ಅದರಲ್ಲಿ ಆಟೋ ಮತ್ತು ಕಾರು ಚಾಲಕರ ಕುಟುಂಬಗಳಿಗೆ ತಲಾ 5 ಸಾವಿರ ರೂ.ಗಳನ್ನು ನೀಡಲಾಗುವುದೆಂದು ಆದೇಶ ಮಾಡಿತು. ಆದರೆ ಸರ್ಕಾರದ ಈ ಪ್ಯಾಕೇಜ್ ಬೆರಳೆಣಿಕೆಯಷ್ಟು ಚಾಲಕರಿಗೆ ಮಾತ್ರ ತಲುಪಿದ್ದು, ಇನ್ನುಳಿದವರಿಗೆ ಸರ್ಕಾರದ ನಿಬಂಧನೆಗಳು ಪರಿಹಾರ ಪಡೆಯಲು ತೊಡಕಾಗಿದೆ.

 

ತಾಲೂಕಿನಲ್ಲಿ ಸುಮಾರು 2000 ಕ್ಕೂ ಹೆಚ್ಚು ಆಟೊ ರಿಕ್ಷಾಗಳು ಹಾಗೂ 100 ಕ್ಕೂ ಹೆಚ್ಚು ಕಾರುಗಳಿದ್ದು ಇದರ ಮಾಲೀಕರು ಹಾಗೂ ಚಾಲಕರು ದಿನ ನಿತ್ಯ ಬಾಡಿಗೆ ರೂಪದಲ್ಲಿ ಸಂಪಾದಿಸಿದ ಹಣದಲ್ಲೇ ಕುಟುಂಬ ನಿರ್ವಹಣೆ, ವಾಹನದ ಸಾಲ ಹಾಗೂ ಸ್ವ ಸಹಾಯ ಸಂಘಗಳಿಂದ ಪಡೆದ ಸಾಲವನ್ನು ತುಂಬುತಿದ್ದರು ಆದರೆ ಕೊರೋನಾ ವೈರಸ್ ಬಂದು ಇವರ ಬದುಕನ್ನು ಕಿತ್ತುಕೊಂಡಿದೆ ಒಂದೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ.

 

ಕೋವಿಡ್ 19 ನಿಂದ ಭಯ ಭೀತರಾಗಿರುವ ಜನರು ಆಗಾಗ್ಗೆ ಸರ್ಕಾರ ವಿಧಿಸುತ್ತಿರುವ ಲಾಕ್ ಡೌನ್ ಇದರ ನಡುವೆ ತಾಲೂಕು ಮಟ್ಟದಲ್ಲಿ ಸಂಘ ಸಂಸ್ಥೆಯವರು ಏರುತ್ತಿರುವ ಲಾಕ್ ಡೌನ್ ನಿಂದ ಜನಸಾಮಾನ್ಯರು ಹೊರ ಬರುತ್ತಿಲ್ಲ ಇದರಿಂದ ಆಟೊ ಬಾಡಿಗೆ ನಡೆಯುತ್ತಿಲ್ಲ

 

20 ರಿಂದ 50 ರೂಪಾಯಿಗಳಿಗೆ ಬಾಡಿಗೆ, ಓಡಿಸುತ್ತಿರುವ ಆಟೋ ಚಾಲಕರು ಈ ಲಾಕ್ ಡೌನ್‍ನಿಂದ ತತ್ತರಿಸಿ ಹೋಗಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ದಿನಕ್ಕೆ 100 ರೂಪಾಯಿ ದುಡಿಯುವುದು ಕಷ್ಟವಾಗಿದೆ. ಇದರಲ್ಲೇ ಮಕ್ಕಳ ವಿದ್ಯಾಭ್ಯಾಸ, ಮನೆ ನಿರ್ವಹಣೆ, ಆಟೋ ಸಾಲದ ಕಂತು ನಿಭಾಯಿಸುವುದು ಕಷ್ಟ ಸಾಧ್ಯ ಎನ್ನುತ್ತಾರೆ ಆಟೋ ಚಾಲಕರು.

 

ಜಯ ಕರ್ನಾಟಕ ಆಟೋ ಸಂಘದ ಅಧ್ಯಕ್ಷ ರವಿ ಮಾತನಾಡಿ ದಿನ ನಿತ್ಯ ಕನಿಷ್ಟವೆಂದರೂ 1 ಸಾವಿರದ ಸಂಪಾದನೆ ಮಾಡುತ್ತಿದ್ದ ಆಟೋ ಚಾಲಕರಿಂದು 50 ರಿಂದ 100 ರೂಪಾಯಿ ಸಂಪಾದಿಸಲು ಹೆಣಗಾಡುತ್ತಿದ್ದಾರೆ ಹಾಗೂ ಈ ಅಲ್ಪ ಮೊತ್ತದ ಹಣದಲ್ಲಿ ಕುಟುಂಬ ನಿರ್ವಹಣೆ, ಆಟೋ ಸಾಲ ಸೇರಿದಂತೆ ಖಾಸಗಿಯವರಿಂದ ಪಡೆದ ಕೈ ಸಾಲ ಹೇಗೆ ತೀರಿಸುವುದು ಎಂಬ ಚಿಂತೆ ನಮ್ಮನ್ನ ಮಾನಸಿಕವಾಗಿ ಕುಗ್ಗಿಸಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು